ಕೂಡಿಗೆ, ಜು. ೧೧: ಕುಶಾಲನಗರ ವಲಯ ಅರಣ್ಯ ಇಲಾಖೆ ವ್ಯಾಪ್ತಿಯ ಅಂದಗೋವೆ, ನಾಕೂರು, ಶಿರಂಗಾಲ, ಕಾನ್‌ಬೈಲ್, ಬೈಚನಹಳ್ಳಿ, ಹೆರೂರು ಕಲ್ಲೂರು ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿರುವುದರ ಬಗ್ಗೆ ಗ್ರಾಮಸ್ಥರ, ಸಾರ್ವಜನಿಕರ ಮಾಹಿತಿ ಮೇರೆಗೆ ಈ ವ್ಯಾಪ್ತಿಯ ಗ್ರಾಮದ ತೋಟಗಳಲ್ಲಿರುವ ಕಾಡಾನೆಗಳನ್ನು ತಾ. ೧೩ ರಂದು ಕಾಡಿಗೆ ಅಟ್ಟುವ ಕಾರ್ಯಾಚರಣೆ ನಡೆಯಲಿದೆ ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ರತನ್ ಕುಮಾರ್ ತಿಳಿಸಿದ್ದಾರೆ. ಕಾರ್ಯಾಚರಣೆ ಸಂದರ್ಭ ಆಯಾ ಗ್ರಾಮದ ತೋಟದ ಮಾಲೀಕರು ತೋಟದ ಕಾರ್ಮಿಕರಿಗೆ ಸೂಚನೆ ನೀಡುವಂತೆ ಅಲ್ಲದೆ ಕಾಡಾನೆಗಳನ್ನು ಕಾಡಿಗೆ ಓಡಿಸುವ ಕಾರ್ಯಕ್ಕೆ ಸಹಕಾರ ನೀಡುವಂತೆ ಕೋರಿದ್ದಾರೆ.