ಕುಶಾಲನಗರ, ಜು. ೫: ತುಂಬಿ ಹರಿಯುತ್ತಿರುವ ಕಾವೇರಿ ನದಿಗೆ ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರು ಹಾಗೂ ಕಾವೇರಿ ಮಹಾ ಆರತಿ ಬಳಗದ ಜಿಲ್ಲಾ ಸಂಚಾಲಕ ಶ್ರೀ ಸದಾಶಿವ ಸ್ವಾಮೀಜಿ ಅವರು ಕುಶಾಲ ನಗರದ ಕಾವೇರಿ ಆರತಿ ಕ್ಷೇತ್ರದ ಬಳಿ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ಈ ಸಂದರ್ಭ ಮಾತನಾಡಿದ ಅವರು, ಉತ್ತಮ ಮಳೆಯಾಗಿ, ಯಾವುದೇ ರೀತಿಯ ಪ್ರಕೃತಿ ವಿಕೋಪಗಳು ಉಂಟಾಗದೆ ನಾಡು ಸಮೃದ್ಧಿ ಕಾಣುವಂತಾಗಲಿ ಎಂದು ಹೇಳಿದರು. ಪ್ರಕೃತಿಯನ್ನು ನಿರಂತರವಾಗಿ ಆರಾಧಿಸುವ ಮೂಲಕ ಸಂರಕ್ಷಣೆ ಸಾಧ್ಯ ಎಂದರು. ಈ ಸಂದರ್ಭ ಆರತಿ ಬಳಗದ ಪ್ರಮುಖರಾದ ಚೈತನ್ಯ ಮತ್ತಿತರರು ಇದ್ದರು.