ಐಗೂರು, ಜೂ. ೪: ಗ್ರಾಮಗಳಲ್ಲಿ ಕಾಡಾನೆಗಳ ಉಪಟಳದಿಂದ ಬೇಸತ್ತಿದ್ದ ಐಗೂರಿನ ಜನರು ಇದೀಗ ಕೋತಿಯ ಹಾವಳಿಯಿಂದ ಹೈರಣಾರಾಗಿದ್ದಾರೆ. ಕೃಷಿ ಪತ್ತಿನ ಕಟ್ಟಡದ ಬಳಿ ಇರುವ ಮಾವಿನ ಮರಗಳ ಹಣ್ಣುಗಳನ್ನು ಕೆಳಗೆ ಉದುರಿಸಿ ಪುಂಡಾಟ ತೋರುತ್ತಿದೆ. ಕಬ್ಬಿಣ ಸೇತುವೆ ಮೇಲೆ ಓಡಾಡುತ್ತಾ ನರ್ಸರಿ ರಸ್ತೆಯಲ್ಲಿ ಒಂದು ಮನೆಯಿಂದ ಇನ್ನೊಂದು ಮನೆಗೆ ಜಿಗಿಯುತ್ತಾ ಮನೆಯ ಮಾಲೀಕರು ಹೊರಗೆ ಬಂದಾಗ ಮಾಲೀಕರೆದುರೇ ಮನೆಯ ಹಂಚುಗಳನ್ನು ಒಂದೊAದಾಗಿ ಕಿತ್ತು ಬಿಸಾಕಿದೆ. ಮನೆಯ ಪಕ್ಕದಲ್ಲಿ ಒಣಗಲು ಹಾಕಿದ ಬಟ್ಟೆಗಳನ್ನು ಹರಿದು ಹಾಕುತ್ತಿದೆ. ಈ ಕಪಿಚೇಷ್ಠೆಯಿಂದ ಪಾರಾಗಲು ಗ್ರಾಮದ ಜನ ಹೆಣಗಾಡುತ್ತಿದ್ದಾರೆ.