ಚೆಯ್ಯಂಡಾಣೆ, ಆ. ೧೦: ವೀರಾಜಪೇಟೆ ವಲಯ ಎಸ್.ವೈ.ಎಸ್. ವತಿಯಿಂದ ಚಿಟ್ಟಡೆಯಲ್ಲಿ ಇಗ್ನೆöÊಟ್ ಮೀಟ್ ಲೀರ‍್ಸ್ ಕ್ಯಾಂಪ್ ನಡೆಯಿತು. ಚಿಟ್ಟಡೆ ಮದರಸ ಸಭಾಂಗಣದಲ್ಲಿ ಎಸ್.ವೈ.ಎಸ್. ವೀರಾಜಪೇಟೆ ಝೋನ್ ಅಧ್ಯಕ್ಷ ಹಂಝ ಮದನಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.

ಎಸ್.ವೈ.ಎಸ್. ಜಿಲ್ಲಾಧ್ಯಕ್ಷ ಮುನೀರ್ ಮಹ್ಳರಿ ಕಾರ್ಯಕ್ರಮ ಉದ್ಘಾಟಿಸಿದರು. ಎಸ್.ವೈ.ಎಸ್. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್, ಚಿಟ್ಟಡೆ ಮಹಲ್ ಖತೀಬ್ ಜಬ್ಬಾರ್ ಫಾಲಿಳಿ, ಎಸ್.ಎಸ್.ಎಫ್. ಜಿಲ್ಲಾಧ್ಯಕ್ಷ ಕಮರುದ್ದಿನ್ ಅನ್ವಾರಿ ಮಾತನಾಡಿದರು. ಉಮ್ಮರ್ ಸಖಾಫಿ ಚದಲಯಂ ಸಂಘಟನೆಯ ಮತ್ತು ಅದರ ಮಹತ್ವದ ಕುರಿತು ಉಪನ್ಯಾಸ ನೀಡಿದರು.

ಈ ಸಂದರ್ಭ ಎಸ್‌ವೈಎಸ್ ರಾಜ್ಯ ನಾಯಕರಾದ ಅಹ್ಮದ್ ಮದನಿ, ಜಿಲ್ಲಾ ಸಮಿತಿಯ ಇಸಭಾ ಕಾರ್ಯದರ್ಶಿ ಬಷೀರ್, ಕಲ್ಚರಲ್ ಕಾರ್ಯದರ್ಶಿ ಸಲಾಂ ಗೋಣಿಕೊಪ್ಪ, ಮಾಧ್ಯಮ ಕಾರ್ಯದರ್ಶಿ ಅಶ್ರಫ್, ವೀರಾಜಪೇಟೆ ಝೋನ್‌ನ ಶಿಯಾಬುದ್ದಿನ್ ತಂಙಳ್, ಚಿಟ್ಟಡೆ ಜಮಾಅತ್ ಅಧ್ಯಕ್ಷ ಅಬ್ಬಾಸ್, ಸ್ವಾಗತ ಸಮಿತಿಯ ಅಧ್ಯಕ್ಷ ಫಕರುದ್ದಿನ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ವೀರಾಜಪೇಟೆ ಝೋನ್ ಪ್ರಧಾನ ಕಾರ್ಯದರ್ಶಿ ಖಾದರ್ ಸಅದಿ ಸ್ವಾಗತಿಸಿ, ದಅವಾ ಕಾರ್ಯದರ್ಶಿ ರಫೀಕ್ ಸಅದಿ ಸರ್ವರನ್ನು ವಂದಿಸಿದರು. ಝೋನ್ ಕೋಶಾಧಿಕಾರಿ ಮಹ್ದಿ ಅಹ್ಮದ್ ತಂಙಳ್ ಪ್ರಾರ್ಥನೆ ನೆರವೇರಿಸಿದರು.