ಶನಿವಾರಸಂತೆ, ಜು. ೧೮: ಸೇವೆಯಿಂದ ಜೀವನ ಸಾರ್ಥಕವಾಗುವುದರಿಂದ ಎಲ್ಲರೂ ಸೌಜನ್ಯದಿಂದ ಸೇವಾ ಮನೋಭಾವ ಹೊಂದಬೇಕು ಎಂದು ಲಯನ್ಸ್ ಸಂಸ್ಥೆ ಅಧ್ಯಕ್ಷ ಡಾ. ಎನ್. ಕೃಷ್ಣೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಖಾಸಗಿ ರೆಸಾರ್ಟ್ನ ಸಭಾಂಗಣದಲ್ಲಿ ನಡೆದ ಶನಿವಾರಸಂತೆ ಲಯನ್ಸ್ ಕ್ಲಬ್ ಆಫ್ ಕಾವೇರಿ ಸಂಭ್ರಮದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಸಂಘ-ಸAಸ್ಥೆಗಳು ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿವೆ. ಲಯನ್ಸ್ ಸಂಸ್ಥೆ ಉತ್ತಮ ಸಮಾಜಮುಖಿ ಕಾರ್ಯಗಳಿಂದ ಹೆಸರು ಮಾಡಿದೆ ಎಂದರು.

ಶನಿವಾರಸAತೆ ಸಂಸ್ಥೆಯ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದ ಸಂಸ್ಥೆಯ ಜಿಲ್ಲಾ ಉಪ ಗವರ್ನರ್ ನಾರಾಯಣ ಸ್ವಾಮಿ, ಸಮಾಜ ಸೇವೆಯನ್ನು ಮಾಡಿ ದೇಶದ ಉತ್ತಮ ಪ್ರಜೆಗಳೆನಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು. ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಟಿ.ಆರ್. ಕೇಶವ ಮೂರ್ತಿ ಮಾತನಾಡಿ, ಸರ್ವ ಸದಸ್ಯರೂ ಸೇರಿ ಸಮಾಜದ ಅಭಿವೃದ್ಧಿಗೆ ಒಟ್ಟಾಗಿ ಶ್ರಮಿಸೋಣ ಎಂದರು.

ಪ್ರಾAತೀಯ ಅಧ್ಯಕ್ಷ ಎಸ್. ವಾಸುಕಿ, ವಲಯ ಅಧ್ಯಕ್ಷ ಸುಧೀರ್, ಶಶಿಕುಮಾರ್, ಶನಿವಾರಸಂತೆ ಲಯನ್ಸ್ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಜಿ.ಜಿ. ಪರಮೇಶ್, ಉಪಾಧ್ಯಕ್ಷ ಎಂ.ಎನ್. ಶಂಕರ್, ಕಾರ್ಯದರ್ಶಿ ನಾರಾಯಣ ಸ್ವಾಮಿ, ಖಜಾಂಚಿ ಬಿ.ಕೆ. ಚಿಣ್ಣಪ್ಪ, ನಿರ್ದೇಶಕರು, ಸದಸ್ಯರು ಹಾಜರಿದ್ದರು.