ಮಡಿಕೇರಿ, ಜು. ೪: ಉತ್ತರ ಕೊಡಗಿನ ಕುಗ್ರಾಮ ಸೂರ್ಲಬ್ಬಿಯಲ್ಲಿಯೂ ಇತ್ತೀಚೆಗಿನ ವರ್ಷಗಳಲ್ಲಿ ಕಾಡಾನೆಗಳ ಕಾಟ ಹೆಚ್ಚಾಗಿದ್ದು, ಇದೇ ಮೊದಲ ಬಾರಿಗೆ ಎಂಬAತೆ ಭತ್ತದ ಗದ್ದೆಗಳ ಮೇಲೆ ಕಾಡಾನೆಗಳು ಲಗ್ಗೆ ಇಟ್ಟು ರೈತರು ತಯಾರಿಸಿದ್ದ ಭತ್ತದ ಸಸಿಮಡಿಗಳನ್ನು ಸರ್ವನಾಶ ಮಾಡಿವೆ.

ಮುಟ್ಲು, ಹಮ್ಮಿಯಾಲ ಹಾಗೂ ಸೂರ್ಲಬ್ಬಿ ವ್ಯಾಪ್ತಿಯಲ್ಲಿ ಮೂರರಿಂದ ನಾಲ್ಕು ಕಾಡಾನೆಗಳು ಸಂಚರಿಸುತ್ತಿದ್ದು, ಈ ವ್ಯಾಪ್ತಿಯಲ್ಲಿ ಭತ್ತದ ಗದ್ದೆಗಳ ಮೇಲೆ ದಾಳಿ ಮಾಡಿರುವುದು ಇದೇ ಮೊದಲ ಬಾರಿಗೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ಅಧಿಕ ಮಳೆ ಬೀಳುವ ಸೂರ್ಲಬ್ಬಿಯು ಈಗಾಗಲೇ ಪ್ರಸ್ತುತ ಸಾಲಿನಲ್ಲಿ ೧೦೦ಕ್ಕೂ ಅಧಿಕ ಇಂಚಿನಷ್ಟು ವರ್ಷಾಧಾರೆಯನ್ನು ಅನುಭವಿಸಿದೆ.

ವಿಭಿನ್ನ ಭೌಗೋಳಿಕ ನೆಲೆ ಹಿನ್ನೆಲೆ ಜನಸಂಖ್ಯೆಯೂ ವಿರಳವಾಗಿರುವ ಇಲ್ಲಿ ಆಧುನಿಕ ಸೌಲಭ್ಯಗಳ ಕೊರತೆಯ ನಡುವೆ ಜೀವನ ನಡೆಸುತ್ತಿರುವ ರೈತರಿಗೆ ಇದೀಗ ಮತ್ತಷ್ಟು ಸಂಕಟ ಎದುರಾಗಿದೆ. ಸೋಮವಾರಪೇಟೆ ವ್ಯಾಪ್ತಿಯ ಇತರೆಡೆ ಗಳಲ್ಲಿ ಕಾಡುಬಿಟ್ಟು ತೋಟ-ಗ್ರಾಮಗಳತ್ತ ಆನೆಗಳು ನುಸುಳ ಬಾರದೆಂಬ ದೃಷ್ಟಿಯಿಂದ ರೈಲ್ವೇ ಬ್ಯಾರಿಕೇಡ್, ಸೋಲಾರ್ ಚಾಲಿತ ವಿದ್ಯುತ್ ಬೇಲಿಗಳನ್ನು ಅಳವಡಿಸುವ ಮೂಲಕ ಕಾಡಾನೆಗಳ ಹಾವಳಿಯನ್ನು ಕಡಿಮೆ ಮಾಡುವ ಪ್ರಯತ್ನ ಸಾಗಿದೆ. ಈ ಆನೆಗಳು ಇದೀಗ ಸೂರ್ಲಬ್ಬಿಯತ್ತ ಮುಖ ಮಾಡಿರುವು ದಾಗಿ ಇಲ್ಲಿನ ರೈತರು ಹೇಳುತ್ತಾರೆ.

