ಮಡಿಕೇರಿ, ಜು. ೮: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಜನವರಿಯಿಂದ ಈ ತನಕ ೨೪.೮೩ ಇಂಚುಗಳಷ್ಟು ಹೆಚ್ಚು ಮಳೆಯಾಗಿದೆ. ಕಳೆದ ವರ್ಷ ಜಿಲ್ಲೆಗೆ ಈ ಅವಧಿಯಲ್ಲಿ ೩೯.೮೮ ಇಂಚು ಮಳೆಯಾಗಿದ್ದರೆ ಈ ವರ್ಷ ೬೪.೭೧ ಇಂಚುಗಳಷ್ಟು ಮಳೆ ಸುರಿದಿದ್ದು, ೨೪.೮೩ ಇಂಚು ಅಧಿಕವಾಗಿದೆ.
ಮಡಿಕೇರಿ ತಾಲೂಕಿನಲ್ಲಿ ೩೪.೬ ಇಂಚುಗಳಷ್ಟು ಅಧಿಕ ಮಳೆಯಾಗಿದೆ. ಕಳೆದ ವರ್ಷ ಜನವರಿಯಿಂದ ಈತನಕ ೫೮.೫೮ ಇಂಚು ಮಳೆಯಾಗಿದ್ದರೆ ಈ ಬಾರಿ ೯೩.೧೮ ಇಂಚಿನಷ್ಟಾಗಿದೆ. ವೀರಾಜಪೇಟೆ ತಾಲೂಕಿನಲ್ಲಿ ಮಳೆಯ ಪ್ರಮಾಣ ಅಧಿಕವಾಗಿದೆ. ಕಳೆದ ಸಾಲಿನಲ್ಲಿ ಈತನಕ ೪೦.೭೪ ಇಂಚು ಸರಾಸರಿ ಮಳೆಯಾಗಿದ್ದರೆ ಈ ಬಾರಿ ೬೨.೦೯ ಇಂಚಿನಷ್ಟಾಗಿದ್ದು, ೨೧.೩೫ ಇಂಚು ಅಧಿಕವಿದೆ.
ಪೊನ್ನಂಪೇಟೆ ತಾಲೂಕಿನಲ್ಲಿ ಈ ಬಾರಿ ೬೩.೩೪ ಇಂಚು ಮಳೆಯಾಗಿದೆ. ಕಳೆದ ವರ್ಷ ೩೯.೭೬ ಇಂಚುಗಳಾಗಿದ್ದು, ಈ ಬಾರಿ ೨೩.೫೮ ಇಂಚು ಹೆಚ್ಚಿದೆ.
ಸೋಮವಾರಪೇಟೆ ತಾಲೂಕಿನಲ್ಲೂ ಈ ವರ್ಷ ಮಳೆ ಹೆಚ್ಚಿದೆ. ಕಳೆದ ವರ್ಷ ಈ ಅವಧಿಯಲ್ಲಿ ೩೨.೨೨ ಇಂಚುಗಳಾಗಿದ್ದರೆ ಈ ಬಾರಿ ೭೧.೩೧ ಇಂಚು ಮಳೆ ಸುರಿದಿದ್ದು ೩೯.೦೯ ಇಂಚು ಅಧಿಕ ಕಂಡುಬAದಿದೆ.
ಕುಶಾಲನಗರ ತಾಲೂಕಿಗೂ ೫.೫೪ ಇಂಚು ಅಧಿಕ ಮಳೆಯಾಗಿದೆ, ತಾಲೂಕಿನಲ್ಲಿ ಕಳೆದ ಬಾರಿ ೨೮.೧೦ ಇಂಚು ಮಳೆಯಾಗಿದ್ದರೆ ಈ ಬಾರಿ ೩೩.೬೪ ಇಂಚು ದಾಖಲಾಗಿದೆ.
ನಿನ್ನೆಯ ವಿವರ : ಜಿಲ್ಲೆಯಲ್ಲಿ ಕಳೆದ ೨೪ ಗಂಟೆಗಳಲ್ಲಿ ಸರಾಸರಿ ೦.೭೭ ಇಂಚು ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ೦.೮೨, ವೀರಾಜಪೇಟೆ ೦.೬೦, ಪೊನ್ನಂಪೇಟೆ ೧.೧೦, ಸೋಮವಾರಪೇಟೆ ೧.೨೭ ಇಂಚು ಮಳೆಯಾಗಿದೆ.