ಸಿದ್ದಾಪುರ, ಜು. ೩೦: ಸಮೀಪದ ಪಾಲಿಬೆಟ್ಟ ರಸ್ತೆಯ ತೋಟವೊಂದರಲ್ಲಿ ಕಾಡಾನೆ ದಾಂಧಲೆ ನಡೆಸಿ ಕೃಷಿ ಫಸಲು ನಾಶಗೊಳಿಸಿದೆ.
ಕರ್ನಾಟಕ ರಾಜ್ಯ ರೈತ ಸಂಘದ ಸಿದ್ದಾಪುರ ಘಟಕದ ಅಧ್ಯಕ್ಷ ದೇವಣೀರ ವಜ್ರ ಬೋಪಣ್ಣ ಅವರ ಕಾಫಿ ತೋಟದೊಳಗೆ ಮರಿಯಾನೆಗಳು ಸೇರಿದಂತೆ ೧೨ಕ್ಕೂ ಅಧಿಕ ಕಾಡಾನೆಗಳು ಬೀಡು ಬಿಟ್ಟು ದಾಂಧÀಲೆ ನಡೆಸಿ ಕಾಫಿ ಗಿಡಗಳನ್ನು ಧ್ವಂಸಗೊಳಿಸಿ ಅಡಿಕೆ, ತೆಂಗು ಮರಕ್ಕೂ ಹಾನಿ ಮಾಡಿವೆ.
ಕಾಡಾನೆಗಳ ಹಾವಳಿಯಿಂದಾಗಿ ಕಾಫಿ ತೋಟಕ್ಕೆ ಕಾರ್ಮಿಕರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಓಡಾಡಲು ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಶ್ವತ ಕ್ರಮಕ್ಕೆ ವಜ್ರ ಬೋಪಣ್ಣ ಆಗ್ರಹಿಸಿದ್ದಾರೆ.