ಮಡಿಕೇರಿ, ಜು. ೧೧: ತಾರೀಕು ೮ ರಂದು ಬಾಳೆಲೆ ಹೋಬಳಿಯ ಪೊನ್ನಪ್ಪಸಂತೆಯಲ್ಲಿ ಕಾಡಾನೆ ದಾಳಿಗೆ ಮೃತಪಟ್ಟ ವ್ಯಕ್ತಿಯ ಗುರುತಿಗೆ ಗೋಣಿಕೊಪ್ಪ ಪೊಲೀಸ್ ಠಾಣೆ ಮನವಿ ಮಾಡಿದೆ. ಅಂದು ಬೆಳಿಗ್ಗೆ ಸೈಕ್ಲಿಂಗ್ ಮಾಡುತ್ತಿದ್ದ ಅಜಯ್ ಎಂಬವರ ಮೇಲೆ ಕಾಡಾನೆ ದಾಳಿ ಮಾಡಿದ್ದು ಅವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದರು. ನಂತರ ಮುಂದೆ ಸಾಗಿದ ಆನೆಯು ತೋಟ ಒಂದರಲ್ಲಿ ಅಪರಿಚಿತ ವ್ಯಕ್ತಿಯ ಮೇಲೆ ದಾಳಿ ನಡೆಸಿ ಅವರನ್ನು ಕೊಂದು ಹಾಕಿತ್ತು. ಈ ವ್ಯಕ್ತಿಯ ಗುರುತಿಗೆ ಸಂಬAಧಿಸಿದAತೆ ತೋಟದ ಮಾಲೀಕರಾದ ತಿಮ್ಮಯ್ಯ ಅವರು ಗೋಣಿಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವ್ಯಕ್ತಿಯು ಅಂದಾಜು ೪೫ ರಿಂದ ೫೦ ವರ್ಷ ಪ್ರಾಯದವರಾಗಿದ್ದು ಅವರ ಹೆಸರು ಹಾಗೂ ವಿಳಾಸ ತಿಳಿದಿರುವುದಿಲ್ಲ. ಈ ವ್ಯಕ್ತಿಯ ವಾರಸುದಾರರು ಯಾರಾದರೂ ಇದ್ದಲ್ಲಿ ಗೋಣಿಕೊಪ್ಪ ಪೊಲೀಸ್ ಠಾಣೆಗೆ, ದೂ: ೦೮೨೭೪-೨೪೭೩೩೩ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.