ಸುಂಟಿಕೊಪ್ಪ, ಜು. ೪: ರಾಷ್ಟಿçÃಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ಒಂಟಿ ಸಲಗ ಅರಣ್ಯದಿಂದ ದಿಢೀರನೆ ರಸ್ತೆಗೆ ಬಂದು ಭಯ ಹುಟ್ಟಿಸಿದೆ.
ತಾ. ೩ರ ರಾತ್ರಿ ೧೦.೩೦ ಗಂಟೆಗೆ ಕುಶಾಲನಗರ ಸುಂಟಿಕೊಪ್ಪದ ಮಧ್ಯೆ ಇರುವ ಆನೆಕಾಡು ಮೀಸಲು ಅರಣ್ಯದಿಂದ ೭ನೇ ಹೊಸಕೋಟೆಯ ಮೆಟ್ನಳ್ಳಿ ಬಳಿ ಅರಣ್ಯದಿಂದ ದಿಢೀರನೆ ರಸ್ತೆಗೆ ಇಳಿದ ಕಾಡಾನೆಯು ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಸಂಚರಿಸಿತು.
ವಾಹನ ಸವಾರರು ಕಾಡಾನೆಯನ್ನು ಕಂಡು ತಮ್ಮ ಜೀವ ಉಳಿಸಿಕೊಳ್ಳಲು ಬೇರೆ ರಸ್ತೆಗಳಲ್ಲಿ ತೆರಳಿದ ಘಟನೆ ನಡೆಯಿತು. ಒಂಟಿ ಸಲಗವು ಕಳೆದ ಹಲವು ಸಮಯಗಳಿಂದ ಇಲ್ಲಿ ಸಂಚರಿಸುತ್ತಿದ್ದು, ಹಲವು ಮನೆಗಳ ಬಳಿ ಇರುವ ಆಹಾರಗಳನ್ನು ತಿಂದು ಸಾಗುತ್ತಿದೆ ಎಂದು ಇಲ್ಲಿನ ನಿವಾಸಿಗಳು ದೂರಿದ್ದಾರೆ. ಹಗಲು ವೇಳೆ ಈ ರಸ್ತೆಯಲ್ಲಿ ಶಾಲಾ ಮಕ್ಕಳು ಶಾಲೆಗೆ ತೆರಳುವ ಸಂದರ್ಭ ಅಂದಗೋವೆ ಪೈಸಾರಿ ರಸ್ತೆಯಲ್ಲಿ ಕಾಣಸಿಗುತ್ತಿದ್ದು, ಅನಾಹುತ ಸಂಭವಿಸುವ ಮುನ್ನ ಕಾಡಾನೆಯನ್ನು ಅರಣ್ಯಕ್ಕೆ ಅಟ್ಟಲು ಇಲಾಖೆ ಕ್ರಮ ಕೈಗೊಳ್ಳಲಿ ಎಂದು ಅಂದಗೋವೆ ಪೈಸಾರಿಯ ನಿವಾಸಿಗಳು ಒತ್ತಾಯಿಸಿದ್ದಾರೆ.