(ಮೊದಲ ಪುಟದಿಂದ) ಸೂರ್ಲಬ್ಬಿ ಸುತ್ತಲೂ ಯಾವುದೇ ರೀತಿಯ ಆನೆ ಕಂದಕ, ಸೋಲಾರ್ ವಿದ್ಯುತ್ ಬೇಲಿ ಹಾಗೂ ರೈಲ್ವೇ ಬ್ಯಾರಿಕೇಡ್ ಇಲ್ಲದಿರುವ ಕಾರಣ ಸುಲಭವಾಗಿ ಕಾಡಾನೆಗಳು ಕುಗ್ರಾಮಗಳಲ್ಲಿ ಸಂಚರಿಸಲು ಅವಕಾಶವಿದೆ.

ಸೂರ್ಲಬ್ಬಿಯ ವಾತಾವರಣಕ್ಕೆ ಸರಿದೂಗುವ ಹಾಗೂ ತಲತಲಾಂತರಗಳಿAದಲೂ ಈ ವ್ಯಾಪ್ತಿಯಲ್ಲಿ ಬಳಸಲ್ಪಡುತ್ತಿರುವ ಕೇಸರ್ ತಳಿಯ ಬೀಜದಿಂದ ಸಸಿಮಡಿಗಳನ್ನು ರೈತರು ತಯಾರಿಸಿ ಭತ್ತದ ಕೃಷಿ ಮಾಡುತ್ತಾರೆ. ಇತ್ತೀಚೆಗೆ ಇಲ್ಲಿನ ನಿವಾಸಿ ಕನ್ನಿಕಂಡ ಕುಟ್ಟಪ್ಪ ಅವರು ತಾವೇ ಕಳೆದ ವರ್ಷದ ಫಸಲಿನ ಮೂಲಕ ದೊರೆತ ಭತ್ತದ ಬೀಜಗಳಿಂದ ಸಸಿಮಡಿ ಮಾಡುವ ಉದ್ದೇಶದಿಂದ ಗದ್ದೆಯಲ್ಲಿ ಬೀಜ ಬಿತ್ತನೆ ಮಾಡಿದ್ದರು. ಸಸಿಮಡಿಗಳು ಬಹುತೇಕ ತಯಾರಾಗಿದ್ದು, ಅವುಗಳನ್ನು ತೆಗೆಯಲು ಬೆಳಿಗ್ಗೆ ಗದ್ದೆಗೆ ತೆರಳಿದಾಗ ಸಸಿಮಡಿಗಳೆಲ್ಲವೂ ನಾಶವಾಗಿದ್ದು ಗದ್ದೆಯ ಒಂದು ಬದಿಯಲ್ಲಿ ಆನೆಯ ಲದ್ದಿ ಮಾತ್ರ ಉಳಿದಿತ್ತು. ತಲತಲಾಂತರಗಳಿAದ ತಾವೇ ಬೀಜ ತಯಾರಿಸಿ ಸಸಿಮಡಿ ಮಾಡಿ ಭತ್ತ ಬೆಳೆಯುತ್ತಿರುವ ಇವರ ಕುಟುಂಬವು ಇದುವರೆಗೆ ಇಲಾಖೆ ವತಿಯಿಂದ ನೀಡುವ ಭತ್ತದ ಬೀಜ ಖರೀದಿಸಿಲ್ಲ. ಸೂರ್ಲಬ್ಬಿಯ ವಾತಾವರಣ, ಭೌಗೋಳಿಕ ಸ್ಥಳಕ್ಕೆ ಅನುಸಾರವಾಗಿ ತಾವೇ ತಯಾರಿಸಿದ್ದ ಬೀಜವನ್ನು ಕೃಷಿಯಲ್ಲಿ ಬಳಸುತ್ತಿದ್ದು, ಈ ಬಾರಿ ಬಿತ್ತನೆಗೆ ತಯಾರಾಗಿದ್ದ ಎಲ್ಲಾ ಸಸಿಮಡಿಗಳನ್ನು ಕಾಡಾನೆಗಳು ಸರ್ವನಾಶ ಮಾಡಿದ್ದು, ಮತ್ತೇ ಈ ಸಾಲಿನಲ್ಲಿ ಭತ್ತ ಕೃಷಿ ಮಾಡುವ ಸಾಹಸಕ್ಕೆ ಕೈ ಹಾಕುವುದಿಲ್ಲ ಎಂಬುದಾಗಿ ಕುಟ್ಟಪ್ಪ ಅವರು ಸ್ಥಳಕ್ಕೆ ತೆರಳಿದ್ದ ‘ಶಕ್ತಿ’ಯೊಂದಿಗೆ