ಕುಶಾಲನಗರ, ಜು. ೩:
ದ್ವಿಚಕ್ರ ವಾಹನದಲ್ಲಿ ಹಾವು
ಸೇರಿ ಆತಂಕ ಹುಟ್ಟಿಸಿದ ಪ್ರಸಂಗ
ಕುಶಾಲನಗರದ ಸಮೀಪ ಕೊಪ್ಪ
ಗ್ರಾಮದಲ್ಲಿ ನಡೆದಿದೆ.
ಕೊಪ್ಪ ದಂತ ಚಿಕಿತ್ಸಾಲಯದ
ಸೂದನ ಗಣೇಶ್ ಎಂಬವರು
ಮಧ್ಯಾಹ್ನ ತಮ್ಮ ಸ್ಕೂಟಿಯಲ್ಲಿ
ಊಟಕ್ಕೆ ತೆರಳುತ್ತಿದ್ದ ಸಂದರ್ಭ ಹೆಲ್ಮೆಟ್ ತೆಗೆಯಲು ಸ್ಕೂಟಿ ಬಾಕ್ಸ್
ತೆರೆದಾಗ ಹಾವು ಬುಸು ಗುಡುತ್ತಿರುವುದು ಕಂಡುಬAದಿದೆ.
ತಕ್ಷಣ ಸ್ಥಳದಲ್ಲಿ ಜನರು ಸೇರಿ ಹಾವನ್ನು ಓಡಿಸಲು ಯತ್ನಿಸಿದರು.
ಗಲಿಬಿಲಿಗೊಂಡ ಹಾವು ಸ್ಕೂಟಿಯ ಎಂಜಿನ್ ಭಾಗಕ್ಕೆ ಸೇರಿದ
ಕಾರಣ ನಂತರ ಉರಗ ತಜ್ಞರನ್ನು ಕರೆಸಿ ಹಾವನ್ನು ಸುರಕ್ಷಿತವಾಗಿ
ಹೊರತೆಗೆದು ನಂತರ ಕಾಡಿನತ್ತ ಬಿಡಲಾಯಿತು.