ಉಪನಿರ್ದೇಶಕ ಯೋಗೇಶ್ ಮಾಹಿತಿ
ಮಡಿಕೇರಿ, ಜು. ೧೧: ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (ಪಿ.ಎಂ.ಕೆ.ಎಸ್.ವೈ.) (ಪ್ರತಿ ಹನಿ ನೀರಿಗೆ ಹೆಚ್ಚು ಉತ್ಪಾದನೆಯಡಿ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ/ ಸೂಕ್ಷö್ಮ ನೀರಾವರಿ ಅಳವಡಿಸಿಕೊಳ್ಳಲು ಸಹಾಯಧನ ನೀಡುವ ಯೋಜನೆ ಬಗ್ಗೆ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶೆಕ ಯೋಗೇಶ್ ಅವರು ಮಾಹಿತಿ ನೀಡಿದ್ದಾರೆ.
ಅಡಿಕೆ, ತೆಂಗು, ಶುಂಠಿ, ಬಾಳೆ, ತಾಳೆ, ಕಾಳುಮೆಣಸು, ಬೆಣ್ಣೆಹಣ್ಣು, ಸಪೋಟ, ತರಕಾರಿ ಬೆಳೆಗಳು ಹಾಗೂ ಇತರೆ ತೋಟದ ಬೆಳೆಗಳಿಗೆ ಹನಿ ನೀರಾವರಿ/ ಸೂಕ್ಷö್ಮ ನೀರಾವರಿ ಪದ್ಧತಿಗಳಿಗೆ ಸಹಾಯಧನ. ಪರಿಶಿಷ್ಟ ಜಾತಿ/ ಪಂಗಡ /ಇತರೆ ವರ್ಗದ ರೈತರಿಗೆ ಶೇ. ೯೦ ರಷ್ಟು ಸಹಾಯಧನ ನೀಡುವ ಯೋಜನೆ ಇದೆ ಎಂದರು.
ರಾಷ್ಟಿçÃಯ ತೋಟಗಾರಿಕೆ ಮಿಷನ್ ಯೋಜನೆಯಡಿ ತೋಟಗಾರಿಕೆ ಬೆಳೆಗಳಾದ ಬಾಳೆ, ತರಕಾರಿ, ಬೆಣ್ಣೆ ಹಣ್ಣುಗಳ ಹೊಸ ಪ್ರದೇಶ ವಿಸ್ತರಣೆ ಕೈಗೊಳ್ಳಲು ಶೇ. ೪೦ರ ಸಹಾಯಧನ ನೀಡಲಾಗುತ್ತದೆ. ಪುನಶ್ಚೇತನ ಕಾರ್ಯಕ್ರಮದಡಿ ರೈತರಿಗೆ ಉಚಿತವಾಗಿ ಕಿತ್ತಳೆ, ಕಾಳುಮೆಣಸು ಸಸಿಗಳು ಹಾಗೂ ಜೈವಿಕ ಗೊಬ್ಬರ ವಿತರಿಸಲಾಗುತ್ತದೆ. ಸಂರಕ್ಷಿತ ಬೇಸಾಯ ಕಾರ್ಯಕ್ರಮದಡಿ ಹಸಿರು ಮನೆ/ಪಾಲಿ ಮನೆ/ನೆರಳು ಪರದೆ ಮನೆಗಳ ನಿರ್ಮಾಣಕ್ಕೆ ಹಾಗೂ ಪ್ಲಾಸ್ಟಿಕ್ ಹೊದಿಕೆಗೆ ಶೇ. ೫೦ ರ ಸಹಾಯಧನ. ಹಾಗೆಯೇ ನೀರು ಸಂಗ್ರಹಣಾ ಘಟಕಗಳಿಗೆ ಶೇ. ೫೦ ರ ಸಹಾಯಧನ ನೀಡಲಾಗುತ್ತದೆ ಎಂದು ಯೋಗೇಶ್ ಅವರು ತಿಳಿಸಿದ್ದಾರೆ.
