ಮಡಿಕೇರಿ, ಜು. ೫: ವಿಮೆ ಹಣ ಭರಿಸಲು ಸಂಸ್ಥೆಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ಮಡಿಕೇರಿ ನಗರದ ನಿವಾಸಿ ಜೈರಸ್ ಥಾಮಸ್ ಅಲೆಕ್ಸಾಂಡರ್ ಮತ್ತು ಅವರ ಪತ್ನಿ ಶಾಲಿನಿ ಅವರುಗಳು ತಮ್ಮ ಕುಟುಂಬದ ಸದಸ್ಯರ ಹೆಸರಿನಲ್ಲಿ ಕೇರ್ ಹೆಲ್ತ್ ಇನ್ಸೂರೆನ್ಸ್ ಲಿಮಿಟೆಡ್‌ನಲ್ಲಿ ಆರೋಗ್ಯ ವಿಮಾ ಖಾತೆಯನ್ನು ತೆರೆದಿದ್ದು, ಇದರ ಪ್ರೀಮಿಯಂ ಮೊತ್ತ ರೂ. ೫ ಲಕ್ಷವಾಗಿದ್ದು, ೨೦೨೩ನೇ ಇಸವಿಯಲ್ಲಿ ಶಾಲಿನಿ ಯವರಿಗೆ ‘ಬೆನಿಗ್ನ್ ಟ್ಯೂಮರ್’ ಕಾಯಿಲೆ ಬಾಧಿಸಿದಾಗ ಸಿ.ಟಿ. ಸ್ಕಾನ್, ರೇಡಿಯೋಲಜಿ ಹಾಗೂ ಎಂಡೋಸ್ಕೋಪಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಆಸ್ಪತ್ರೆಯ ವೆಚ್ಚ ರೂ.೩,೮೧,೬೫೦ ಅನ್ನು ಭರಿಸಿದ್ದಾರೆ.
ನಂತರದಲ್ಲಿ ಈ ಆಸ್ಪತ್ರೆಯ ಚಿಕಿತ್ಸೆ ವೆಚ್ಚದ ಮೊತ್ತವನ್ನು ವಿಮೆ ಪಾಲಿಸಿಯಿಂದ ‘ಕ್ಲೆöÊಮ್’ ಮಾಡಿಕೊಳ್ಳಲು ವಿಮೆ ಸಂಸ್ಥೆಯನ್ನು ಸಂಪರ್ಕಿಸಿದ ಸಂದರ್ಭ ಯಾವುದೇ ವ್ಯಕ್ತಿ ಈ ಪಾಲಿಸಿಯ ಪ್ರಯೋಜನ ಪಡೆಯಬೇಕಾದರೆ ಪಾಲಿಸಿ ಮಾಡಿಸಿದ ನಂತರ ಎರಡು ವರ್ಷಗಳು ಕಾಯಬೇಕು ಎಂಬ ಕಾರಣವೊಡ್ಡಿ ಕ್ಲೆöÊಮನ್ನು ನಿರಾಕರಿಸಿದೆ.
ಇದರ ಪರಿಹಾರಕ್ಕಾಗಿ ಜೈರಸ್ ಥಾಮಸ್ ಅಲೆಗ್ಸಾಂಡರ್ ಅವರು ಗ್ರಾಹಕರ ಆಯೋಗದಲ್ಲಿ ದೂರು ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ಆಯೋಗದ ಪ್ರಭಾರ ಅಧ್ಯಕ್ಷರಾದ ಡಾ|| ಸಿ.ರೇಣುಕಾಂಬ ಹಾಗೂ ಸದಸ್ಯರಾದ ಗೌರಮ್ಮಣ್ಣಿ ಅವರುಗಳು ‘ಇನ್ಸೂರೆನ್ಸ್ ಕಂಪನಿಯ ವ್ಯವಸ್ಥಾಪಕರಿಗೆ ಇಂತಹ ಕಾಯಿಲೆ ಕಾಣಿಸಿಕೊಂಡಿದ್ದರೇ ವಿಮಾ ಮೊತ್ತಕ್ಕೋಸ್ಕರ ಎರಡು ವರ್ಷಗಳ ನಂತರ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರೇ?’ ಎಂದು ಪ್ರಶ್ನಿಸಿ ದೂರುದಾರರ ಆಸ್ಪತ್ರೆಯ ಚಿಕಿತ್ಸೆ ಮೊತ್ತವಾದ ರೂ.೩,೮೧,೬೫೦ ರೂಪಾಯಿಗಳನ್ನು ಹಾಗೂ ಅವರಿಗೆ ಉಂಟಾದ ಮಾನಸಿಕ ವೇದನೆಗೆ ಪರಿಹಾರವಾಗಿ ರೂ.೨೫ ಸಾವಿರ ಹಾಗೂ ವ್ಯಾಜ್ಯದ ಖರ್ಚು ವೆಚ್ಚಗಳಿಗೆ ರೂ.೧೦, ಸಾವಿರ ಪಾವತಿಸಬೇಕೆಂದು ಆದೇಶ ನೀಡಿದ್ದಾರೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟಾçರ್ ಹಾಗೂ ಸಹಾಯಕ ಆಡಳಿತಾಧಿಕಾರಿ ತಿಳಿಸಿದ್ದಾರೆ.