ವೀರಾಜಪೇಟೆ, ಆ. ೭: ದಂಪತಿ ನಡುವೆ ಕಲಹ ಏರ್ಪಟ್ಟ ಹಿನ್ನೆಲೆ ಪತಿ ನೇಣಿಗೆ ಶರಣಾದ ಘಟನೆ ಕದನೂರು ಚಾಮಿಯಾಲದಲ್ಲಿ ನಡೆದಿದೆ.
ಚಾಮಿಯಾಲ ಗ್ರಾಮದ ಹನಿಫಾ ಎಂಬವರ ತೋಟ ಲೈನ್‌ಮನೆಯಲ್ಲಿ ವಾಸವಿದ್ದ ರಂಜಿತ್ (೨೫) ಮೃತ ವ್ಯಕ್ತಿ.
ರಂಜಿತ್ ಮೂಲತಃ ಪಿರಿಯಾಪಟ್ಟಣ ನಿವಾಸಿಯಾಗಿದ್ದು, ಕಾವ್ಯ ಎಂಬಾಕೆಯೊAದಿಗೆ ೫ ವರ್ಷಗಳ ಹಿಂದೆ ಮದುವೆಯಾಗಿದ್ದ. ಕಳೆದ ಎರಡು ವರ್ಷಗಳಿಂದ ಎರಡು ಮಕ್ಕಳೊಂದಿಗೆ ಚಾಮಿಯಾಲದಲ್ಲಿ ವಾಸವಿದ್ದರು.
ರಂಜಿತ್ ಮದ್ಯವ್ಯಸನಿಯಾಗಿದ್ದು, ತಾ. ೬ ರಂದು ವೀರಾಜಪೇಟೆಗೆ ತೆರಳಿ ಸಂಜೆ ಬಂದು ರಾತ್ರಿ ಊಟವಾದ ಬಳಿಕ ಪತಿ ಮತ್ತು ಪತ್ನಿ ಮಧ್ಯೆ ಕಲಹ ಏರ್ಪಟ್ಟಿದ್ದೆ. ಮುಂಜಾನೆ ಪತ್ನಿ ಕಾವ್ಯ ಪತಿಯ ಕೋಣೆಗೆ ಹೋದ ಸಂದÀರ್ಭ ಪತಿ ಪಂಚೆಯಿAದ ಕೋಣೆಯಲ್ಲಿ ಕಬ್ಬಿಣದ ರಾಡ್‌ಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಕಾವ್ಯ ನೀಡಿರುವ ದೂರಿನ ಮೇರೆಗೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.