ಕೊಯ್ಲೋತ್ತರ ನಿರ್ವಹಣೆ ಕಾರ್ಯಕ್ರಮದಡಿ ಸಂಸ್ಕರಣಾ ಘಟಕಗಳು/ಪ್ಯಾಕ್ ಹೌಸ್/ಶೀತಲ ಗೃಹಗಳ ನಿರ್ಮಾಣಕ್ಕೆ ಶೇ. ೫೦ ರ ಸಹಾಯಧನ ನೀಡಲಾಗುವುದು. ಅಣಬೆ ಘಟಕ ನಿರ್ಮಿಸಲು ಶೇ. ೪೦ ರ ಸಹಾಯಧನ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ರಾಷ್ಟಿçÃಯ ಖಾದ್ಯ ತೈಲ ಅಭಿಯಾನದಡಿ (ತಾಳೆ ಬೆಳೆ ಯೋಜನೆ)
“ತಾಳೆ ಬೆಳೆ ಬೆಳೆಯಲು ಪ್ರೋತ್ಸಾಹ” ತಾಳೆ ಬೆಳೆ ಹೊಸ ಪ್ರದೇಶ ವಿಸ್ತರಣೆ ಕೈಗೊಳ್ಳಲು ಶೇ. ೫೦ ರ ಸಹಾಯಧನ ನೀಡಲಾಗುತ್ತದೆ. ಮೊದಲನೇ, ಎರಡನೇ, ಮೂರನೇ ಮತ್ತು ನಾಲ್ಕನೇ ವರ್ಷಗಳ ನಿರ್ವಹಣೆಗೆ ಶೇ. ೫೦ ರ ಸಹಾಯಧನ ನೀಡಲಾಗುತ್ತದೆ. ಡಿಸೇಲ್ ಮೋಟಾರ್, ಕೊಳವೆ ಬಾವಿ, ತಾಳೆ ಹಣ್ಣು ಕಟಾವು ಮಾಡುವ ಯಂತ್ರ, ಅಂತರ ಬೆಳೆ, ಚಾಫ್ ಕಟ್ಟರ್ ಯಂತ್ರಕ್ಕೆ ಶೇ. ೫೦ ರ ಸಹಾಯಧನ ನೀಡಲಾಗುತ್ತದೆ. ಹಾಗೆಯೇ ರಾಷ್ಟಿçÃಯ ಕೃಷಿ ವಿಕಾಸ ಯೋಜನೆ (ಆರ್.ಕೆ.ವಿ.ವೈ.) ಹಾಗೂ ಯಾಂತ್ರೀಕರಣ ಯೋಜನೆ ಸದುಪಯೋಗಕ್ಕೆ ಮನವಿ ಮಾಡಿದ್ದಾರೆ.
ರಾಷ್ಟಿçÃಯ ಕೃಷಿ ವಿಕಾಸ ಯೋಜನೆಯಡಿ ತೋಟಗಾರಿಕೆಯಲ್ಲಿನ ಕೊಯ್ಲೋತ್ತರ ಚಟುವಟಿಕೆಗಳಿಗೆ ಪ್ರೋತ್ಸಾಹಧನದಡಿ ಸೋಲಾರ್ ಪಂಪ್ ಸೆಟ್, ಕ್ಷೇತ್ರ ಮಟ್ಟದಲ್ಲಿ (ಫಾರ್ಮ್ ಗೇಟ್) ವಿಂಗಡನೆ, ಪ್ಯಾಕಿಂಗ್ ಮತ್ತು ಸಂಗ್ರಹಣೆ ಘಟಕ, ನೀರು ಸಂಗ್ರಹಣ ಘಟಕಗಳಿಗೆ ಸಹಾಯಧನ ನೀಡಲಾಗುವುದು. ಕಳೆಕೊಚ್ಚುವ ಯಂತ್ರ, ಮರಕತ್ತರಿಸುವ ಯಂತ್ರ, ದೋಟಿ, ಪವರ್ ಸ್ಪೆçಯರ್, ಅಲ್ಯೂಮಿನಿಯಂ ಏಣಿ, ಪವರ್ ವಿಡರ್, ಅಡಿಕೆ ಸಿಪ್ಪೆ ಸುಳಿಯುವ ಯಂತ್ರ, ಕಾಳುಮೆಣಸು ಬಿಡಿಸುವ ಯಂತ್ರ, ತಳ್ಳುವ ಗಾಡಿ ಇತರೆ ಯಂತ್ರಗಳನ್ನು ಖರೀದಿಸಲು ಸಹಾಯಧನ ನೀಡಲಾಗುವುದು. ಯಾಂತ್ರೀಕರಣ ಯೋಜನೆಯಡಿ ಇತರೆ ವರ್ಗದ ರೈತರಿಗೆ ಶೇ. ೪೦ ರ ಸಹಾಯಧನ ನೀಡಲಾಗುತ್ತದೆ ಎಂದರು.
