ಗೋಣಿಕೊಪ್ಪಲು, ಜು. ೧೮: ದಕ್ಷಿಣ ಕೊಡಗಿನಲ್ಲಿ ಭೀತಿ ಹುಟ್ಟಿಸಿರುವ ಹುಲಿ ಸೆರೆಗೆ ಕೈಗೊಂಡಿರುವ ಕೂಂಬಿAಗ್ ೪ನೇ ದಿನ ಪ್ರವೇಶಿಸಿದೆ. ಆದರೆ, ಇದುವರೆಗೂ ಹುಲಿ ಸುಳಿವು ಪತ್ತೆಯಾಗದ ಹಿನ್ನೆಲೆ ಪರಿಣಾಮಕಾರಿ ಕ್ರಮಕ್ಕೆ ಅರಣ್ಯ ಇಲಾಖೆ ಮುಂದಾಗಿದೆ.

ಹುದಿಕೇರಿ ಬಳಿಯ ಬೆಳ್ಳೂರಿನಲ್ಲಿ ಈಗಾಗಲೇ ಕ್ಯಾಂಪ್ ತೆರೆಯಲಾಗಿದ್ದು, ೮೦ಕ್ಕೂ ಅಧಿಕ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಜಾನುವಾರುಗಳ ಮೇಲೆ ಹುಲಿ ನಿರಂತರ ದಾಳಿ ನಡೆಸುತ್ತಿರುವ ಹಿನ್ನೆಲೆ ಹುಲಿ ಸೆರೆಗೆ ಮುಂದಾಗಿರುವ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಹುದಿಕೇರಿ ಬಳಿಯ ಬೆಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಶಿಬಿರ ಆರಂಭಿಸಿದ್ದು, ಮುಂಜಾನೆ ವೇಳೆ ಮತ್ತಿಗೋಡು ಆನೆ ಶಿಬಿರದಿಂದ ಭೀಮ ಹಾಗೂ ಬಳ್ಳೆ ಕ್ಯಾಂಪ್‌ನಿAದ ಮಹೇಂದ್ರ ಸಾಕಾನೆಗಳನ್ನು ಕಾರ್ಯಾಚರಣೆ ಸಹಾಯಕ್ಕಾಗಿ ಕರೆಸಿಕೊಳ್ಳಲಾಗಿದೆ.

ಹುದಿಕೇರಿ ಸುತ್ತಮುತ್ತಲಿನ ದೇವರಕಾಡು ಹಾಗೂ ಹುಲಿಯ ಹೆಜ್ಜೆಯ ಗುರುತು ಇರುವ ಕಾಫಿ ತೋಟದಲ್ಲಿ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಮಧ್ಯಾಹ್ನದ ವೇಳೆ ಅರಣ್ಯ ಇಲಾಖೆಯ ವೈದ್ಯಾಧಿಕಾರಿಗಳಾದ ಡಾ.ರಮೇಶ್ ಹಾಗೂ ಇಲಾಖೆಯ ಅರವಳಿಕೆ ತಜ್ಞರಾದ ರಂಜನ್ ಆಗಮಿಸಿದರು.

ಕಾರ್ಯಾಚರಣೆಯಲ್ಲಿ ವೀರಾಜಪೇಟೆ ಡಿಎಫ್‌ಓ ಜಗನ್ನಾಥ್, ತಿತಿಮತಿ ಎಸಿಎಫ್ ಗೋಪಾಲ್, ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ಶಂಕರ್ ಹಾಗೂ ಇತರ ಹಿರಿಯ ಅಧಿಕಾರಿಗಳು ಬೆಳ್ಳೂರು ಶಾಲೆಯ ಆವರಣದಲ್ಲಿ ಕಾರ್ಯಾಚರಣೆಗೆ ಬೇಕಾದ ಸಕಲ ವ್ಯವಸ್ಥೆಗಳನ್ನು ಕೈಗೊಂಡಿದ್ದಾರೆ.

ಈ ಶಿಬಿರದಿಂದ ಹಲವು ತಂಡಗಳಾಗಿ ಕಾರ್ಯಾಚರಣೆ ತಂಡ ತಮ್ಮ ಕೆಲಸವನ್ನು ಮುಂಜಾನೆಯಿAದಲೇ ಆರಂಭಿಸಿತು. ಮಳೆ ಗಾಳಿಯನ್ನು ಲೆಕ್ಕಿಸದೆ ತಂಡ ಹುಲಿಯ ಪತ್ತೆಗಾಗಿ ತಮ್ಮ ಪ್ರಯತ್ನವನ್ನು ಮುಂದುವರೆಸಿದೆ.

ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹಾಗೂ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಹುಲಿ ಕಾರ್ಯಾಚರಣೆಗೆ ಬೇಕಾದ ಸೌಕರ್ಯಗಳನ್ನು ಸಿದ್ಧತೆ ಮಾಡಿಕೊಳ್ಳುವ ಮೂಲಕ ಪರಿಣಾಮಕಾರಿಯಾಗಿ ಹುಲಿ ಸೆರೆಗೆ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸ್ಪಷ್ಟ ನಿರ್ದೇಶನ ನೀಡಿದ ಹಿನ್ನಲೆಯಲ್ಲಿ ಅಧಿಕಾರಿಗಳು ತಮ್ಮ ಕಾರ್ಯಾಚರಣೆಯನ್ನು ೪ನೇ ದಿನಕ್ಕೂ ವಿಸ್ತರಿಸುವ ಮೂಲಕ ಸಾಕಾನೆಗಳನ್ನು ಬಳಸಿಕೊಂಡು ಕಾರ್ಯಚರಣೆಯನ್ನು ಆರಂಭಿಸಿದ್ದಾರೆ.

-ಹೆಚ್.ಕೆ.ಜಗದೀಶ್