ಚೆಯ್ಯಂಡಾಣೆ, ಜು. ೫: ಕಳೆದ ಕೆಲವು ದಿನಗಳ ಹಿಂದೆ ವಿದ್ಯಾರ್ಥಿಗಳ ಕೊರತೆಯಿಂದ ಸರಕಾರದ ಆದೇಶದ ಹಿನ್ನೆಲೆಯಲ್ಲಿ ಮುಚ್ಚಲ್ಪಟ್ಟಿದ್ದ ಚೆಯ್ಯಂಡಾಣೆಯ ನರಿಯಂದಡ ಕೇಂದ್ರ ಪ್ರೌಢಶಾಲೆಗೆ ಕನ್ನಹಾಕಿರುವ ಕಳ್ಳರು ಲ್ಯಾಪ್ ಟಾಪ್, ಯುಪಿಎಸ್ ಇನ್ವರ್ಟರ್ ಹಾಗೂ ಗಂಟೆಯನ್ನು ಕಳವು ಮಾಡಿದ್ದಾರೆ.
ನರಿಯಂದಡ ಕೇಂದ್ರ ಪ್ರೌಢಶಾಲೆಯ ಮೂರು ಕೊಠಡಿಯ ಬೀಗ ಒಡೆದು ಒಳ ನುಗ್ಗಿರುವ ಕಳ್ಳರು ಲ್ಯಾಪ್ಟಾಪ್ ಹಾಗೂ ಯುಪಿಎಸ್, ಬ್ಯಾಟರಿ ಹಾಗೂ ಗಂಟೆ, ವಿದ್ಯುತ್ ಬಲ್ಬ್ಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ. ಶಾಲೆ ಮುಚ್ಚಲ್ಪಟ್ಟಿದ್ದರಿಂದ ಶಿಕ್ಷಕರು ಹಾಗೂ ಗುಮಾಸ್ತ ವಿದ್ಯಾರ್ಥಿಗಳ ವರ್ಗಾವಣೆ ಪತ್ರವನ್ನು ನೀಡುವ ಸಲುವಾಗಿ ಬಂದ ಸಂದರ್ಭ ಕಳ್ಳತನ ನಡೆದಿರುವುದು ಕಂಡುಬAದಿದೆ.
ಸ್ಥಳಕ್ಕೆ ನಾಪೋಕ್ಲು ಠಾಣಾಧಿಕಾರಿ ರಾಘವೇಂದ್ರ, ಬೆರಳಚ್ಚು ತಜ್ಞರಾದ ರಾಮಕೃಷ್ಣ, ಪರಿಶೀಲನಾಧಿಕಾರಿ ರಾಜು, ಪೊಲೀಸ್ ಎಎಸ್ಐ ಫ್ರ್ರಾನ್ಸಿಸ್, ಪ್ರಕಾಶ್ ಹಾಗೂ ಹೆಡ್ಕಾನ್ಸ್ಟೇಬಲ್ ವಿಜಯ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
-ಅಶ್ರಫ್