ವೀರಾಜಪೇಟೆ, ಆ. ೧೨: ದೇಶದ ಪ್ರಥಮ ಪ್ರಜೆ ರಾಷ್ಟçಪತಿಯೊಂದಿಗೆ ರಕ್ಷಾ ಬಂಧನ ಆಚರಿಸುವ ಅಪರೂಪದ ಘಳಿಗೆ ಕೊಡಗಿನ ಏಕಲವ್ಯ ಶಾಲೆ ವಿದ್ಯಾರ್ಥಿಗಳಿಗೆ ಒಲಿದು ಬಂತು.

ಬಾಳುಗೋಡು ಏಕಲವ್ಯ ಮಾದರಿ ವಸತಿ ಶಾಲೆಯ ವಿದ್ಯಾರ್ಥಿಗಳು ರಾಷ್ಟçಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ರಕ್ಷಾಬಂಧನವನ್ನು ಆಚರಿಸಿದರು.

ರಾಷ್ಟಿçÃಯ ಬುಡಕಟ್ಟು ವಿದ್ಯಾರ್ಥಿಗಳ ಶೈಕ್ಷಣಿಕ ಸಿಂಧು ಸಂಸ್ಥೆಯಿAದ ನವದೆಹಲಿಯಲ್ಲಿ ಆಯೋಜಿಸಿದ್ದ ರಾಷ್ಟçಪತಿ ರಕ್ಷಾಬಂಧನ ಕಾರ್ಯಕ್ರಮಕ್ಕೆ ರಾಜ್ಯದಿಂದ ರಾಯಚೂರು, ಬೆಳಗಾವಿ, ಕೋಲಾರ ಹಾಗೂ ಕೊಡಗು ಜಿಲ್ಲೆಗಳ ಬುಡಕಟ್ಟು ಸಮುದಾಯದ ವಸತಿ ಶಾಲೆಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ದ್ರೌಪದಿ ಮುರ್ಮು ಅವರು ಪ್ರತಿ ವರ್ಷ ವಿವಿಧ ವಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವವರೊಂದಿಗೆ ರಕ್ಷಾಬಂಧನ ಕಾರ್ಯಕ್ರಮವನ್ನು ಆಚರಿಸುವುದು ವೈಶಿಷ್ಟ÷್ಯವಾಗಿದ್ದು, ಅದರಂತೆ ಈ ವರ್ಷ ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳೊಂದಿಗೆ ರಕ್ಷಾಬಂಧನ ಕಾರ್ಯಕ್ರಮ ಆಚರಿಸುವ ಆಶಯ ಹೊಂದಿದ್ದರಿAದ ಅವರ ಕರೆಯ ಮೇರೆಗೆ ಬಾಳುಗೋಡು ಏಕಲವ್ಯ ಮಾದರಿ ವಸತಿ ಶಾಲೆಯ ಸಂಗೀತ ಶಿಕ್ಷಕಿ ಕುಮಾರಿ ಕೋಮಲ್ ಗುಪ್ತ ನೇತೃತ್ವದಲ್ಲಿ ವಿದ್ಯಾರ್ಥಿಗಳಾದ ೬ನೇ ತರಗತಿಯ ಎಲ್.ಎಂ. ಪ್ರತೀಕ್ಷ, ೭ ನೇ ತರಗತಿಯ ಸಿ.ಎಲ್. ಕನ್ನಿಕಾ. ೮ನೇ ತರಗತಿಯ ತನ್ವಿ ತಂಗಮ್ಮ, ೯ನೇ ತರಗತಿಯ ಎಚ್.ಕೆ. ನೇಹಾ ಮತ್ತು ೧೦ನೇ ತರಗತಿಯ ಕೆ.ಎಂ ಪ್ರಕೃತಿ ಭಾಗವಹಿಸಿ ವಿನೂತನ ಅನುಭವ ಪಡೆದುಕೊಂಡರು. ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ಶಾಲೆಯ ಶಿಕ್ಷಣದ ವಿಧಾನ, ಶೈಲಿ, ಪ್ರಗತಿ, ಮೂಲ ಸೌಕರ್ಯ ಹಾಗೂ ಅಗತ್ಯತೆಗಳ ಕುರಿತು ರಾಷ್ಟçಪತಿ ಚರ್ಚಿಸಿದರು.