ಜೇನು ಸಾಕಾಣಿಕೆ ಅಭಿವೃದ್ಧ್ದಿ ಯೋಜನೆ
ಮಧುವನ ಮತ್ತು ಜೇನು ಸಾಕಾಣಿಕೆ ಅಭಿವೃದ್ಧಿ ಕಾರ್ಯಕ್ರಮದಡಿ ಜೇನು ಪೆಟ್ಟಿಗೆ, ಜೇನು ಕುಟುಂಬ ಹಾಗೂ ಜೇನು ಸ್ಟಾಂಡ್‌ಗಳ ಖರೀದಿಗೆ ಸಹಾಯಧನ ನೀಡಲಾಗುವುದು. ಸಾಮಾನ್ಯ ರೈತರಿಗೆ ಶೇ. ೭೫ ರ ಸಹಾಯಧನ ನೀಡಲಾಗುತ್ತದೆ. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ರೈತರಿಗೆ ಶೇ. ೯೦ ರ ಸಹಾಯಧನವಿದೆ. ಜಿಲ್ಲೆಯ ರೈತರಿಗೆ ಜೇನು ಕೃಷಿಯನ್ನು ಅಭಿವೃದ್ಧಿಗೊಳಿಸುವ ಬಗ್ಗೆ ತರಬೇತಿಯನ್ನು ನೀಡಲಾಗುವುದು. ಖಾಸಗಿ ಮಧುವನ ಸ್ಥಾಪಿಸಲು ಸಹಾಯಧನ ನೀಡಲಾಗುತ್ತದೆ ಎಂದರು.
ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ)
ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ವಿವಿಧ ತೋಟಗಾರಿಕೆ ಬೆಳೆಗಳಾದ ಅಡಿಕೆ, ತೆಂಗು, ತಾಳೆ, ಅಂಗಾAಶ ಬಾಳೆ, ಸಪೋಟ ಮುಂತಾದ ಬೆಳೆಗಳ ಹೊಸ ಪ್ರದೇಶ ವಿಸ್ತರಣೆ ಕೈಗೊಳ್ಳಲು ಸಹಾಯಧನ ನೀಡಲಾಗುವುದು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ, ಬಿ.ಪಿ.ಎಲ್. ಕಾರ್ಡ್ದಾರರು, ಸಣ್ಣ ರೈತರು ಈ ಯೋಜನೆಗೆ ಅರ್ಹರಾಗಿರುತ್ತಾರೆ. ಇಲಾಖೆಯ ಮುಖಾಂತರ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತದೆ. ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ವಿವಿಧ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು/ ಅಭಿವೃದ್ಧಿ ಪಡಿಸಲು ಸಹಾಯಧನ ನೀಡಲಾಗುತ್ತದೆ. ಸಮಗ್ರ ಕೀಟ ರೋಗ ಕಾರ್ಯಕ್ರಮದಡಿ ಅಡಿಕೆ ಎಲೆ ಚುಕ್ಕೆ ರೋಗವನ್ನು ನಿಯಂತ್ರಿಸಲು ಔಷಧಿ ಖರೀದಿಸಲು ಸಾಮಾನ್ಯ ರೈತರಿಗೆ ಶೇ. ೭೫ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ರೈತರಿಗೆ ಶೇ. ೯೦ ರ ಸಹಾಯಧನ ನೀಡಲಾಗುವುದು. ಪರಂಪರಾಗತ ಕೃಷಿ ವಿಕಾಸ ಯೋಜನೆಯಡಿ ರೈತರ ಗುಂಪುಗಳ ರಚನೆ, ಆ ಗುಂಪುಗಳ ಮೂಲಕ ಸಾವಯುವ ತೋಟಗಾರಿಕೆ ಪ್ರೋತ್ಸಾಹಿಸಲು ಸಹಾಯಧನ ನೀಡಲಾಗುವುದು. ಪರಂಪರಾಗತ ಕೃಷಿ ವಿಕಾಸ ಯೋಜನೆಯಡಿ ಎರೆಹುಳ ಗೊಬ್ಬರ ಘಟಕ ಸ್ಥಾಪನೆ, ಬಯೋಡೈಜೆಷ್ಟರ್, ಅಝೋಲ್ಲಾ ತೊಟ್ಟಿ, ಸಸ್ಯ ಜನ್ಯ/ ಪ್ರಾಣಿ ಜನ್ಯ ಕೀಟನಾಶಕ ತಯಾರಿಕೆ ಪ್ಲಾಸ್ಟೀಕ್ ಡ್ರಂಗೆ ಸಹಾಯಧನ ದೊರೆಯಲಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಯೋಗೇಶ್ ಅವರು ಮಾಹಿತಿ ನೀಡಿದ್ದಾರೆ.