ಮಡಿಕೇರಿ, ಜು. ೯: ತಲಕಾವೇರಿ ಹಾಗೂ ಭಾಗಮಂಡಲದ ಭಗಂಡೇಶ್ವರ ಕ್ಷೇತ್ರಗಳ ಅಭಿವೃದ್ಧಿಗೆ ಈಗಾಗಲೇ ಕ್ರಮವಹಿಸಲಾಗಿದೆ. ಮತ್ತಷ್ಟು ಅಭಿವೃದ್ಧಿಪರ ಕೆಲಸಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಕಾನೂನು ಸಲಹೆಗಾರ, ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಭರವಸೆ ನೀಡಿದರು.
(ಮೊದಲ ಪುಟದಿಂದ) ೫೧ನೇ ಹುಟ್ಟುಹಬ್ಬದ ಅಂಗವಾಗಿ ಕ್ಷೇತ್ರಗಳಿಗೆ ಪತ್ನಿ ಕಾಂಚನ್‌ರೊAದಿಗೆ ಭೇಟಿ ನೀಡಿದ ಪೊನ್ನಣ್ಣ ಅವರು ವಿಶೇಷ ಪೂಜೆ ನೆರವೇರಿಸಿ, ದೇವಾಲಯ ಪ್ರಮುಖರೊಂದಿಗೆ ಮಾತುಕತೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪೊನ್ನಣ್ಣ ಅವರು, ಸಮಸ್ತ ನಾಡಿನ ಜನರಿಗೆ ನೆಮ್ಮದಿ, ಸಮೃದ್ಧಿ ಕರುಣಿಸಲಿ ಎಂದು ಪ್ರಾರ್ಥಿಸಿದ್ದೇನೆ. ಅರ್ಚಕರು, ತಕ್ಕಮುಖ್ಯಸ್ಥರ ಕ್ಷೇತ್ರದ ಕುರಿತು ನೈಜ ಕೋರಿಕೆಗಳನ್ನು ಮುಂದಿಟ್ಟಿದ್ದಾರೆ. ಅದನ್ನು ಪರಿಶೀಲಿಸಲಾಗಿದೆ. ಅನುದಾನದಲ್ಲಿ ಕಾಮಗಾರಿಯನ್ನು ನಡೆಸಲಾಗುವುದು. ಅರ್ಚಕರಿಗೆ ಕೊಠಡಿ, ಭದ್ರತಾ ಕೋಣೆ ಕೆಲಸಗಳು ಈಗಾಗಲೇ ಆಗುತ್ತಿವೆ. ಮತ್ತಷ್ಟು ಕೆಲಸಗಳು ಮಾಡಲಾಗುವುದು ಎಂದು ಹೇಳಿದರು.
ತಲಕಾವೇರಿ ಹಾಗೂ ಭಾಗಮಂಡಲವನ್ನು ಧಾರ್ಮಿಕ ಕ್ಷೇತ್ರ ಘೋಷಿಸುವ ಕೆಲಸವಾಗುತ್ತದೆ. ಪ್ರವಾಸಿಗರು ಇಲ್ಲಿನ ಸೂಕ್ಷö್ಮತೆ, ಭಕ್ತರ ಭಾವನೆಗಳಿಗೆ ಧಕ್ಕೆ ಆಗದಂತೆ ವರ್ತನೆ ಮಾಡಿ ಧಾರ್ಮಿಕ ಕ್ಷೇತ್ರದ ಪಾವಿತ್ರö್ಯತೆ ಕಾಪಾಡಬೇಕು ಎಂದ ಅವರು, ಈ ಬಾರಿ ಮುಂಗಾರು ಉತ್ತಮವಾಗಿದೆ. ೮೫ ವರ್ಷಗಳ ಬಳಿಕ ಜೂನ್ ಅಂತ್ಯಕ್ಕೂ ಮುನ್ನ ಕೆಆರ್‌ಎಸ್ ಭರ್ತಿಯಾಗಿದೆ. ಇದೇ ರೀತಿ ಕಾವೇರಿ ಕರುಣೆ ಜನರ ಮೇಲಿರಲಿ ಎಂದರು.
ದೇವಾಲಯ ತಕ್ಕಮುಖ್ಯಸ್ಥ ಕೋಡಿ ಮೋಟಯ್ಯ, ಮುಖ್ಯಮಂತ್ರಿ ಹಾಗೂ ಸಚಿವರ ಆಗಮನದಿಂದ ಕ್ಷೇತ್ರ ಅಭಿವೃದ್ಧಿ ಆಗುತ್ತದೆ. ಈ ಹಿನ್ನೆಲೆ ಮಂತ್ರಿಗಳನ್ನು ಕರೆತರುವ ಕೆಲಸವಾಗಬೇಕೆಂದು ಮನವಿ ಮಾಡಿದರು.
ಈ ಸಂದರ್ಭ ತಲಕಾವೇರಿ-ಭಾಗಮಂಡಲ ದೇವಾಲಯ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಸೋಮಣ್ಣ, ಕರಿಕೆ ಗ್ರಾ.ಪಂ. ಅಧ್ಯಕ್ಷ ಬಾಲಚಂದ್ರ ನಾಯರ್, ಕಾಂಗ್ರೆಸ್ ಸಾಮಾಜಿಕ ಜಾಲತಾಣ ಘಟಕದ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು, ದೇವಾಲಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಸೇರಿದಂತೆ ಇನ್ನಿತರರು ಹಾಜರಿದ್ದರು.