ಗೋಣಿಕೊಪ್ಪ ವರದಿ, ಆ. ೯ : ಅಖಿಲ ಕೊಡವ ಸಮಾಜ ಅಧ್ಯಕ್ಷರಾಗಿ ದೇಶತಕ್ಕನೆ ಜವಾಬ್ದಾರಿ ನಿಭಾಯಿಸಬೇಕು ಎಂಬ ನಿರ್ಧಾರವನ್ನು ಕಾವೇರಿ ಕಲ್ಯಾಣ ಮಂಟಪದಲ್ಲಿ ನಡೆದ ಅಖಿಲ ಕೊಡವ ಸಮಾಜದ ಮಹಾಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಯಿತು.
ಅಖಿಲ ಕೊಡವ ಸಮಾಜ ಅಧ್ಯಕ್ಷ, ದೇಶತಕ್ಕ ಪರದಂಡ ಸುಬ್ರಮಣಿ ಕಾವೇರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಖಿಲ ಕೊಡವ ಸಮಾಜವನ್ನು ಅಧ್ಯಕ್ಷ ಸ್ಥಾನದಲ್ಲಿ ಮುನ್ನಡೆಸಲು ಸಮರ್ಥ ದೇಶತಕ್ಕ ಆಯ್ಕೆ ಮುಖ್ಯ. ಈ ನಿಟ್ಟಿನಲ್ಲಿ ಕೊಡವರು ಅಖಿಲ ಕೊಡವ ಸಮಾಜಕ್ಕೆ ಸೂಕ್ತ ದೇಶತಕ್ಕರ ಆಯ್ಕೆಗೆ ಅವಕಾಶ ಮಾಡಿಕೊಡಬೇಕಿದೆ. ಇದರಿಂದ ಕೊಡವ ಜನಾಂಗ ಬಲಿಷ್ಠಗೊಳ್ಳಲು ಸಾಧ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಕೊಡವ ಜನಾಂಗದ ಮುಖ್ಯಸ್ಥನ ಸ್ಥಾನ ಬಲಪಡಿಸಲು ದೇಶತಕ್ಕಡಿ ಆಯ್ಕೆಗೆ ಕೊಡವರು ಮುಂದಾಗಬೇಕು. ಕೊಡವ ಜನಾಂಗದ ಸದಸ್ಯರು, ದೇಶತಕ್ಕ, ನಾಡ್ ತಕ್ಕ, ಕೊಡವ ಸಮಾಜದ ಪ್ರಮುಖರು ಸಮಾಜ ಬಲ ಪಡಿಸುವ ಬಗ್ಗೆ ಸುದೀರ್ಘ ಚರ್ಚೆ ನಡೆಸಿ, ನಿರ್ಧಾರ ತೆಗೆದುಕೊಳ್ಳಲಾಯಿತು.
ಸಮಾಜ ಬಲಿಷ್ಠಗೊಳಿಸಲು ಅಧ್ಯಕ್ಷ ಸ್ಥಾನಕ್ಕೆ ದೇಶತಕ್ಕ, ಆಡಳಿತ ಮಂಡಳಿಗೆ ೬ ಜನ, ಕೇಂದ್ರ ಸಮಿತಿಗೆ ೧ ದೇಶತಕ್ಕ,
(ಮೊದಲ ಪುಟದಿಂದ) ೧೫ ನಾಡ್‌ತಕ್ಕ, ೩೩ ಕೊಡವ ಸಮಾಜ, ೧೫ ಕುಟುಂಬ, ನಾಮ ನಿರ್ದೇಶನ ಸಲಹಾ ಸಮಿತಿಗೆ ನಿವೃತ್ತ ಐಎಎಸ್, ಕೆಎಎಸ್ ಅಧಿಕಾರಿ, ಸೇನಾಧಿಕಾರಿ, ವೈದ್ಯ, ಕ್ರೀಡೆ, ಪೊಲೀಸ್ ಇಲಾಖೆ, ವಕೀಲ, ಶಿಕ್ಷಣ, ಇತರೆ ಸೇರಿ ೧೧ ಜನರನ್ನು ಆಯ್ಕೆ ಮಾಡಿಕೊಳ್ಳಲು ನಿರ್ಧಾರ ತೆಗೆದುಕೊಳ್ಳಲಾಯಿತು.
