ಹೆಬ್ಬಾಲೆ, ಜು. ೬: ಆಧುನಿಕತೆಯ ಕರಿನೆರಳು ಮಕ್ಕಳ ಮೇಲೆ ಬೀಳದಂತೆ ಎಚ್ಚರಿಕೆ ವಹಿಸಬೇಕು. ಮೊಬೈಲ್ ಮಕ್ಕಳ ಕೈಗೆಕೊಡದಂತೆ ತಾಯಂದಿರು ಎಚ್ಚರಿಕೆಯಿಂದ ಇರಬೇಕು ಎಂದು ನಿವೃತ್ತ ಮುಖ್ಯಶಿಕ್ಷಕಿ ಸೀತಾಲಕ್ಷಿö್ಮ ಹೇಳಿದರು.

ತಾಲೂಕಿನ ಹೆಬ್ಬಾಲೆ ಗ್ರಾಮದ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧÀ್ಯಮ ಶಾಲೆಯಲ್ಲಿ ಏರ್ಪಡಿಸಿದ್ದ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬಾಲ್ಯದಿಂದಲೇ ಮಕ್ಕಳಿಗೆ ಉತ್ತಮ ಮೌಲ್ಯ ಹಾಗೂ ಸಂಸ್ಕಾರಗಳನ್ನು ಕಲಿಸಲು ಪೋಷಕರು ಒತ್ತು ನೀಡಬೇಕು ಎಂದರು. ಹಿಂದೂ ಸಂಪ್ರದಾಯದಲ್ಲಿ ಅಕ್ಷರ ಅಭ್ಯಾಸ ತುಂಬ ಮಹತ್ವ ಪಡೆದುಕೊಂಡಿದೆ. ಶಾಲೆಗೆ ಮಕ್ಕಳನ್ನು ಸೇರಿಸಿದ ನಂತರ ಪೋಷಕರ ಜವಾಬ್ದಾರಿ ಪ್ರಾರಂಭವಾಗುತ್ತದೆ. ಮಕ್ಕಳನ್ನು ಮನೆಯಲ್ಲಿಯೇ ತಯಾರು ಮಾಡಬೇಕು. ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು ಇದ್ದಂತೆ. ಆದ್ದರಿಂದ ಮಕ್ಕಳಿಗೆ ಉತ್ತಮ ಹವ್ಯಾಸ, ಶಿಕ್ಷಣ ಕೊಡಿಸಿದರೆ ಅವರೇ ಸಮಾಜದ ಆಸ್ತಿಯಾಗುತ್ತಾರೆ ಎಂದರು. ಶಾಲೆಗೆ ಸೇರಿದ ನಂತರ ಶಿಕ್ಷಕರು ಎಲ್ಲಾ ಕಲಿಸುತ್ತಾರೆ ಎಂದು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು.

ಆಧುನಿಕತೆಯ ಕರಿನೆರಳು ಮಕ್ಕಳ ಮೇಲೆ ಬೀಳದಂತೆ ಎಚ್ಚರಿಕೆ ವಹಿಸಬೇಕು. ಮೊಬೈಲ್ ಕೈಗೆ ಕೊಡಬೇಡಿ. ಈ ಬಗ್ಗೆ ತಾಯಂದಿರು ಎಚ್ಚರಿಕೆಯಿಂದ ಇರಬೇಕು. ಗ್ರಾಂಥಾಲಯದ ಪುಸ್ತಕ ಓದುವ ಹವ್ಯಾಸ ಬೆಳೆಸಿ. ಆದರ್ಶ ಗುಣ ರೂಢಿಸಿಕೊಳ್ಳಲು ಕಲಿಯುತ್ತಾರೆ ಎಂದು ಸಲಹೆ ನೀಡಿದರು. ಅರ್ಚಕ ನಂಜುAಡ ಆಚಾರ್ಯ, ರವಿಕಿರಣ್ ಅವರು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು. ಪೋಷಕ ಶಿಕ್ಷಕ ಪರಿಷತ್ತು ಅಧ್ಯಕ್ಷ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ನಿವೃತ್ತ ಕೃಷಿ ಅಧಿಕಾರಿ ಶಿವಾನಂದ, ನಿವೃತ್ತ ಶಿಕ್ಷಕಿ ಆಶಾ ಕಣಿವೆ, ಹಾರಂಗಿ ನೀರಾವರಿ ಇಲಾಖೆ ಇಂಜಿನಿಯರ್ ವರಲಕ್ಷಿö್ಮ, ಶಾಲಾ ವ್ಯವಸ್ಥಾಪಕ ಎಚ್. ಎಸ್. ಲೋಕೇಶ್, ಮುಖ್ಯ ಶಿಕ್ಷಕಿ ಲೇಖಾ ಪಾಲ್ಗೊಂಡಿದ್ದರು.