ಸಿದ್ದಾಪುರ, ಜು. ೫: ವಿದ್ಯಾರ್ಥಿಗಳು ಮಾದಕ ವಸ್ತು ಬಳಕೆಯಿಂದ ದೂರ ಇರಬೇಕೆಂದು ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ಕಿವಿಮಾತು ಹೇಳಿದರು.

ಸಿದ್ದಾಪುರದ ಸಂತ ಅನ್ನಮ್ಮ ಪ್ರೌಢಶಾಲೆಯಲ್ಲಿ ಏರ್ಪಡಿಸಲಾದ ನಶಾ ಮುಕ್ತ ಭಾರತ ಅಭಿಯಾನದ ಕಾರ್ಯಕ್ರಮದಲ್ಲಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಮಂಜುನಾಥ್, ಮಾದಕ ವಸ್ತು ಬಳಕೆಯಿಂದಾಗಿ ಪೋಷಕರಿಗೂ ಹಾಗೂ ಸಮಾಜಕ್ಕೂ ಕೆಟ್ಟ ಹೆಸರು ಬರುವುದರೊಂದಿಗೆ ಪ್ರಾಣಕ್ಕೂ ಅಪಾಯ.

ಭವಿಷ್ಯಕ್ಕೆ ಮಾರಕವಾಗುವ ದೃಷ್ಟಿಯಿಂದ ಮಕ್ಕಳು ಮಾದಕ ವಸ್ತುಗಳಿಂದ ದೂರ ಸರಿಯಬೇಕೆಂದು ಕರೆ ನೀಡಿದರು. ಯಾರು ಕೂಡ ಮಾದಕ ವಸ್ತುಗಳನ್ನು ಬಳಸದಂತೆ ಹಾಗೂ ಅದರ ಬಗ್ಗೆ ಎಚ್ಚರ ಇರುವಂತೆ ಸಲಹೆ ನೀಡಿದರು. ಈ ಸಂದರ್ಭ ಶಾಲೆಯ ಮುಖ್ಯ ಶಿಕ್ಷಕಿ ಮತ್ತು ಶಿಕ್ಷಕ ವೃಂದ, ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.