ಗೋಣಿಕೊಪ್ಪಲು, ಜು.೫: ವ್ಯಕ್ತಿಯೋರ್ವ ತನ್ನ ವಾಹನದಲ್ಲಿದ್ದ ತ್ಯಾಜ್ಯ ತುಂಬಿದ ಚೀಲಗಳನ್ನು ಹೊಳೆಗೆ ಎಸೆಯುತ್ತಿದ್ದಂತೆಯೇ ಕಾಕತಾಳೀಯ ಎಂಬAತೆ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಸಿಕ್ಕಿಬಿದ್ದ ಘಟನೆ ಬಿ.ಶೆಟ್ಟಿಗೇರಿ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ. ಮಾಡಿದ ತಪ್ಪಿಗೆ ಕ್ಷಮೆಯಾಚಿಸಿದ ವ್ಯಕ್ತಿ ಪಂಚಾಯಿತಿಗೆ ದಂಡ ಕಟ್ಟಿದ್ದಾನೆ.

ಮೂಲತಃ ಪೊನ್ನಂಪೇಟೆ ನಿವಾಸಿ ಅಬ್ದುಲ್ ಮನನ್ ಖಾನ್ ಎಂಬಾತ ತನ್ನ ವಾಹನದಲ್ಲಿ ಬಿ.ಶೆಟ್ಟಿಗೇರಿ ಕಡೆಗೆ ಆಗಮಿಸಿ ಕೊಂಗಣ ಹೊಳೆಗೆ ವಾಹನದಲ್ಲಿದ್ದ ೩ ಚೀಲ ತ್ಯಾಜ್ಯವನ್ನು ಬಿಸಾಡುತ್ತಿದ್ದಂತೆಯೇ ಇದನ್ನು ಅಲ್ಲಿಗೆ ಕಾರ್ಯನಿಮಿತ್ತ ಬರುತ್ತಿದ್ದ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೊಲ್ಲಿರ ಬೋಪಣ್ಣ ಗಮನಿಸಿದ್ದಾರೆ.

ಕೂಡಲೇ ವಾಹನ ಚಾಲಕನನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಆತ ತ್ಯಾಜ್ಯದ ಚೀಲವನ್ನು ಹೊಳೆಗೆ ಎಸೆದಿರುವುದಾಗಿ ತಪ್ಪೊಪ್ಪಿಕೊಂಡಿದ್ದು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳನ್ನು ಸ್ಥಳಕ್ಕೆ ಬರಮಾಡಿಕೊಂಡ ಅಧ್ಯಕ್ಷರು ಆತನಿಗೆ ರೂ. ೨ ಸಾವಿರ ದಂಡ ವಿಧಿಸಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಗ್ರಾ.ಪಂ.ಅಧ್ಯಕ್ಷ ಕೊಲ್ಲಿರ ಬೋಪಣ್ಣ ಇತ್ತೀಚಿನ ದಿನಗಳಲ್ಲಿ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಕುವುದು, ಹರಿಯುವ ಹೊಳೆಗೆ ಎಸೆದು ಹೋಗುವುದು ನಿರಂತರವಾಗಿ ನಡೆಯುತ್ತಿದೆ. ಪಂಚಾಯಿತಿ ವತಿಯಿಂದ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಬೇಕು ಎಂದರಲ್ಲದೆ ನಾಗರಿಕರು ಕೂಡ ಇಂತಹ ಕೆಲಸಕ್ಕೆ ಮುಂದಾಗದAತೆ ಮನವಿ ಮಾಡಿದರು.

- ಹೆಚ್.ಕೆ.ಜಗದೀಶ್