ಮಡಿಕೇರಿ, ಜು.೧೯ : ಐತಿಹಾಸಿಕ ದಸರಾ ಆಚರಣೆಗೆ ಕೇವಲ ಎರಡೂವರೆ ತಿಂಗಳು ಬಾಕಿ ಉಳಿದಿರುವುದರಿಂದ ಶೀಘ್ರ ಮಡಿಕೇರಿ ದಸರಾ ಸಮಿತಿಯ ಪೂರ್ವಭಾವಿ ಸಭೆ ನಡೆಸುವಂತೆ ಸಮಿತಿಯ ಕಳೆದ ಬಾರಿಯ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ದಶಮಂಟಪ ಸಮಿತಿಯ ಕಳೆದ ಬಾರಿಯ ಅಧ್ಯಕ್ಷ ಜಗದೀಶ್ ಜಿ.ಸಿ ಹಾಗೂ ಪ್ರಧಾನ ಕಾರ್ಯದರ್ಶಿ ಯೋಗೇಶ್ ಹೆಚ್.ಎಲ್ ಅವರು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರಿಗೆ ಮನವಿ ಸಲ್ಲಿಸಿದರು.