ಮಡಿಕೇರಿ, ಜು. ೪: ವೀರಾಜಪೇಟೆ ಮಂಡಲದ ವಿವಿಧ ಬಿಜೆಪಿ ಶಕ್ತಿ ಕೇಂದ್ರಗಳಿಗೆ ಸಂಸದ ಯದುವೀರ್ ಒಡೆಯರ್ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಸಮಾಲೋಚಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿಕಾಳಪ್ಪ, ವೀರಾಜಪೇಟೆ ಮಂಡಲ ಅಧ್ಯಕ್ಷ ಸುವಿನ್ ಗಣಪತಿ ಸೇರಿದಂತೆ ಜಿಲ್ಲಾ, ಮಂಡಲ ಪ್ರಮುಖರು ಗಳೊಂದಿಗೆ ಭೇಟಿ ನೀಡಿ ಸಂಘಟನೆಯ ಕುರಿತು ಮಾತುಕತೆ ನಡೆಸಿದರು.
ಟಿ. ಶೆಟ್ಟಿಗೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಕ್ತಿ ಕೇಂದ್ರ ಪ್ರಮುಖರಾದ ಕೋಟ್ರಮಾಡ ಮಂಜು, ಮುಕ್ಕಾಟಿರ ಕನ್ನು ಕರುಂಬಯ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು.
ಕಾನೂರು ಗ್ರಾಮದಲ್ಲಿ ಶಕ್ತಿ ಕೇಂದ್ರ ಪ್ರಮುಖ ಅಣ್ಣಳಮಾಡ ನವೀನ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಪೊನ್ನಂಪೇಟೆಯಲ್ಲಿ ಶಕ್ತಿ ಕೇಂದ್ರ ಪ್ರಮುಖರಾದ ಅಡ್ಡಂಡ ನಿಲನ್ ಹಾಗೂ ಚೀರಂಡ ಕಂದಾ ದೇವಯ್ಯ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.
ಬಿರುನಾಣಿಯ ಶಕ್ತಿ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷ ರಾಯ್ ಸೇರಿದಂತೆ ಇನ್ನಿತರರು ಹಾಜರಿದ್ದರು.