ಮಡಿಕೇರಿ, ಜು. ೯: ಬಿಳಿಗೇರಿ ಹಾಗೂ ಅರ್ವತ್ತೋಕ್ಲು ಪ್ಲಾಂರ‍್ಸ್ ಕ್ಲಬ್ ವತಿಯಿಂದ ತಾ. ೧೨ ಮತ್ತು ೧೩ ರಂದು ೫ನೇ ವರ್ಷದ ಹಿಂದೂ ಕಪ್ ಮುಕ್ತ ಕೆಸರುಗದ್ದೆ ಕ್ರಿಕೆಟ್, ಓಟ, ವಾಲಿಬಾಲ್, ಹಗ್ಗಜಗ್ಗಾಟ ಹಾಗೂ ತೆಂಗಿನಕಾಯಿಗೆ ಗುಂಡು ಹೊಡೆ ಯುವ ಸ್ಪರ್ಧೆಗಳು ನಡೆಯಲಿವೆ.
ಬಿಳಿಗೇರಿ ಅರ್ವತ್ತೋಕ್ಲು ಗ್ರಾಮದ ತುಂತಾಜಿರ ಚಂದ್ರಶೇಖರ್, ರಂಜಿತ್, ದಯಾನಂದ, ತಿಮ್ಮಯ್ಯ ಹಾಗೂ ಧರ್ಮಾವತಿ ಅವರ ಗದ್ದೆಯಲ್ಲಿ ನಡೆಯಲಿರುವ ಸ್ಪರ್ಧೆಗಳು ತಾ. ೧೨ ರಂದು ಬೆಳಿಗ್ಗೆ ೯ ಗಂಟೆಗೆ ಉದ್ಘಾಟನೆಗೊಳ್ಳಲಿವೆ.
ತಾ. ೧೨ ರಂದು ಕ್ರಿಕೆಟ್ ಮತ್ತು ವಾಲಿಬಾಲ್ ಪಂದ್ಯಾವಳಿ, ತಾ. ೧೩ ರಂದು ಹಗ್ಗಜಗ್ಗಾಟ, ಕೆಸರುಗದ್ದೆ ಓಟ, ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಮತ್ತು ಮಹಿಳೆಯರು ಹಾಗೂ ಪುರುಷರಿಗೆ ವಿಶೇಷ ಸ್ಪರ್ಧೆಗಳು ನಡೆಯಲಿವೆ. ಕ್ರಿಕೆಟ್, ವಾಲಿಬಾಲ್ ಹಾಗೂ ಹಗ್ಗಜಗ್ಗಾಟದಲ್ಲಿ ಭಾಗವಹಿಸುವ ಆಸಕ್ತ ತಂಡಗಳು ತಾ. ೧೦ ರೊಳಗೆ ತಂಡದ ಹೆಸರನ್ನು ನೋಂದಾ ಯಿಸಿಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ನೋಂದಾಯಿಸಲು ಪೂಜಾರಿರ ಮಿತ್ರ ೯೬೬೩೨೫೩೦೨೫, ದರ್ಶನ್ ಪರ್ಲಕೋಟಿ - ೯೩೫೩೯೩೪೫೮೯, ತೆಂಗಿನಕಾಯಿಗೆ ಗುಂಡು ಹೊಡೆ ಯುವ ಸ್ಪರ್ಧೆ ಮಾಹಿತಿಗಾಗಿ ಗಗನ್ ಪೈಕೇರ - ೯೭೪೧೦೨೬೫೫೨ನ್ನು ಸಂಪರ್ಕಿಸಬಹುದಾಗಿದೆ.