ಕೂಡಿಗೆ, ಜು. ೪: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಮೇ ತಿಂಗಳಿನಲ್ಲಿ ಅಧಿಕವಾಗಿ ಬಿದ್ದ ಮಳೆಯ ಪರಿಣಾಮ ೧೧ ಮನೆಗಳು ಹಾನಿಯಾಗಿವೆ. ತಾಲೂಕು ವ್ಯಾಪ್ತಿಯಲ್ಲಿ ೧೧ ಮನೆಗಳಲ್ಲಿ ೪ ಮನೆಗಳು ಸಂಪೂರ್ಣವಾಗಿ ಹಾಳಾಗಿದ್ದು, ಉಳಿದ ೭ಮನೆಗಳು ಭಾಗಶಃ ಹಾನಿಯಾಗಿವೆ. ೪ ಮನೆಗಳಿಗೆ ತಲಾ ಒಂದರAತೆ ೧ಲಕ್ಷ ೨೦ ಸಾವಿರ ರೂ. ಆಯಾ ಫಲಾನುಭವಿಗೆ ವಿತರಣೆ ಮಾಡಲಾಗಿದೆ, ಭಾಗಶಃ ಕುಸಿತಗೊಂಡ ಮನೆಗಳಿಗೆ ಸರಕಾರದ ನಿಯಮಾನುಸಾರ ನೀಡಲಾಗಿದೆ ಎಂದು ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ಅವರು ಮಾಹಿತಿ ನೀಡಿದ್ದಾರೆ.
ಮಳೆಗಾಲ ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ ನೇಮಕಗೊಂಡ ನೋಡಲ್ ಅಧಿಕಾರಿ ಮತ್ತು ಆಯಾ ಗ್ರಾಮ ಪಂಚಾಯಿತಿ ಟಾಸ್ಕ್ ಫೋರ್ಸ್ ಸಮಿತಿ, ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ವರ್ಗದವರು ಮತ್ತು ಕಂದಾಯ ನಿರೀಕ್ಷಕರು ಸೇರಿದಂತೆ ಸಿಬ್ಬಂದಿ ವರ್ಗದವರು ತಮ್ಮ ಜವಾಬ್ದಾರಿಗೆ ವಹಿಸದ್ದ ಕ್ಷೇತ್ರಗಳಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸಿ ಸಮಗ್ರವಾದ ವರದಿಯನ್ನು ನೀಡಿದ್ದಾರೆ. ಅದರನ್ವಯ ತಾಲೂಕು ಮಟ್ಟದ ಅಧಿಕಾರಿ ವರ್ಗದವರು ಸ್ಥಳ ಪರಿಶೀಲನೆ ನಡೆಸಿ ಪರಿಹಾರವನ್ನು ನೀಡುವಲ್ಲಿ ತೊಡಗಿದ್ದಾರೆ ಎಂದು ಕಿರಣ್ ಗೌರಯ್ಯ ತಿಳಿಸಿದ್ದಾರೆ.