ಚೆಯ್ಯಂಡಾಣೆ, ಜು. ೪ : ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯವಕಪಾಡಿ ಗ್ರಾಮದಲ್ಲಿ ಬಾರಿ ಮಳೆಗೆ ಮನೆ ಹಾಗೂ ಮನೆಯ ಗೋಡೆ ಕುಸಿದ ಘಟನೆ ನಡೆದಿದೆ.

ಯವಕಪಾಡಿ ಗ್ರಾಮದ ನಿವಾಸಿ ಮೇದರ ಸುಬ್ರಮಣಿ ಎಂಬವರ ವಾಸದ ಮನೆಯ ಒಂದು ಭಾಗದ ಗೋಡೆ ಶುಕ್ರವಾರ ಸುರಿದ ಭಾರೀ ಗಾಳಿ, ಮಳೆಗೆ ಕುಸಿದು ಬಿದ್ದು ಅಪಾರ ನಷ್ಟ ಸಂಭವಿಸಿದೆ.

* ಯವಕಪಾಡಿ ಗ್ರಾಮದ ನಿವಾಸಿ ಪಾಲೆಯರ ಪಮ್ಮು ಎಂಬವರ ವಾಸದ ಮನೆ ಶುಕ್ರವಾರ ಸುರಿದ ಭಾರೀ, ಗಾಳಿ ಮಳೆಗೆ ಸಂಪೂರ್ಣ ಕುಸಿದು ಬಿದ್ದು ಅಪಾರ ನಷ್ಟ ಸಂಭವಿಸಿದೆ. ನಾಪೋಕ್ಲು ಕಂದಾಯ ಪರಿವೀಕ್ಷಕ ರವಿಕುಮಾರ್, ಕಕ್ಕಬ್ಬೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಶೋಕ್ ಹಾಗೂ ಗ್ರಾಮ ಸಹಾಯಕ ಲಾಲು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.