ಭವಿಷ್ಯದ ಯೋಜನೆಗಳು
ಅಖಿಲ ಕೊಡವ ಸಮಾಜಕ್ಕೆ ಹೊಸ ಕಟ್ಟಡ ನಿರ್ಮಿಸಿ ಮತ್ತಷ್ಟು ಚಟುವಟಿಕೆಗಳಿಗೆ ಚಾಲನೆ ನೀಡಲು ನಿರ್ಧಾರ ತೆಗೆದುಕೊಳ್ಳಲಾಯಿತು. ಆರ್ಥಿಕ ಕ್ರೋಡೀಕರಣ ಸೇರಿದಂತೆ ವಿವಿಧ ಸಮಿತಿ ರಚಿಸಿಕೊಂಡು ಉದ್ದೇಶಿತ ಎಲ್ಲಾ ಕಾರ್ಯಗಳನ್ನು ಪೂರೈಸಲು ನಿರ್ಧರಿಸಲಾಯಿತು.
ಕೊಡವ ಕುಟುಂಬಗಳನ್ನು ಸಮಾಜಕ್ಕೆ ದಾಖಲು ಮಾಡಲು ಒಕ್ಕ ಪಣ ಪಡೆದು ದಾಖಲಿಸಲು ೫ ಸಾವಿರ ಹಣ ಸಂಗ್ರಹಿಸಲು ಹಾಗೂ ಯಾರಿಗೂ ವೈಯಕ್ತಿಕ ಸದಸ್ಯತ್ವ ನೀಡದಂತೆ ನಿರ್ಧಾರ ತೆಗೆದುಕೊಳ್ಳಲಾಯಿತು. ಕೊಡವ ಜನಾಂಗದ ಒಗ್ಗಟ್ಟ್ ಬಲಪಡಿಸಲು ತಕ್ಕಾಮೆ ಪದ್ಧತಿ ಬಲಪಡಿಸುವುದು, ಇದರೊಂದಿಗೆ ಕೊಡವರ ಅಭಿವೃದ್ಧಿಗೆ ಮುಂದಾಗುವAತೆಯೂ, ಪ್ರತೀ ವರ್ಷ ದೇಶ ಸಭೆ ನಡೆಸುವುದು, ಪುತ್ತರಿ, ಕೈಲ್ ಪೊವ್‌ದ್ ನಮ್ಮೆಯನ್ನು ಕೊಡವ ದೇಶದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಒಂದೇ ದಿನ ನಡೆಸುವಂತೆ ಚರ್ಚಿಸಿ ಜಾಗೃತಿ ಮೂಡಿಸಲು ನಿರ್ಧಾರ ತೆಗೆದುಕೊಳ್ಳಲಾಯಿತು. ಕೊಡವರ ಸಾಂಪ್ರದಾಯಿಕ ಆಟಭರಣಗಳಾದ ಆಯುಧ, ಉಡುಗೆ, ಪತ್ತಾಕ್, ಗೆಜ್ಜೆತಂಡ್ ದುರುಪಯೋಗವಾಗದಂತೆ ಕ್ರಮಕೈಗೊಳ್ಳುವುದು, ಅಂತರ್ ಜಾತಿ ವಿವಾಹ ನಿಯಂತ್ರಣಕ್ಕೆ ಜಾಗೃತಿ ಮೂಡಿಸುವುದು, ಕೊಡವ ಬುಡಕಟ್ಟ್ ಸ್ಥಾನಮಾನ, ಭಾಷಾ ಅಲ್ಪಸಂಖ್ಯಾತ, ವಿಶಿಷ್ಟ ಜನಾಂಗ ಎಂದು ಸರ್ಕಾರ ದಾಖಲಿಸಲು ಹೋರಾಟಕ್ಕೆ ಯೋಜನೆ ರೂಪಿಸುವುದು. ಪದ್ದತಿ, ಸಂಸ್ಕೃತಿ ಪೋಷಣೆಗೆ ಜಾಗೃತಿ, ಜನಾಂಗದ ಆಸ್ತಿ, ಮಂದ್‌ಮಾನಿ ಪರಭಾರೆಯಾಗದಂತೆ ತಡೆಯುವುದು, ಶಿಕ್ಷಣ, ಕ್ರೀಡೆ, ಉದ್ಯೋಗಕ್ಕೆ ಪ್ರೋತ್ಸಾಹಿಸುವುದು, ಕೊಡಗಿನ ಸಮಸ್ಯೆ ಬಗ್ಗೆ ಅಖಿಲ ಕೊಡವ ಸಮಾಜ ಮುಂದಾಳತ್ವದಲ್ಲಿ ಕೊಡವ ಜನಾಂಗ ಮತ್ತು ಕೊಡವ ಭಾಷಿಕ ಜನಾಂಗದ ಹಿತರಕ್ಷಣೆಗೆ ಮುಂದಾಗುವAತೆ, ಸಾಮಾಜಿಕ ಮತ್ತು ಕಾನೂನಾತ್ಮಕ ಹೋರಾಟಕ್ಕೆ ಕೈಜೋಡಿಸುವುದು, ಅಖಿಲ ಕೊಡವ ಸಮಾಜದ ಮೂಲಕ ಐನ್‌ಮನೆ ನಿರ್ಮಿಸಿ ಕೊಡವರ ಸಂಸ್ಕೃತಿ ಹೆಗ್ಗುರುತಾಗಿ ಕಾಪಾಡಿಕೊಳ್ಳಲು ಯೋಜನೆಗೆ ಮುಂದಾಗುವAತೆ ನಿರ್ಧಾರ ತೆಗೆದುಕೊಳ್ಳಲಾಯಿತು.
ದೇಶತಕ್ಕರಿಂದ ಕೊಡವರ ಸಂಪೂರ್ಣ ಜವಾಬ್ದಾರಿ ನಿಭಾಯಿಸುವ ಕಾರ್ಯಕ್ಕೆ ಪ್ರೋತ್ಸಾಹ ನೀಡಬೇಕು ಎಂಬ ಒತ್ತಾಯ ಕೇಳಿಬಂತು. ವಿವಿಧ ಕೊಡವ ಒಕ್ಕಗಳಿಂದ ಸಮರ್ಥ ದೇಶತಕ್ಕನನ್ನು ಸಮಾಜಕ್ಕೆ ಆಯ್ಕೆ ಮಾಡಲು ಸೂಕ್ತ ಆಯ್ಕೆಗೆ ಮುಂದಾಗುವAತೆ ಸಲಹೆ ವ್ಯಕ್ತವಾಯಿತು. ಕೊಡವ ಕುಟುಂಬಗಳಿAದ ತಲಾ ೫ ಸಾವಿರ ಒಕ್ಕಪಣ ಸಂಗ್ರಹಿಸುವುದರಿAದ ಸಮಾಜದ ಆರ್ಥಿಕತೆಗೆ ಶಕ್ತಿ ತುಂಬುವುದು, ಸದಸ್ಯತ್ವಕ್ಕೆ ಹಣ ಪಡೆಯದೆ ಕೊಡವ ಮಗು ಹುಟ್ಟಿನೊಂದಿಗೆ ಸಮಾಜದ ಸದಸ್ಯ ಎಂದು ದಾಖಲಿಸಲು ನಿರ್ಧಾರ ತೆಗೆದುಕೊಳ್ಳಲಾಯಿತು.೫ ವರ್ಷಕ್ಕೊಮ್ಮೆ ಆಡಳಿತ ಮಂಡಳಿ ರಚನೆ ಮಾಡುವಂತೆ ಬೈಲಾ ತಿದ್ದುಪಡಿ ಮಾಡಲು ನಿರ್ಧರಿಸಲಾಯಿತು. ದೇಶತಕ್ಕನಾಗಿ ಅಧ್ಯಕ್ಷ ಸ್ಥಾನ ನಿಭಾಯಿಸಲು ಆಡಳಿತ ಮಂಡಳಿಯಲ್ಲಿ ಸಮರ್ಥ ದೇಶತಕ್ಕನಿಗೆ ವಿಶೇಷ ಸ್ಥಾನ ನೀಡಿ, ಸಮಾಜ ನಿಭಾಯಿಸುವ ಜವಾಬ್ದಾರಿ ಪಡೆದುಕೊಳ್ಳಲು ಸುಲಭವಾಗುವಂತೆ ಆಯ್ಕೆ ಮಾಡಲು ನಿರ್ಧರಿಸಲಾಯಿತು.
