ಮಡಿಕೇರಿ, ಜು. ೩೦: ಮಡಿಕೇರಿಯ ಹಿರಿಯ ವೈದ್ಯ, ಸಾಹಿತಿ ಡಾ. ಕೆ.ಬಿ. ಸೂರ್ಯಕುಮಾರ್ ಅವರ ಮಂಗಳಿ ಕೃತಿಗೆ ಕನ್ನಡ ವೈದ್ಯ ಬರಹಗಾರರ ಸಮಿತಿ ನೀಡುವ ಅತ್ಯುತ್ತಮ ಕೃತಿ ಪ್ರಶಸ್ತಿ ದೊರಕಿದೆ.
ಡಾ. ಇಂದಿರಾ ದೊಡ್ಡಬಳ್ಳಾಪುರ ಅವರು ನೀಡಿರುವ ಪ್ರಶಸ್ತಿಯು ಸೂರ್ಯಕುಮಾರ್ ಅವರು ಬರೆದಿರುವ ಮಂಗಳಮುಖಿಯರ ಜೀವನ ಶೈಲಿಯ ನಿರೂಪಣೆ ಇರುವ ಮಂಗಳಿ ಕೃತಿಗೆ ಸಂದಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಆಗಸ್ಟ್ ೨೪ ರಂದು ಬಳ್ಳಾರಿಯಲ್ಲಿ ಆಯೋಜಿತವಾಗಿದೆ. ಈವರೆಗೂ ಡಾ. ಸೂರ್ಯಕುಮಾರ್ ಅವರು ಕನ್ನಡದಲ್ಲಿ ಏಳು ಮತ್ತು ಇಂಗ್ಲೀಷ್ ನಲ್ಲಿ ಒಂದು ಕೃತಿಗಳನ್ನು ಪ್ರಕಟಿಸಿದ್ದಾರೆ.