ಬೆಂಗಳೂರು, ಜು. ೩: ತೋಟಗಳ ಅಭಿವೃದ್ಧಿಗಾಗಿ ಬ್ಯಾಂಕ್‌ಗಳಿAದ ಸಾಲ ಪಡೆದುಕೊಂಡಿರುವ ಬೆಳೆಗಾರರಿಗೆ ಸಾಲ ಮರುಪಾವತಿಸುವ ಗಡುವು ಸೋಮವಾರ (ಜೂನ್ ೩೦) ಕೊನೆಗೊಂಡ ಕಾರಣ ಕೊಡಗು, ಚಿಕ್ಕಮಗಳೂರು ಮತ್ತು ಹಾಸನದ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಸುಮಾರು ೬,೦೦೦ ಕಾಫಿ ಬೆಳೆಗಾರರು ತಮ್ಮ ತೋಟಗಳನ್ನು ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿದ್ದಾರೆ. ಈ ಬೆಳೆಗಾರರು ರಾಜ್ಯದ ವಿವಿಧ ಬ್ಯಾಂಕುಗಳಿಗೆ ಒಟ್ಟಾರೆಯಾಗಿ ೫೦೦ ಕೋಟಿ ರೂ.ಗಳಿಗೂ ಹೆಚ್ಚು ಸಾಲ ಬಾಕಿ ಉಳಿಸಿಕೊಂಡಿದ್ದಾರೆ.

ಸೆಕ್ಯುರಿಟೈಸೇಶನ್ ಮತ್ತು ಹಣಕಾಸು ಆಸ್ತಿಗಳ ಪುನರ್ನಿರ್ಮಾಣ ಮತ್ತು ಭದ್ರತಾ ಬಡ್ಡಿ ಜಾರಿ (Seಛಿuಡಿiಣisಚಿಣioಟಿ ಚಿಟಿಜ ಖeಛಿoಟಿsಣಡಿuಛಿಣioಟಿ oಜಿ ಈiಟಿಚಿಟಿಛಿiಚಿಟ ಂsseಣs ಚಿಟಿಜ ಇಟಿಜಿoಡಿಛಿemeಟಿಣ oಜಿ Seಛಿuಡಿiಣಥಿ Iಟಿಣeಡಿesಣ (SಂಖಈAಇSI) ) ಕಾಯ್ದೆಯಡಿಯಲ್ಲಿ ತೋಟಗಳನ್ನು ಹರಾಜು ಮಾಡುವ ಮೂಲಕ ತಮ್ಮ ಬಾಕಿ ಹಣವನ್ನು ವಸೂಲಿ ಮಾಡಲು ಬ್ಯಾಂಕ್‌ಗಳು ಸಜ್ಜಾಗಿವೆ. ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳ ಸಾಲ ಪಡೆದಿರುವ ಕಾಫಿ ಬೆಳೆಗಾರರಿಗೆ ವಿವಿಧ ಬ್ಯಾಂಕ್‌ಗಳು ಈಗಾಗಲೇ ಆಸ್ತಿ ಹರಾಜಿನ ನೋಟೀಸ್‌ಗಳನ್ನು ನೀಡಿವೆ.

ಕಾಫಿ ಬೆಳೆ ಸಾಲವು ಸರ್ಫೇಸಿ ಕಾಯ್ದೆಯ ವ್ಯಾಪ್ತಿಗೆ ಬಾರದಿದ್ದರೂ, ತೋಟಗಳ ಅಭಿವೃದ್ಧಿಗಾಗಿ ತೆಗೆದುಕೊಂಡ ಸಾಲಗಳು ದಂಡದ ಕ್ರಮಕ್ಕೆ ಗುರಿಯಾಗುತ್ತವೆ ಎಂದು ಕಾಫಿ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ ಹಲವು ದಶಕಗಳಿಂದ ವಿವಿಧ ಅಭಿವೃದ್ಧಿ ಚಟುವಟಿಕೆಗಳಿಗಾಗಿ ಸಾಲ ಪಡೆದ ಕರ್ನಾಟಕದ ಸಾವಿರಾರು ಕಾಫಿ ಬೆಳೆಗಾರರು ಬ್ಯಾಂಕ್‌ಗಳಿಗೆ ಸಾಲ ಮರುಪಾವತಿ ಮಾಡದೆ ಸುಸ್ತಿದಾರರಾಗಿದ್ದಾರೆ ಮತ್ತು ಪಾವತಿಸದೆ ಉಳಿದಿರುವ ಒಟ್ಟು ಮೊತ್ತವು ಈಗ ೫೦೦ ಕೋಟಿ ರೂ.ಗಳಿಗೂ ಹೆಚ್ಚಾಗಿದೆ ಎಂದು ಭಾರತೀಯ ಕಾಫಿ ಮಂಡಳಿಯ ಅಧ್ಯಕ್ಷ ಎಂ.ಜೆ. ದಿನೇಶ್ ಹೇಳಿದ್ದಾರೆ. ಸಾಲ ಮರುಪಾವತಿ ಗಡುವನ್ನು ಮತ್ತಷ್ಟು ವಿಸ್ತರಿಸಲು ಈ ವಾರ ದೆಹಲಿಯಲ್ಲಿ ಹಣಕಾಸು ಸಚಿವಾಲಯದ ಅಧಿಕಾರಿಗಳನ್ನು ಭೇಟಿ ಮಾಡುವುದಾಗಿ ದಿನೇಶ್ ತಿಳಿಸಿದ್ದಾರೆ.

“ಕಳೆದ ವರ್ಷ ನವೆಂಬರ್‌ನಲ್ಲಿ ನಾವು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಕಾಫಿ ಬೆಳೆಗಾರರನ್ನು ರಕ್ಷಿಸುವ ಪ್ಯಾಕೇಜ್ ಅನ್ನು ಕೋರಿದ್ದೇವೆ. ಅವರು ನಮ್ಮ ಬೇಡಿಕೆಗಳಿಗೆ ಒಪ್ಪಿಕೊಂಡರು ಮತ್ತು ಹಣಕಾಸು ಕಾರ್ಯದರ್ಶಿಯೊಂದಿಗೆ ಸಮಾಲೋಚಿಸಿ, ಒಂದು ಬಾರಿ ಇತ್ಯರ್ಥ (ಔಖಿS) ಯೋಜನೆಯನ್ನು ಸಿದ್ಧಪಡಿಸಲಾಯಿತು. ಔಖಿS ಯೋಜನೆಯಡಿಯಲ್ಲಿ, ಕಾಫಿ ಬೆಳೆಗಾರರಿಗೆ ತಮ್ಮ ಸಾಲವನ್ನು ಮರುಪಾವತಿಸಲು ಜೂನ್ ೩೦ ರವರೆಗೆ ಸಮಯ ನೀಡಲಾಯಿತು. ಮಾರ್ಚ್ ೩೧, ೨೦೨೫ ರ ಮೊದಲು ತಮ್ಮ ಬಾಕಿ ಸಾಲದ ಮೊತ್ತದ ಕನಿಷ್ಟ ೫% ಪಾವತಿಸಿದ ಎಲ್ಲಾ ಬೆಳೆಗಾರರಿಗೆ SಂಖಈAಇSI ಕಾಯ್ದೆಯಡಿ ಯಾವುದೇ ದಂಡದ ಕ್ರಮದಿಂದ ವಿನಾಯಿತಿ ನೀಡಲಾಗಿದೆ” ಎಂದು ದಿನೇಶ್ ವಿವರಿಸಿದ್ದಾರೆ.