ಕಾವೇರಿ ತೀರ್ಥೋದ್ಭವ ಸಂದರ್ಭ ಮತ್ತಷ್ಟು ಅಚ್ಚುಕಟ್ಟಾಗಿ ಗೊಂದಲ ಇಲ್ಲದೆ ಕಾವೇರಿ ನಡ್ಪ್ ಕಾರ್ಯ ಭಕ್ತಿಭಾವದಿಂದ ನಡೆಸಲು ನಿರ್ಧರಿಸಲಾಯಿತು. ಕೊಡವಾಮೆ ಬಾಳೋ ಯಶಸ್ವಿಯಾಗಿ ಜವಾಬ್ದಾರಿ ನಿಭಾಯಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು.
ಕಾರ್ಯದರ್ಶಿ ಕೀತಿಯಂಡ ವಿಜಯ ಕುಮಾರ್ ಕಳೆದ ಮಾಸಭೆ ವರದಿ, ಆಡಳಿತ ಮಂಡಳಿ ವರದಿ ಮಂಡಿಸಿ ಅನುಮೋದನೆ ಪಡೆದುಕೊಂಡರು.
ಅಖಿಲ ಕೊಡವ ಸಮಾಜ ಅಧ್ಯಕ್ಷ, ದೇಶತಕ್ಕ ಪರದಂಡ ಸುಬ್ರಮಣಿ ಕಾವೇರಪ್ಪ ಮಾತನಾಡಿ, ದೇಶತಕ್ಕ ಸ್ಥಾನ ಬಲಪಡಿಸಿಕೊಂಡು ಮುನ್ನಡೆಯುವಂತೆ ಕೈಜೋಡಿಸಬೇಕಿದೆ ಎಂದರು.
ಅಖಿಲ ಕೊಡವ ಸಮಾಜ ಉಪಾಧ್ಯಕ್ಷ ಅಜ್ಜಿಕುಟ್ಟಿರ ಸುಬ್ರಮಣಿ ಮಾದಯ್ಯ, ಖಜಾಂಚಿ ಮಂಡೇಪAಡ ಸುಗುಣ ಮುತ್ತಣ್ಣ, ಜಂಟಿ ಕಾರ್ಯದರ್ಶಿ ನಂದೇಟೀರ ರಾಜ ಮಾದಪ್ಪ, ಮೂವೇರ ರೇಖಾ ಪ್ರಕಾಶ್, ಯೂತ್ ವಿಂಗ್ ಅಧ್ಯಕ್ಷ ಚಮ್ಮಟ್ಟೀರ ಪ್ರವೀಣ್ ಉತ್ತಪ್ಪ, ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ ಇದ್ದರು. ಕುಟುಂಬಗಳ ದೇಶ ತಕ್ಕರು ಭಾಗವಹಿಸಿದ್ದರು.