ಶ್ರೀಮAಗಲ, ಜು. ೨೩: ನ್ಯುಮೋನಿಯಾದಿಂದ ಮೃತಪಟ್ಟ, ಪೊನ್ನಂಪೇಟೆ ತಾಲೂಕು ಟಿ. ಶೆಟ್ಟಿಗೇರಿ ಗ್ರಾಮದ ಚೀಪೆಕೊಲ್ಲಿ ನಿವಾಸಿ ವಿಜು ಮತ್ತು ಮಂಜುಳಾ ದಂಪತಿಯ ಪುತ್ರ ಕಿಶನ್ ಹೆಚ್.ವಿ. ಅವರ ಮನೆಗೆ ವೀರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು. ಭೇಟಿ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷÀ ಮೀದೇರಿರ ನವೀನ್, ಪೆಮ್ಮಂಡ ರಾಜ, ಪಕ್ಷದ ಪ್ರಮುಖರು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.