ಕೂಡಿಗೆ, ಆ. ೧೦: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಳುವಾರ ಗ್ರಾಮದಲ್ಲಿರುವ ಶ್ರೀ ಬನಶಂಕರಿ ದೇವಾಂಗ ಸಂಘದ ವತಿಯಿಂದ ನೂಲು ಹುಣ್ಣಿಮೆಯ ಅಂಗವಾಗಿ ಜಾನಿವಾರದ ಹಬ್ಬ ಆಚರಣೆಯು ವಿವಿಧ ಪೂಜಾ ಕೈಂಕರ್ಯಗಳೊAದಿಗೆ ಶ್ರಧ್ಧಾಭಕ್ತಿಯಿಂದ ನೆರವೇರಿತು. ಇದರ ಅಂಗವಾಗಿ ಅಳವಾರದಮ್ಮನ ದೇವಸ್ಥಾನದಿಂದ ಮಹಿಳೆಯರು ಮತ್ತು ಪುರುಷರು ಸೇರಿ ಪಂಚ ಕಳಸದೊಂದಿಗೆ ಮಂಗಳವಾದ್ಯ ಸಮೇತವಾಗಿ ಹುಣ್ಣಿಮೆಯ ಪೂಜಾ ಕಾರ್ಯಕ್ರಮ ಅಯೋಜಿತ ಸ್ಧಳಕ್ಕೆ ಬಂದು, ಸ್ಧಳದಲ್ಲಿ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿ ನಂತರ ಸಂಘದ ಎಲ್ಲಾ ಸದಸ್ಯರು ರಕ್ಷಾ ಬಂಧನದೊAದಿಗೆ ಜನಿವಾರವನ್ನು ಧರಿಸಿಕೊಳ್ಳುವ ಕಾರ್ಯಕ್ರಮವು ನಡೆಯಿತು.
ಈ ಸಂದರ್ಭದಲ್ಲಿ ಬನಶಂಕರಿ ದೇವಾಂಗ ಸಂಘದ ಅಧ್ಯಕ್ಷ ಡಿ.ಆರ್. ಪ್ರೇಮ್ ಕುಮಾರ, ತೊರೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಪ್ರಕಾಶ್, ಸಹಕಾರ ಸಂಘದ ಉಪಾಧ್ಯಕ್ಷೆ ಗೌರಮಣಿ, ಸದಸ್ಯ ಮಹದೇವ, ಜಿಲ್ಲಾ ನೇಕಾರ ಸಮುದಾಯ ಒಕ್ಕೂಟದ ಅಧ್ಯಕ್ಷ ಟಿ.ಕೆ. ಪಾಂಡುರAಗ ಸೇರಿದಂತೆ ಸಂಘದ ನಿರ್ದೇಶಕರು, ಹಾಗೂ ನೂರಾರು ಕುಲಬಾಂಧವರು ಭಾಗವಹಿಸಿದ್ದರು. ನಂತರ ಸಹಭೋಜನ ನೆರವೇರಿತು.