ಮಡಿಕೇರಿ, ಜು. ೪: ಕೊಡಗಿನಲ್ಲಿ ಜೂನ್ ತಿಂಗಳು ಆರಂಭ ಗೊಳ್ಳುತ್ತಿರುವಂತೆ ವಾಡಿಕೆಯಂತೆ ಮುಂಗಾರು ಮಳೆಯ ಸನ್ನಿವೇಶವೂ ಶುರುವಾಗುವುದು ಸಹಜ. ಜೂನ್‌ನಿಂದಲೇ ಕೊಡಗಿನಲ್ಲಿ ಜನರೂ ಮಳೆಗಾಲದ ಚರ್ಚೆ ಯೊಂದಿಗೆ ವಿವಿಧ ಮಳೆ ನಕ್ಷತ್ರಗಳ ಅವಧಿಯಲ್ಲಿ ಮಳೆಯ ಸ್ವರೂಪ ಹೇಗಿರುತ್ತದೆ ಎಂಬ ವಿಚಾರದ ಕುರಿತೂ ಅವಲೋಕನ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಜೂನ್ ೮ ರಿಂದ ಮೃಗಶಿರ ಮಳೆ ನಕ್ಷತ್ರ ಜೂನ್ ೨೨ ರಿಂದ ಆರ್ದ್ರಾ ಮಳೆ ನಕ್ಷತ್ರದಲ್ಲಿನ ಮಳೆಗಾಲವನ್ನು ಜನತೆ ಎದುರಿಸಿದ್ದು ಆರ್ದ್ರಾ ಮಳೆ ಇದೀಗ ಮುಕ್ತಾಯಗೊಂಡಿದೆ. ತಾ. ೫ರಿಂದ (ಇಂದಿನಿAದ) ಪುನರ್ವಸು ಮಳೆ ಆರಂಭಗೊಳ್ಳಲಿದ್ದು ಇದು ಯಾವ ರೀತಿಯಲ್ಲಿ ಪರಿಣಾಮ ಬೀರಬಹುದು ಎಂಬ ಚಿಂತನೆಯಲ್ಲಿ ಜನರಿದ್ದಾರೆ.
ಈಗಾಗಲೇ ಜಿಲ್ಲೆ ಸರಾಸರಿ ೬೦ ಇಂಚಿಗೂ ಅಧಿಕ ಮಳೆಯನ್ನು ಕಂಡಿದ್ದರೆ ಗ್ರಾಮೀಣ ಭಾಗಗಳಲ್ಲಿ ಭಾರೀ ಮಳೆಯಾಗಿದ್ದು ಸುಮಾರು ೧೨೦ ರಿಂದ ೧೫೦ ಇಂಚಿಗೂ ಅಧಿಕ ಮಳೆ ಹಲವೆಡೆ ಸುರಿದಿದೆ.
ಮಳೆ ವಿವರ
ಜಿಲ್ಲೆಯಲ್ಲಿ ಶುಕ್ರವಾರ ಬೆಳಿಗ್ಗೆ ೮.೩೦ಕ್ಕೆ ಕೊನೆಗೊಂಡAತೆ ಸರಾಸರಿ ೦.೭೪ ಇಂಚು ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ೧.೧೦, ವೀರಾಜಪೇಟೆ ೦.೪೫, ಪೊನ್ನಂಪೇಟೆ ೦.೫೮, ಸೋಮವಾರಪೇಟೆ ೧.೨೬ ಹಾಗೂ ಕುಶಾಲನಗರ ತಾಲೂಕಿನಲ್ಲಿ ೦.೩೧ ಇಂಚು ಮಳೆಯಾಗಿದೆ.
ಮಡಿಕೇರಿ ಕಸಬಾದಲ್ಲಿ ೧.೨೨, ನಾಪೋಕ್ಲು ೦.೪೪, ಸಂಪಾಜೆ ೧.೩೮, ಭಾಗಮಂಡಲ ಹೋಬಳಿಯಲ್ಲಿ ೧.೩೮ ಇಂಚು ಮಳೆಯಾಗಿದೆ. ವೀರಾಜಪೇಟೆ ೦.೪೦, ಅಮ್ಮತ್ತಿ ೦.೫೦, ಹುದಿಕೇರಿ ೦.೮೨, ಶ್ರೀಮಂಗಲ ೦.೭೬, ಪೊನ್ನಂಪೇಟೆ ೦.೩೬, ಬಾಳೆಲೆ ೦.೪೦ ಇಂಚು ಮಳೆ ಸುರಿದಿದೆ..
ಸೋಮವಾರಪೇಟೆ ಹೋಬಳಿ ಯಲ್ಲಿ ೦.೯೨, ಶನಿವಾರಸಂತೆ ೧.೨೧, ಶಾಂತಳ್ಳಿ ೨.೩೬, ಕೊಡ್ಲಿಪೇಟೆ ೦.೫೯, ಸುಂಟಿಕೊಪ್ಪದಲ್ಲಿ ೦.೫೬ ಇಂಚು ಮಳೆಯಾಗಿದೆ.