ಮಡಿಕೇರಿ, ಜು. ೫ : ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲಾ ಘಟಕ ಮತ್ತು ಕನ್ನಡ ಭವನ ಕೊಡಗು ಜಿಲ್ಲಾ ಘಟಕದ ಸಂಯುಕ್ತಾಶ್ರಯದಲ್ಲಿ ತಾ. ೬ ರಂದು (ಇಂದು) ಕೊಡಗು ಜಿಲ್ಲಾ ಚುಟುಕು ಕಾವ್ಯಶ್ರೀ ಪ್ರಶಸ್ತಿ ಪ್ರದಾನ ಮತ್ತು ಕೊಡಗು ಮಳೆಗಾಲ ಕವಿಗೋಷ್ಠಿ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.
ಅಪರಾಹ್ನ ೨ ಗಂಟೆಗೆ ನಗರದ ಪತ್ರಿಕಾ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಕೇಂದ್ರ ಸಮಿತಿ ಸ್ಥಾಪಕ ಸಂಚಾಲಕ ಡಾ. ವಾಮನ್ ರಾವ್ ಬೇಕಲ್, ಸಂಧ್ಯಾರಾಣಿ ಟೀಚರ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕೊಡಗು ಕನ್ನಡ ಭವನ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕವಯತ್ರಿ ಸ್ಮಿತಾ ಅಮೃತರಾಜ್, ಉದ್ಯಮಿ ಜೈರಸ್ ಥಾಮಸ್ ಅಲೆಗ್ಸಾಂಡರ್, ಕೊಡಗು ಕನ್ನಡ ಭವನ ಕೋಶಾಧಿಕಾರಿ ವಿನೋದ್ ಕುಡ್ತೇಕರ್, ಕಾರ್ಯದರ್ಶಿ ವಸಂತ್ ಕೆರೆಮನೆ ಪಾಲ್ಗೊಳ್ಳಲಿದ್ದಾರೆ.
ಆಕಾಶವಾಣಿ ನಿವೃತ್ತ ಉದ್ಘೋಷಕ ಸುಬ್ರಾಯ ಸಂಪಾಜೆ ಅವರ ಅಧ್ಯಕ್ಷತೆಯಲ್ಲಿ ಕೊಡಗು ಮಳೆಗಾಲದ ಕವಿಗೋಷ್ಠಿ ಕಾರ್ಯಕ್ರಮ ನಡೆಯಲಿದ್ದು, ಸಮಸ್ವಯ ಅಧಿಕಾರಿಯಾಗಿ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲಾ ಘಟಕದ ಅಧ್ಯಕ್ಷೆ ಎಂ.ಎ. ರುಬೀನಾ ಉಪಸ್ಥಿತರಿರಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷ ವಿರಾಜ್ ಅಡೂರು ಪಾಲ್ಗೊಳ್ಳಲಿದ್ದಾರೆ. ೪೬ ಮಂದಿಯಿAದ ಕವಿಗೋಷ್ಠಿ ನಡೆಯಲಿದೆ.
ಪ್ರಶಸ್ತಿ ಪ್ರದಾನ : ಕಾರ್ಯಕ್ರಮದಲ್ಲಿ ಕಿಗ್ಗಾಲು ಎನ್. ಗಿರೀಶ್ ಮೂರ್ನಾಡು, ಮೂಕಳೆರ ಟೈನಿ ಪೂಣಚ್ಚ, ಪಂದ್ಯAಡ ರೇಣುಕ ಸೋಮಯ್ಯ, ಅಪರ್ಣಾ ಹುಲಿತಾಳ, ಅಯ್ಯನೆರವಂಡ ಪ್ರಿತುನ್ ಪೂವಣ್ಣ ಅವರಿಗೆ ಕೊಡಗು ಜಿಲ್ಲಾ ಚುಟುಕು ಕಾವ್ಯಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕನ್ನಡ ಭವನ ಕಾಸರಗೋಡಿನ ಪ್ರತಿಷ್ಠಿತ ಅಂತಾರಾಜ್ಯ ಪ್ರಶಸ್ತಿಯಾದ ಕನ್ನಡ ಪಯಸ್ವಿನಿ ಪ್ರಶಸ್ತಿಗೆ ಕವಯತ್ರಿ ಸಿತಾ ಅಮೃತರಾಜ್, ಆಕಾಶವಾಣಿ ನಿವೃತ್ತ ಉದ್ಘೋಷಕ ಸುಬ್ರಾಯ ಸಂಪಾಜೆ, ಉದ್ಯಮಿ ಜೈರಸ್ ಥಾಮಸ್ ಅಲೆಗ್ಸಾಂಡರ್ ಅವರಿಗೆ ನೀಡಿ ಗೌರವಿಸಲಾಗುವುದು.
ಪುಸ್ತಕ ಬಿಡುಗಡೆ : ಕಾರ್ಯಕ್ರಮದಲ್ಲಿ ಕೊಡವ ಮಕ್ಕಡ ಕೂಟದ ೧೧೬ನೇ ಪುಸ್ತಕ ಲೇಖಕಿ ಟಿ. ವೈಶಾಲಿನಿ ಅವರ ‘ಮುಖವಾಡ’ ಕವನ ಸಂಕಲನ ಕೃತಿಯನ್ನು ಕನ್ನಡ ಭವನದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಬಿಡುಗಡೆ ಮಾಡಲಿದ್ದಾರೆ.