ಮಡಿಕೇರಿ, ಆ.೧೦ : ರಾಷ್ಟಿçÃಯ ಜನಗಣತಿಯೊಂದಿಗೆ ಜನಾಂಗವಾರು ಮಾಹಿತಿ ಕಲೆಹಾಕುವ ಸಂದರ್ಭ ಆದಿಮ ಸಂಜಾತ ಏಕ-ಜನಾಂಗೀಯ ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಂನ್ನು ಸೇರಿಸುವುದರಿಂದ ಕೊಡವರ ಸಾಂವಿಧಾನಿಕ ಹಕ್ಕುಗಳಿಗೆ ಮತ್ತಷ್ಟು ಬಲಸಿಗಲಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು. ನಾಚಪ್ಪ ಹೇಳಿದರು.

ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಂನ್ನು ಸೇರಿಸಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಸುಂಟಿಕೊಪ್ಪದಲ್ಲಿ ೯ನೇ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ನಡೆಸಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎನ್.ಯು. ನಾಚಪ್ಪ ಅವರು ೨೦೨೬ರ ರಾಷ್ಟಿçÃಯ ಜನಗಣತಿ ಮತ್ತು ಜನಾಂಗವಾರು ಮಾಹಿತಿ ಸಂಗ್ರಹಿಸುವÀ ಸಂದರ್ಭ ಪ್ರತ್ಯೇಕ ಕಾಲಂ ಮತ್ತು ಕೋಡ್ ಸೇರಿಸುವುದರಿಂದ ಕೊಡವ ಸಮುದಾಯಕ್ಕೆ ಆಗಬಹುದಾದ ಲಾಭಗಳನ್ನು ಸರ್ವ ಕೊಡವರು ಅರಿತುಕೊಳ್ಳಬೇಕು. ಕೊಡವರ ಸಾಂವಿಧಾನಿಕ ಹಕ್ಕುಗಳಿಗಾಗಿ ಸಿಎನ್‌ಸಿ ನಡೆಸುವ ಶಾಂತಿಯುತ ಹೋರಾಟಕ್ಕೆ ಕೈಜೋಡಿಸಬೇಕೆಂದು ಕರೆ ನೀಡಿದರು.

೨೦೧೮ರಲ್ಲಿ ವ್ಯಾಪಕ ಜಲಸ್ಫೋಟ ಮತ್ತು ಭೂಸ್ಫೋಟ ಸಂಭವಿಸಿ ಸಾವುನೋವು, ಕಷ್ಟನಷ್ಟಗಳು ಎದುರಾಗಿದ್ದರೂ ಜಿಲ್ಲಾಡಳಿತ ಎಗ್ಗಿಲ್ಲದೆ ಭೂಪರಿವರ್ತನೆಗೆ ಅವಕಾಶ ನೀಡುತ್ತಿದೆ. ಹೊರಗಿನ ಬಂಡವಾಳಶಾಹಿಗಳು ಕಪ್ಪುಹಣವನ್ನು ಬಳಸಿ ಭೂ ಖರೀದಿಯಲ್ಲಿ ತೊಡಗಿದ್ದಾರೆ. ದೊಡ್ಡ ದೊಡ್ಡ ರೆಸಾರ್ಟ್ಗಳು ತಲೆ ಎತ್ತುತ್ತಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ಅನಾಹುತವೇ ಎದುರಾಗುವ ಸಾಧ್ಯತೆಗಳಿವೆ ಎಂದು ಆರೋಪಿಸಿದರು.

ಆದಿಮ ಸಂಜಾತ ಕೊಡವರಿಗೆ ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆಯೊಂದಿಗೆ ಸ್ವಯಂ ಆಡಳಿತ ಮತ್ತು ಆಂತರಿಕ ಸ್ವಯಂ ನಿರ್ಣಯದ ಹಕ್ಕನ್ನು ಖಾತ್ರಿಪಡಿಸುವುದರಿಂದ ಈ ರೀತಿಯ ಅಕ್ರಮ ಮತ್ತು ಅನಾಹುತಗಳನ್ನು ತಡೆಯಲು ಸಾಧ್ಯವೆಂದು ಅಭಿಪ್ರಾಯಪಟ್ಟರು.

