ಮಡಿಕೇರಿ, ಆ. ೮: ಜಿಲ್ಲೆಯಾದ್ಯಂತ ಶ್ರದ್ಧಾಭಕ್ತಿಯಿಂದ ವರಮಹಾಲಕ್ಷಿö್ಮ ಹಬ್ಬವನ್ನು ಆಚರಣೆ ಮಾಡಲಾಯಿತು. ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನೆರವೇರಿದರೆ, ಮನೆಗಳಲ್ಲಿ ಮಹಿಳೆಯರು ವ್ರತ ನೆರವೇರಿಸಿ ಲಕ್ಷಿö್ಮಯ ಆರಾಧನೆ ಮಾಡಿದರು.

ವರಮಹಾಲಕ್ಷಿö್ಮ ಹಬ್ಬದ ಪ್ರಯುಕ್ತ ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಭಕ್ತರಿಗೆ ಅರಿಶಿನ, ಕುಂಕುಮ, ಬಳೆ ವಿತರಿಸಲಾಯಿತು. ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಚುಮ್ಮಿ ದೇವಯ್ಯ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.

ವೀರಾಜಪೇಟೆ: ಶ್ರೀ ವರಮಹಾಲಕ್ಷಿö್ಮ ವ್ರತವನ್ನು ವೀರಾಜಪೇಟೆಯಾದ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ವೀರಾಜಪೇಟೆಯ ಗಣಪತಿ ದೇವಾಲಯ, ಶಿವಕೇರಿಯ ವಿಷ್ಣುದುರ್ಗಿ ದೇವಾಲಯ, ಕೆದಮುಳ್ಳೂರು ಮಹಾದೇವರ ದೇವಾಲಯ, ಭಗವತಿ ದೇವಾಲಯ, ತೆಲುಗರ ಬೀದಿಯಲ್ಲಿನ ದಕ್ಷಿಣ ಮಾರಿಯಮ್ಮ ದೇವಸ್ಥಾನ ಮೊದಲಾದ ದೇವಾಲಯಗಳಲ್ಲಿ ಪೂಜೆ ನೆರವೇರಿತು.

ಮಹಿಳೆಯರು ಮನೆಗಳಲ್ಲೂ ವರಮಹಾಲಕ್ಷಿö್ಮಯನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಿ ಮುತ್ತೆöÊದೆಯರಿಗೆ ಬಾಗಿನ ಸಮರ್ಪಿಸಿದರು. ದೇವಾಲಯಗಳಲ್ಲೂ ಮಹಿಳೆಯರಿಗೆ ಅರಿಶಿಣ, ಕುಂಕುಮ ಬಳೆ ವಿತರಿಸಲಾಯಿತು. ಮಹಾಪೂಜೆ ನಡೆದ ಬಳಿಕ ಪ್ರಸಾದ ವಿತರಣೆ ನಡೆಯಿತು. ಎಲ್ಲಾ ಕ್ಷೇತ್ರದಲ್ಲೂ ವರಮಹಾಲಕ್ಷಿö್ಮಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ನೆರವೇರಿಸಲಾಯಿತು.

ಸಿದ್ದಾಪುರ: ನೆಲ್ಲಿಹುದಿಕೇರಿ ಗ್ರಾಮದ ನಲ್ವತ್ತೇಕರೆಯ ಶ್ರೀ ಮಹಾದೇವರ ಮತ್ತು ಮಾರಿಯಮ್ಮ ದೇವಾಲಯದಲ್ಲಿ ವರಮಹಾಲಕ್ಷಿö್ಮ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯ ನಡೆಯಿತು. ಅಲ್ಲದೆ ಕುಂಕುಮಾರ್ಚನೆ. ವರಮಹಾಲಕ್ಷಿö್ಮ ಪೂಜಾ ಕಾರ್ಯಕ್ರಮಗಳು ನಡೆದವು.

ದೇವಾಲಯದ ವತಿಯಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಪೂಜಾ ಕಾರ್ಯಕ್ರಮದಲ್ಲಿ ದೇವಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಜರಿದ್ದರು.

ನೆಲ್ಲಿಹುದಿಕೇರಿ

ಸಿದ್ದಾಪುರ: ಇತಿಹಾಸ ಪ್ರಸಿದ್ಧ ನೆಲ್ಲಿಹುದಿಕೇರಿ ಗ್ರಾಮದ ಶ್ರೀ ಸತ್ಯ ನಾರಾಯಣ ದೇವಾಲಯದಲ್ಲಿ ವರಮಹಾಲಕ್ಷಿö್ಮ ಪೂಜೆ ಶ್ರದ್ಧಾಭಕ್ತಿಯಿಂದ ನಡೆಯಿತು. ದೇವಾಲಯದಲ್ಲಿ ಬೆಳಿಗ್ಗೆ ಕುಂಕುಮ ಅರ್ಚನೆ. ಮಡಲಕ್ಕಿ ಸೇವೆ ಸೇರಿದಂತೆ ಪೂಜಾ ಕೈಂಕರ್ಯಗಳು ನಡೆದವು.

ದೇವಾಲಯದ ವತಿಯಿಂದ ಅನ್ನಸಂಪರ್ಪಣೆಯನ್ನು ಏರ್ಪಡಿಸಲಾಯಿತು. ಪೂಜಾ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀ ಸತ್ಯನಾರಾಯಣ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಟಿ.ಜಿ. ಚಂದ್ರಶೇಖರ್ ಹಾಗೂ ಪದಾಧಿಕಾರಿಗಳು ಹಾಜರಿದ್ದರು.

ಅಮ್ಮತ್ತಿ

ಸಿದ್ದಾಪುರ: ಅಮ್ಮತ್ತಿಯ ಶ್ರೀ ಚಾಮುಂಡೇಶ್ವರಿ. ಶ್ರೀ ಪಾಷಾಣಮೂರ್ತಿ ಕ್ಷೇತ್ರದಲ್ಲಿ ವರಮಹಾಲಕ್ಷಿö್ಮ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ಆಚರಣೆ ಮಾಡಲಾಯಿತು.

ಕ್ಷೇತ್ರದಲ್ಲಿ ಪೂಜಾ ಕೈಂಕರ್ಯ ನಡೆಯಿತು. ಬಳಿಕ ವರಮಹಾಲಕ್ಷಿö್ಮ ಪೂಜಾ ಕಾರ್ಯಕ್ರಮಗಳು ಮತ್ತು ಮಹಾ ಮಂಗಳಾರತಿ ನಡೆಯಿತು. ಇದೇ ಸಂದರ್ಭ ಕುಂಕುಮ ಅರ್ಚನೆ ಇನ್ನಿತರ ಪೂಜೆಗಳು ನೆರವೇರಿದವು. ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಯಿತು.