ನಾಪೋಕ್ಲು, ಜು. ೯: ಕಾರ್ಮಿಕ ಸಂಘಟನೆಗಳ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಹಿನ್ನೆಲೆ ಮಡಿಕೇರಿ ಹಾಗೂ ಸೋಮವಾರಪೇಟೆಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘಟನೆಯಿAದ ಮಡಿಕೇರಿಯಲ್ಲಿ ಬುಧವಾರ ಶಿರಸ್ತೇದಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಿಗೆ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಸಲ್ಲಿಸಲಾಯಿತು.

ಈ ಸಂದರ್ಭ ಮಡಿಕೇರಿ ತಾಲೂಕು ಅಧ್ಯಕ್ಷೆ ಪವಿತ್ರ ಸಿ.ಯು, ಕಾರ್ಯದರ್ಶಿ ಆಶಾಲತಾ ಎಂ, ಉಪಾಧ್ಯಕ್ಷೆ ವನಜಾ, ಕ್ಷೇಮ ನಿಧಿ ಅಧ್ಯಕ್ಷೆ ಸುಮತಿ, ಸೋಮವಾರಪೇಟೆಯ ಅಧ್ಯಕ್ಷೆ ಧನಲಕ್ಷಿö್ಮ, ಕಾರ್ಯದರ್ಶಿ ತಾರ ಲೋಬೋ ಹಾಗೂ ಮಡಿಕೇರಿ ತಾಲೂಕು ಮತ್ತು ಸೋಮವಾರಪೇಟೆ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.