ಪಾಲಿಬೆಟ್ಟ, ಆ. ೧೫: ಇಲ್ಲಿನ ಆಟೋ ಚಾಲಕ ಹಾಗೂ ಮಾಲೀಕರ ಸಂಘದ ವತಿಯಿಂದ ಪರಿಸರ ಜಾಗೃತಿ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಮಾತನಾಡಿದ ಜಿ.ಪಂ. ಮಾಜಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ, ವೈಜ್ಞಾನಿಕ ಕಸ ವಿಲೇವಾರಿ ಘಟಕ ಪ್ರಾರಂಭಿಸಿ ಶುಚಿತ್ವಕ್ಕೆ ಆದ್ಯತೆ ನೀಡಬೇಕಾಗಿದೆ. ಪ್ರಕೃತಿ ಸೌಂದರ್ಯದಿAದ ಕೂಡಿರುವ ಜಿಲ್ಲೆಯಲ್ಲಿ ಶುಚಿತ್ವ ಮರೆಯಾಗಿ ಪರಿಸರದ ಮೇಲೆ ಧಕ್ಕೆ ಬರುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಕಸ ವಿಲೇವಾರಿ ಸಮರ್ಪಕಗೊಳಿಸಲು ಶಾಶ್ವತ ಯೋಜನೆಯ ಅಗತ್ಯತೆ ಇದೆ. ಜಲಮೂಲಗಳು ಕಲುಷಿತಗೊಳ್ಳುವುದು ತಡೆಗಟ್ಟಬೇಕಾಗಿದೆ ಎಂದರು.
ಎಲ್ಲೆಂದರಲ್ಲಿ ತ್ಯಾಜ್ಯ ಹಾಕುವವರ ವಿರುದ್ಧ ಕಠಿಣ ಕ್ರಮದ ಅಗತ್ಯತೆ ಇದೆ. ಪ್ರಜ್ಞಾವಂತರು ಎಚ್ಚೆತ್ತುಕೊಂಡು ಸ್ವಚ್ಛ ಗ್ರಾಮಕ್ಕೆ ಪಣತೊಡಬೇಕೆಂದರು.
ಈ ಸಂದರ್ಭ ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ಅಧ್ಯಕ್ಷ ದುಜಾ ವೇಗಸ್, ಉಪಾಧ್ಯಕ್ಷ ರಾಜಪ್ಪ, ಕಾರ್ಯದರ್ಶಿ ಪ್ರಸಾದ್, ನಾರಾಯಣ, ಸಹಕಾರ ಸಂಘದ ನಿರ್ದೇಶಕ ಟಿ.ಜಿ. ವಿಜೇಶ್, ಅರಣ್ಯ ಅಧಿಕಾರಿ ಶಶಿಕುಮಾರ್, ಪೊಲೀಸ್ ಠಾಣೆಯ ಎಎಸ್ಐ ಮಂಜುನಾಥ್, ಪ್ರಮುಖರಾದ ಅಲಿಬ ಸೇರಿದಂತೆ ಇನ್ನಿತರರು ಹಾಜರಿದ್ದರು.