ಮಡಿಕೇರಿ, ಜು. ೫: ಸೂರ್ಲಬ್ಬಿಯಲ್ಲಿ ಕಾಡಾನೆಗಳ ಕಾಟ ಮುಂದುವರೆದಿದ್ದು, ನಿನ್ನೆ ದಿನ ಗ್ರಾಮದ ಅಪ್ಪುಡ ಎನ್. ಉತಪ್ಪ ಹಾಗೂ ಅಪ್ಪುಡ ಪಿ. ಗಣಪತಿ ಅವರಿಗೆ ಸೇರಿದ ಬೆಳೆದು ನಿಂತಿದ್ದ ಸಸಿಮಡಿಯನ್ನು ಆನೆಗಳ ಹಿಂಡು ಸಂಪೂರ್ಣ ನಾಶಪಡಿಸಿವೆ. ತಾ. ೨ ರಂದು ಗ್ರಾಮದ ಕನ್ನಿಕಂಡ ಕುಟ್ಟಪ್ಪ ಅವರಿಗೆ ಸೇರಿದ ಭತ್ತದ ಗದ್ದೆಗೆ ಲಗ್ಗೆಇಟ್ಟ ಕಾಡಾನೆಗಳು ತಯಾರಿಸಿಟ್ಟಿದ್ದ ಸಸಿಮಡಿಗಳನ್ನು ನಾಶಪಡಿಸಿದ್ದು, ಇದೀಗ ಕೇವಲ ಮೂರೇ ದಿನಗಳಲ್ಲಿ ಉತ್ತಪ್ಪ ಹಾಗೂ ಗಣಪತಿ ಅವರ ಗದ್ದೆಗೂ ಲಗ್ಗೆ ಇಟ್ಟು ಸಸಿಮಡಿಗಳನ್ನು ಧ್ವಂಸಗೊಳಿಸಿವೆ. ಇಷ್ಟು ಪ್ರಮಾಣದಲ್ಲಿ ದಾಳಿಯಾದರೂ ಕೂಡ ಆನೆಗಳನ್ನು ಕಾಡಿಗಟ್ಟುವಲ್ಲಿ ಅರಣ್ಯ ಅಧಿಕಾರಿಗಳಿಂದ ಸ್ಪಂದನ ದೊರಕದ ಬಗ್ಗೆ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.