ಸಿದ್ದಾಪುರ, ಜು. ೯: ಕಾಡಾನೆಗಳ ಹಾವಳಿಯಿಂದ ತತ್ತರಿಸಿರುವ ಬಾಡಗಬಾಣಂಗಾಲ.ಮಠ. ಬಜೆಕೊಲ್ಲಿ. ಮೇಕೂರ್ ಹೊಸ್ಕೇರಿ ಗ್ರಾಮದಲ್ಲಿ ಹುಲಿ ಹೆಜ್ಜೆ ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ತಿತಿಮತಿ ಉಪವಲಯ ಅರಣ್ಯ ಅಧಿಕಾರಿ ಶಶಿ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಲಾಯಿತು.

ಕಳೆದ ಕೆಲವು ತಿಂಗಳ ಹಿಂದೆ ಬಾಡಗ ಬಾಣಂಗಾಲ ಗ್ರಾಮದ ಮಠದಲ್ಲಿ ಹುಲಿ ಜಾನುವಾರುಗಳ ಮೇಲೆ ದಾಳಿ ನಡೆಸಿ ಕೊಂದು ಹಾಕಿತ್ತು. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಹುಲಿಯನ್ನು ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದರು. ಆದರೆ ಇದೀಗ ಮತ್ತೆ ಬಾಡಗಬಾಣಂಗಾಲ ಗ್ರಾಮ ವ್ಯಾಪ್ತಿಯಲ್ಲಿ ಹಾಗೂ ಮೇಕೂರು ಹೊಸ್ಕೇರಿ ಗ್ರಾಮದ ವ್ಯಾಪ್ತಿಯ ವಡ್ಡರಹಳ್ಳಿ. ಪಾರ್ವತಿ. ಎಸ್ಟೇಟ್ ಸೇರಿದಂತೆ ಈ ಭಾಗದ ಕಾಫಿ ತೋಟಗಳಲ್ಲಿ ಹುಲಿ ಸಂಚರಿಸಿರುವ ಹೆಜ್ಜೆ ಗುರುತುಗಳು ಕಾರ್ಯಾಚರಣೆ ತಂಡಕ್ಕೆ ಕಂಡುಬAದಿತು. ವೀರಾಜಪೇಟೆ ತಾಲೂಕು ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ತಿತಿಮತಿ ವಲಯ ಎ.ಸಿ.ಎಫ್. ಗೋಪಾಲ್ ವಲಯ ಅರಣ್ಯ ಅಧಿಕಾರಿ ಗಂಗಾಧರ್ ಮಾರ್ಗದರ್ಶನದಲ್ಲಿ ಬುಧವಾರದಂದು ಬೆಳಿಗ್ಗೆಯಿಂದ ಸಂಜೆಯವರೆಗೆ ಮಳೆ ನಡುವೆ ಕಾರ್ಯಾಚರಣೆ ತಂಡವು ಕೂಂಬಿAಗ್ ನಡೆಸಿತು. ಈ ವೇಳೆ ಹುಲಿಯು ಬಾಣಂಗಾಲ ಗ್ರಾಮದ ಖಾಸಗಿ ಸಂಸ್ಥೆಯ ಎಲ್‌ಕಿಲ್ಲ್ ಕಾಫಿ ತೋಟದ ಬೆಟ್ಟದ ಮೇಲ್ಭಾಗಕ್ಕೆ ತೆರಳಿರುವ ಕುರುಹುಗಳು ಲಭ್ಯವಾಗಿದೆ ಎಂದು ಕಾರ್ಯಾಚರಣೆ ತಂಡ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಕಾರ್ಯಚರಣೆಯನ್ನು ರಾತ್ರಿ ಕೂಡ ಮುಂದುವರಿಸಲಾಗುವುದೆAದು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ತಿತಿಮತಿ ಉಪವಲಯ ಅಧಿಕಾರಿ ಶಶಿ ಪಿ.ಟಿ. ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಅರಣ್ಯ ಸಿಬ್ಬಂದಿಗಳು, ಆನೆ ಕಾರ್ಯಪಡೆ ಆರ್.ಆರ್.ಟಿ. ತಂಡದ ಸಿಬ್ಬಂದಿಗಳು ಪಾಲ್ಗೊಂಡಿದ್ದರು. -ವಾಸು