ಗೋಣಿಕೊಪ್ಪ ವರದಿ, ಜು. ೩೦: ಕ್ಯಾಲ್ಸ್ ಶಾಲೆಯಲ್ಲಿ ಸಿಐಎಸ್‌ಸಿಇ ಮಟ್ಟದ ಪ್ರಾದೇಶಿಕ ಶೂಟಿಂಗ್ ಸ್ಪರ್ಧೆ ತಾ. ೩೧ ರಿಂದ (ಇಂದಿನಿAದ) ಆಗಸ್ಟ್ ೨ ರವರೆಗೆ ಶಾಲೆಯ ಎಎಸ್‌ಎಫ್ ಶೂಟಿಂಗ್ ರೇಂಜ್‌ನಲ್ಲಿ ನಡೆಯಲಿದೆ. ಕರ್ನಾಟಕ, ಗೋವಾ ವ್ಯಾಪ್ತಿಯನ್ನು ಹೊಂದಿದ್ದು, ೨೦೦ ಕ್ಕೂ ಹೆಚ್ಚು ಶೂರ‍್ಸ್ ಭಾಗವಹಿಸಲಿದ್ದಾರೆ.
ಪೀಪ್ ಸೈಟ್, ಓಪನ್ ಸೈಟ್, ಪಿಸ್ತೂಲ್ ಶೂಟಿಂಗ್ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದ್ದು, ೧೪, ೧೭, ೧೯ ವಯೋಮಿತಿಯ ಸ್ಪರ್ಧಿಗಳು ಭಾಗವಹಿಲಿದ್ದಾರೆ. ಇಲ್ಲಿ ವಿಜೇತರಾದವರು ರಾಷ್ಟçಮಟ್ಟದ ಸ್ಪರ್ಧೆಗೆ ಅರ್ಹತೆ ಗಿಟ್ಟಿಸಿಕೊಳ್ಳಲಿದ್ದಾರೆ.