ಮಡಿಕೇರಿ, ಜು. ೫ : ಜಿಲ್ಲೆಯಲ್ಲಿ ಮಳೆಯ ವಾತಾವರಣ ಮುಂದುವರಿದ್ದು ಮಳೆಯೊಂದಿಗೆ ಚಳಿಯ ಸನ್ನಿವೇಶವೂ ಕಂಡುಬರುತ್ತಿದೆ. ಶನಿವಾರದಿಂದ ಪುನರ್ವಸು ಮಳೆ ಆರಂಭಗೊAಡಿದ್ದು ಮಳೆಯ ಪ್ರಮಾಣ ಹೆಚ್ಚಿಲ್ಲವಾದರೂ ಆಗಾಗ್ಗೆ ಸುರಿಯುತ್ತಿದ್ದು ಮೋಡ ಕವಿದ ವಾತಾವರಣ ಜಿಲ್ಲೆಯಾದ್ಯಂತ ಇದೆ.

ಭಾಗಮಂಡಲ ಹೋಬಳಿಯಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ೫.೨೮ ಇಂಚುಗಳಷ್ಟು ಮಳೆಯಾಗಿದೆ. ಶಾಂತಳ್ಳಿ ಹೋಬಳಿಯಲ್ಲೂ ಸರಾಸರಿ ೩.೪೮ ಇಂಚು ಮಳೆ ಬಿದ್ದಿದೆ.

ಜಿಲ್ಲೆಯಲ್ಲಿ ಕಳೆದ ೨೪ ಗಂಟೆಗಳಲ್ಲಿ ಸರಾಸರಿ ೧.೪೦ ಇಂಚು ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ೨.೮೪, ವೀರಾಜಪೇಟೆ ೦.೯೦, ಪೊನ್ನಂಪೇಟೆ ೧.೧೩, ಸೋಮವಾರಪೇಟೆ ೧.೫೮ ಹಾಗೂ ಕುಶಾಲನಗರ ತಾಲೂಕಿನಲ್ಲಿ ೦.೩೬ ಇಂಚು ಮಳೆಯಾಗಿದೆ.

ಹೋಬಳಿವಾರು : ಮಡಿಕೇರಿ ಕ.ಸ.ಬಾದಲ್ಲಿ ೨.೧೨, ನಾಪೋಕ್ಲು ೨.೦೨, ಸಂಪಾಜೆ ೨, ವೀರಾಜಪೇಟೆ ೦.೯೨, ಹುದಿಕೇರಿ ೧.೩೨, ಶ್ರೀಮಂಗಲ ೧.೧೪, ಅಮ್ಮತ್ತಿ ೦.೮೮, ಪೊನ್ನಂಪೇಟೆ ೧.೪೦, ಬಾಳೆಲೆ ೦.೬೮, ಸೋಮವಾರಪೇಟೆ ೧.೨೦, ಶನಿವಾರಸಂತೆ ೦.೭೨, ಕೊಡ್ಲಿಪೇಟೆ ೨.೮೦, ಸುಂಟಿಕೊಪ್ಪ ಹೋಬಳಿಯಲ್ಲಿ ೦.೮೪ ಇಂಚು ಮಳೆ ಸುರಿದಿದೆ.