*ಗೋಣಿಕೊಪ್ಪ, ಆ. ೭: ಸಿಐಎಸ್‌ಸಿಐ ಪ್ರಾದೇಶಿಕ ಮಟ್ಟದ ಶೂಟಿಂಗ್ ಸ್ಪರ್ಧೆ ಗೋಣಿಕೊಪ್ಪ ಕ್ಯಾಲ್ಸ್ ಶಾಲೆಯ ಎಎಸ್‌ಎಫ್ ಶೂಟಿಂಗ್ ರೇಂಜ್‌ನಲ್ಲಿ ನಡೆಯಿತು.

ಕರ್ನಾಟಕ, ಗೋವಾ ರಾಜ್ಯಗಳ ಸುಮಾರು ೨೫ ಶಾಲೆಗಳಿಂದ ೧೬೫ ಶೂರ‍್ಸ್ ಭಾಗವಹಿಸಿದ್ದರು. ಗೋಣಿಕೊಪ್ಪ ಕ್ಯಾಲ್ಸ್ ಶಾಲೆಯ ೧೫ ಶೂರ‍್ಸ್ ಪದಕ ಗೆದ್ದು ರಾಷ್ಟçಮಟ್ಟಕ್ಕೆ ಆಯ್ಕೆಯಾದರು. ೧೪, ೧೭, ೧೯ ವಯೋಮಿತಿಯ ಪೀಪ್ ಸೈಟ್ ಮತ್ತು ಓಪನ್ ಸೈಟ್, ರೈಫಲ್ ವಿಭಾಗದಲ್ಲಿ ಸ್ಥಾನ ಪಡೆದರು. ೧೯ ವಯೋಮಿತಿಯಲ್ಲಿ ಕೆ.ಎಂ. ಆಂಚಲ್ ಗಂಗಾಗೆ ಚಿನ್ನ, ಕೆ.ಆರ್. ಅಕ್ಷಯ ಪ್ರಸಾದ್ ಬೆಳ್ಳಿ, ಸಾಶ್ಯ ನಿಶಾಂಕ್ ಬೆಳ್ಳಿ, ಕೊಣೇರಿರ ಬಿದ್ದಪ್ಪ ನಾಣಯ್ಯ ಚಿನ್ನ, ಕೆ.ಎಂ. ಅದಿತಿ ಮುತ್ತಮ್ಮ ಚಿನ್ನ, ದಿಯಾ ಕಾರುಣ್ಯ ಕಂಚು, ಎಸ್. ಗಿರಿವರ್ ಬೆಳ್ಳಿ, ಎನ್. ಯು. ಕ್ರಿಶ್ ಗಣಪತಿ ಚಿನ್ನ, ಜಿ. ಪ್ರಣವಿ ಕಂಚು, ಕೆ.ಬಿ. ವಿಹ ಪೊನ್ನಮ್ಮ ಕಂಚು, ೧೭ ವಯೋಮಿತಿಯಲ್ಲಿ ಕ್ಷಮ್ಯ ಅನಿಲ್ ಚಿನ್ನ, ಮಯಾಂಕ್ ಮುತ್ತಣ್ಣ ಕಂಚು, ಡಿ. ಸಮರ್ಥ್ ಚಿನ್ನ, ಮಳವಂಡ ಪೂಜಿತ್ ಕಾವೇರಪ್ಪ ಚಿನ್ನ, ೧೪ ವಯೋಮಿತಿ ವಿಭಾಗದಲ್ಲಿ ಜಿ. ಮಯಾಂಕ್ ಕಂಚು ಪದಕ ಪಡೆದರು.