ಕೂಡಿಗೆ, ಆ. ೧೦: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯಿಂದ ಮುಖ್ಯ ನಾಲೆಯ ಮೂಲಕ ಖಾರೀಫ್ ಬೆಳೆಗೆ ಈಗಾಗಲೇ ಕಾವೇರಿ ನೀರಾವರಿ ನಿಗಮದ ಸೂಚನೆಯಂತೆ ಹಾರಂಗಿ ನೀರಾವರಿ ಇಲಾಖೆಯ ಅಧಿಕಾರಿ ವರ್ಗದವರು ಮುಖ್ಯ ನಾಲೆಯ ಮೂಲಕ ಕಳೆದ ೧೫. ದಿನಗಳಿಂದಲೇ ನೀರು ಹರಿಸಿದ. ಹಿನ್ನೆಲೆಯಲ್ಲಿ ಕೊಡಗಿನ ಗಡಿ ಭಾಗದ ಅಚ್ಚುಕಟ್ಟು ಪ್ರದೇಶದ ರೈತರು ಭತ್ತದ ಬೆಳೆಯ ನಾಟಿ ಕಾರ್ಯ ವನ್ನು ಆರಂಭಿಸಿದ್ದಾರೆ.
ಕಳೆದ ತಿಂಗಳುಗಳಲ್ಲಿ ಬಿದ್ದ ಮಳೆಯಿಂದಾಗಿ ಸಸಿ ಮಡಿಗಳ ಗದ್ದೆಗಳನ್ನು ಸಿದ್ದತೆ ಮಾಡಿಕೊಂಡು ಭತ್ತದ ಬಿತ್ತನೆ ಬೀಜವನ್ನು ಸಸಿ ಮಡಿಗಳಿಗಾಗಿ ಸಿದ್ದ ಮಾಡಲಾಗಿದ್ದ ಗದ್ದೆಗಳಲ್ಲಿ ಬಿತ್ತನೆ ಮಾಡಿ ಸಸಿ ಮಡಿಗಳಲ್ಲಿ ಬೆಳೆದ ಸಸಿಗಳನ್ನು ಈಗಾಗಲೇ ನಾಲೆಯ ನೀರನ್ನು ಗದ್ದೆಗಳಿಗೆ ಬಳಕೆ ಮಾಡಿಕೊಂಡು ಉಳುಮೆ ಮಾಡಿ ನಾಟಿ ಕಾರ್ಯಕ್ಕೆ ಗದ್ದೆಗಳನ್ನು ಟ್ರಾಕ್ಟರ್ ಗಳ ಮೂಲಕ ಉಳುಮೆ ಮಾಡುವುದರ ಜೊತೆಯಲ್ಲಿ ಸಾವಯವ ಗೊಬ್ಬರದ ಸೊಪ್ಪು ಬಳ್ಳಿಗಳನ್ನು ತಂಡು ಮಾಡಿ ಗದ್ದೆಗಳಲ್ಲಿ ಹಾಕಿ ಉಳುಮೆ ಮಾಡುವ ಮೂಲಕ ಭತ್ತದ ನಾಟಿ ಕಾರ್ಯಕ್ಕೆ ಹಾರಂಗಿ ಅಚ್ಚುಕಟ್ಟು ಪ್ರದೇಶದ ರೈತರು ಸಿದ್ದರಾಗಿ ನಾಟಿಯನ್ನು ಆರಂಭಿಸಿದ್ದಾರೆ.
ಕೊಡಗಿನ ಗಡಿ ಭಾಗವಾದ ಶಿರಂಗಾಲದವರೆಗೆ ೫.೪೦೦ ಎಕರೆಗಳಷ್ಟು ಪ್ರದೇಶವು ಹಾರಂಗಿ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಾಗಿದ್ದು ಈ ಭಾಗದ ರೈತರು ಈ ಸಾಲಿನಲ್ಲಿ ಮೂರು ತಿಂಗಳ ಬೆಳೆಗಳು, ಸೇರಿದಂತೆ ಹೈಬ್ರೀಡ್ ಭತ್ತದ ತಳಿಯ ಸಸಿಗಳನ್ನು ಬೆಳೆಸಿ ನಾಟಿ ಕಾರ್ಯದಲ್ಲಿ ತೊಡಗಿರುವುದು ಕಂಡುಬರುತ್ತಿದೆ. ಈ ವ್ಯಾಪ್ತಿಯ ರೈತರು ಭತ್ತದ ನಾಟಿಯ ಸಂದರ್ಭದಲ್ಲಿ ಸಾವಯವ ಗೊಬ್ಬರದ ಜೊತೆಯಲ್ಲಿ ಮೇಲ್ ಗೊಬ್ಬರವಾಗಿ ರಾಸಾಯನಿಕ ಗೊಬ್ಬರಗಳನ್ನು ನಾಟಿಯ ಸಂದರ್ಭದಲ್ಲಿ ಗದ್ದೆಗಳಲ್ಲಿ ಹರಡಿ, ನಾಟಿ ಕಾರ್ಯವನ್ನು ಆರಂಭಿಸಿದ್ದಾರೆ.