ನಾಪೋಕ್ಲು, ಜು. ೧೧: ಸಾರ್ವಜನಿಕರು ಮನೆ ನಿರ್ಮಾಣ ಮಾಡಿಕೊಂಡು ಸರಕಾರದ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು ಯಾರಿಗೂ ಹಣ ನೀಡುವ ಅವಶ್ಯಕತೆ ಇಲ್ಲ ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹೇಳಿದರು. ಸಮೀಪದ ಹೊದ್ದೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಯ್ಕೆಯಾದ ಬಸವ ವಸತಿ ಯೋಜನೆ ಮತ್ತು ಅಂಬೇಡ್ಕರ್ ವಸತಿ ಯೋಜನೆಯಡಿ ೨೬ ಫಲಾನುಭವಿಗಳಿಗೆ ವಸತಿ ನಿರ್ಮಾಣ ಕಾರ್ಯಾದೇಶ ಪತ್ರವನ್ನು ವಿತರಿಸಿ ಮಾತನಾಡಿದರು. ಹೆಚ್ಚುವರಿ ಮನೆ ಮಂಜೂರು ಮಾಡಲು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಸಹಕಾರ ನೀಡಿದ್ದಾರೆ. ಪಾರದರ್ಶಕವಾಗಿ ಮನೆ ನೀಡಲಾಗಿದೆ, ಸರಕಾರದ ಉಚಿತ ವಸತಿ ಯೋಜನೆಗೆ ಯಾವುದೇ ಹಣ ಯಾರಿಗೂ ಫಲಾನುಭವಿಗಳು ನೀಡುವ ಅಗತ್ಯವಿಲ್ಲ ಎಂದರು. ಗ್ರಾಮ ಪಂಚಾಯಿತಿ ಅನುದಾನದಲ್ಲಿ ೫ ಅಂಗನವಾಡಿ ಕೇಂದ್ರಗಳಿಗೆ ಸ್ಮಾರ್ಟ್ ಟಿ.ವಿ. ವಿತರಿಸಲಾಯಿತು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷÀ ಹೆಚ್.ಎ. ಹಂಸ, ಸದಸ್ಯರಾದ ಮೊಣ್ಣಪ್ಪ, ಕುಸುಮಾವತಿ, ಚೌರಿರ ಅನಿತಾ, ಮೊÊದು ಕೊಟ್ಟಮುಡಿ, ಎಂ.ಬಿ. ಹಮೀದ್ ಕಬಡಕೇರಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮಂದ್ರೀರ ಮೋಹನ್ ದಾಸ್, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಕೋಚನ ಹರಿಪ್ರಸಾದ್, ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಶೇಖರ್, ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸೀತಾ ಲಕ್ಷಿö್ಮÃ ಸಹಾಯಕ ಕಾರ್ಯ ಪಾಲಕ ಅಭಿಯಂತರರು ಲೋಕೋಪಯೋಗಿ ಪಂಚಾಯತ್ ರಾಜ್ ಇಲಾಖೆ, ಪಿ.ಡಿ.ಓ. ಅಬ್ದುಲ್ಲಾ, ಕಂದಾಯ ನಿರೀಕ್ಷಕರು ಚಂದ್ರ ಪ್ರಸಾದ್, ಗ್ರಾಮ ಆಡಳಿತ ಅಧಿಕಾರಿ ಸಂತೋಷ್ ಪಾಟೀಲ್, ವಿವಿಧ ಇಲಾಖೆಯ ಅಧಿಕಾರಿಗಳು ಪಂಚಾಯಿತಿ ಸಿಬ್ಬಂದಿಗಳು ಗ್ರಾಮಸ್ಥರು ಹಾಜರಿದ್ದರು.