ಮಡಿಕೇರಿ, ಜು. ೬: ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕೊಡಗು ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಸಂಪಾಜೆ ಪ್ರೌಢಶಾಲೆಯ ಶಿಕ್ಷಕ ಹೆಬ್ಬಾಲೆಯ ಎಚ್.ಜೆ. ಕುಮಾರ್ ಹಾಗೂ ಪ್ರಧಾನ

ಕಾರ್ಯದರ್ಶಿಯಾಗಿ ಬಸವನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಎಂ.ಎಸ್. ಮಹೇಂದ್ರ ಆಯ್ಕೆ ಆಗಿದ್ದಾರೆ. ಮಡಿಕೇರಿಯಲ್ಲಿ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ನಡೆದ ಚುನಾವಣೆಯಲ್ಲಿ ಈ ಆಯ್ಕೆ ನಡೆದಿದೆ.