ಕೊಡವ ಸಮುದಾಯದ ಸಾಂವಿಧಾನಿಕ ಹಕ್ಕೊತ್ತಾಯಗಳ ಕುರಿತು ಸರಕಾರದ ಗಮನ ಸೆಳೆಯಲು ಮತ್ತು ಜನಜಾಗೃತಿ ಮೂಡಿಸಲು ಕೊಡಗಿನಾದ್ಯಂತ ಮಾನವ ಸರಪಳಿ ಕಾರ್ಯಕ್ರಮವನ್ನು ಶಾಂತಿಯುತವಾಗಿ ನಡೆಸಲಾಗುತ್ತಿದೆ. ಸುಂಟಿಕೊಪ್ಪ ಭಾಗದ ಕೊಡವ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದರಿAದ ಸಿಎನ್‌ಸಿಯ ಹೋರಾಟಕ್ಕೆ ಮತ್ತಷ್ಟು ಬಲಸಿಕ್ಕಿದೆ ಎಂದರು.

ತಾ.೨೧ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಸಿದ್ದಾಪುರದಲ್ಲಿ ೧೦ನೇ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದು ಎನ್.ಯು. ನಾಚಪ್ಪ ಇದೇ ಸಂದರ್ಭ ತಿಳಿಸಿದರು.

ಚೋಳಪಂಡ ಜ್ಯೋತಿ, ನಂದಿನೆರವAಡ ರೇಖಾ, ಮರುವಂಡ ಲವ್ಲಿ, ಮಂಡಿರ ಸಬಿತಾ, ಮುಕ್ಕಾಟಿರ ಎ. ವಸಂತ್, ಪುಡಿಯಂಡ ಮುತ್ತಣ್ಣ, ದಾಸಂಡ ದೇವಯ್ಯ, ಕುಪ್ಪಂಡ ಮಹೇಶ್, ನಂದಿನೆರವAಡ ಅಪ್ಪಯ್ಯ, ಮಾಳೇಟಿರ ಉತ್ತಪ್ಪ, ಪುಡಿಯಂಡ ರಂಜಿತ್, ಪುಲ್ಲೇರ ಕಾಳಪ್ಪ, ಬಲ್ಲಾರಂಡ ರಾಜಪ್ಪ, ನಾಗಚೆಟ್ಟಿರ ಮನು, ಚೋಳಪಂಡ ನಾಣಯ್ಯ, ನಾಗಚೆಟ್ಟಿರ ಪ್ರಕಾಶ್, ನಂದಿನೆರವAಡ ಬಿದ್ದಪ್ಪ, ನಂದಿನೆರವAಡ ಅಚ್ಚಯ್ಯ, ನಂದಿನೆರವAಡ ಕುಟ್ಟಪ್ಪ, ನಂದಿನೆರವAಡ ಪೃಥ್ವಿ, ಪುಲ್ಲೇರ ಹರ್ಷ, ಪುಲ್ಲೇರ ಅಶ್ವಿತ್, ಕಾಯಪಂಡ ತಿಮ್ಮಯ್ಯ, ಮರುವಂಡ ಶರತ್, ಮರುವಂಡ ಕವನ್, ನಂದಿನೆರವAಡ ರಾಜೇಶ್, ಬೊಟ್ಟೋಳಂಡ ಕುಮಾರ್, ದಾಸಂಡ ವಿಕ್ರಂ, ಮರುವಂಡ ತಿಮ್ಮಯ್ಯ, ಚೆಟ್ಟಿರ ಕವನ್, ಪಾರುವಂಗಡ ರವಿ, ಕಂಜಿತAಡ ಅಯ್ಯಣ್ಣ, ಅಜ್ಜಿನಿಕಂಡ ಮೊಣ್ಣಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸೂರ್ಯ-ಚಂದ್ರ, ಭೂದೇವಿ, ಪ್ರಕೃತಿ ದೇವಿ, ಜಲದೇವಿ, ವನದೇವಿ, ಸಂವಿಧಾನ, ಗುರುಕಾರೋಣ ಹೆಸರಿನಲ್ಲಿ ಸಿಎನ್‌ಸಿಯ ಕೊಡವಲ್ಯಾಂಡ್ ಹೋರಾಟದೊಂದಿಗೆ ತಮ್ಮನ್ನು ಸಮರ್ಪಿಸಿಕೊಳ್ಳುವ ಪ್ರತಿಜ್ಞೆ ಸ್ವೀಕರಿಸಿದರು. ರಾಷ್ಟçಗೀತೆಯೊಂದಿಗೆ ಕಾರ್ಯಕ್ರಮ ಸಮಾರೋಪಗೊಂಡಿತು.