ಸುಂಟಿಕೊಪ್ಪ, ಆ. ೧೫: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಂಟಿಕೊಪ್ಪ ಕಾರ್ಯಕ್ಷೇತ್ರದ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಇಲ್ಲಿನ ಶ್ರೀಪುರಂ ದೇವಾಲಯದ ಆವರಣದಲ್ಲಿ ಶ್ರಮದಾನ ನಡೆಸಿ ಶುಚಿಗೊಳಿಸಿದರು.

ಶ್ರದ್ಧಾಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮದಡಿಯಲ್ಲಿ ಶ್ರಮದಾನ ಹಮ್ಮಿಕೊಳ್ಳಲಾಗಿತ್ತು. ದೇವಸ್ಥಾನ ಸಮಿತಿಯ ಅಧ್ಯಕ್ಷ ಬಿ.ಎಂ. ಸುರೇಶ್ ಚಾಲನೆ ನೀಡಿದರು. ಭಾಗ್ಯಲಕ್ಷಿö್ಮÃ, ಅಮೂಲ್ಯ, ಸೂರ್ಯ, ಶ್ರೀಕಂಠ, ಕಸ್ತೂರಿ, ಗಂಗೋತ್ರಿ, ವನಸಿರಿ, ಅಮೃತವರ್ಷಿಣಿ, ನಕ್ಷತ್ರ, ನೂತನ ಹಾಗೂ ನಾಗದೇವತೆ ಸಂಘದ ಸದಸ್ಯರುಗಳು ಶ್ರಮದಾನದಲ್ಲಿ ಪಾಲ್ಗೊಂಡರು.

ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಂಟಿಕೊಪ್ಪ ವಲಯ ಮೇಲ್ವಿಚಾರಕ ಸಂತೋಷ್, ಸೇವಾ ಪ್ರತಿನಿಧಿ ಚಿತ್ರ ಸುರೇಶ್, ಒಕ್ಕೂಟದ ಅಧ್ಯಕ್ಷೆ ಲೀಲಾವತಿ ಹಾಗೂ ಪದಾಧಿಕಾರಿಗಳು, ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಚಂದ್ರ, ಸ್ವಸಹಾಯ ಸಂಘದ ಸದಸ್ಯರು ಇದ್ದರು.