ಹಣಕಾಸು ಸಚಿವಾಲಯ ರೂಪಿಸಿದ ಪ್ಯಾಕೇಜ್ ಅಡಿಯಲ್ಲಿ, ಕಾಫಿ ಬೆಳೆಗಾರರಿಗೆ ತಮ್ಮ ಸಾಲವನ್ನು ಮರುಪಾವತಿಸಲು ಎಂಟು ತಿಂಗಳ ಕಾಲಾವಕಾಶ ನೀಡಲಾಯಿತು ಮತ್ತು ರೂ. ೨೫ ಲಕ್ಷಕ್ಕಿಂತ ಕಡಿಮೆ ಸಾಲಗಳಿಗೆ ಸರಳ ೩% ಬಡ್ಡಿದರ ಮತ್ತು ರೂ. ೨೫ ಲಕ್ಷಕ್ಕಿಂತ ಹೆಚ್ಚಿನ ಮತ್ತು ರೂ. ೫೦ ಲಕ್ಷದವರೆಗಿನ ಸಾಲಗಳಿಗೆ ೪% ಬಡ್ಡಿದರವನ್ನು ವಿಧಿಸಲಾಯಿತು. ರಾಜ್ಯದಲ್ಲಿ ಇಲ್ಲಿಯವರೆಗೆ ಕೇವಲ ೫೧೮ ಬೆಳೆಗಾರರು ಮಾತ್ರ ಓಟಿಎಸ್ ಯೋಜನೆಯ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ.

ಮಾರ್ಚ್ ೩೧ ರ ಮೊದಲು ಓಟಿಎಸ್ ಅನ್ನು ಆಯ್ಕೆ ಮಾಡಿಕೊಳ್ಳದ ರೈತರಿಗೆ ಬ್ಯಾಂಕುಗಳು ನೋಟಿಸ್ ನೀಡಲು ಪ್ರಾರಂಭಿಸಿವೆ ಎಂದು ದಿನೇಶ್ ಮಾಹಿತಿ ನೀಡಿದ್ದಾರೆ. ಅವರು ಜುಲೈ ೧ ರಿಂದ ಸಾಲಗಳ ವಸೂಲಾತಿಯನ್ನು ಬ್ಯಾಂಕುಗಳು ಪ್ರಾರಂಭಿಸಲಿವೆ. “ಕಡಿಮೆ ಇಳುವರಿ, ಹೆಚ್ಚಿನ ಕಾರ್ಯಾಚರಣೆಯ ವೆಚ್ಚದಂತಹ ಹಲವಾರು ಸವಾಲುಗಳನ್ನು ಕಾಫಿ ಬೆಳೆಗಾರರು ಎದುರಿಸುತ್ತಿದ್ದಾರೆ. ಕಾರ್ಮಿಕ ಮತ್ತು ಉತ್ಪಾದನಾ ವೆಚ್ಚಗಳು ಇತ್ತೀಚಿನ ವರ್ಷಗಳಲ್ಲಿ ತೀವ್ರವಾಗಿ ಏರಿವೆ. ಸಣ್ಣ ಬೆಳೆಗಾರರು ಒಂದು ಅಥವಾ ಎರಡು ಕಂತುಗಳಲ್ಲಿ ಮರುಪಾವತಿ ಮಾಡುವುದು ತುಂಬಾ ಕಷ್ಟಕರವಾಗಿರುತ್ತದೆ. ಮರುಪಾವತಿಗೆ ಗಡುವನ್ನು ವಿಸ್ತರಿಸಲು ನಾವು ಬ್ಯಾಂಕುಗಳು ಮತ್ತು ಸರ್ಕಾರವನ್ನು ಒತ್ತಾಯಿಸುತ್ತೇವೆ” ಎಂದು ಚಿಕ್ಕಮಗಳೂರಿನ ಬೆಳೆಗಾರ ಮತ್ತು ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ಅರವಿಂದ್ ರಾವ್ ತಿಳಿಸಿದ್ದಾರೆ.

- ಕೋವರ್‌ಕೊಲ್ಲಿ ಇಂದ್ರೇಶ್