ಜೂನ್ ೨೦, ಶುಕ್ರವಾರ ಗುಜರಾತ್‌ನ ಕೀವಾಡಿಯ ಎಂಬ ಜಿಲ್ಲೆಗೆ ಭೇಟಿ ನೀಡಿದ್ದೆ, ಅಲ್ಲಿನ ವಾತಾವರಣ, ಪ್ರಕೃತಿ ಹೊಲ, ದೇಗುಲಗಳು ಯಾವುದೋ ದೇಶ ಪ್ರೇಮದ ಸಿನೆಮಾದ ನೆನಪು ತಂದವು.

ಗುಜರಾತ್ ರಾಜ್ಯ ತನ್ನ ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಹೆಸರುವಾಸಿ. ರೋಮಾಂಚಕ ಉತ್ಸವಗಳು ಮತ್ತು ರಾಣಿ ಕೆ ವಾವ್, ಸೋಮನಾಥ ಹಾಗೂ ದ್ವಾರಕಾಧೀಶ ದೇವಾಲಯಗಳಂತಹ ವಾಸ್ತುಶಿಲ್ಪದ ಅದ್ಭುತಗಳು ಸೇರಿವೆ. ಜೊತೆಗೆ ರಾಜ್ಯವು ವನ್ಯಜೀವಿಗಳಿಗೆ, ವಿಶೇಷವಾಗಿ ‘ಗಿರ್ ರಾಷ್ಟಿçÃಯ ಉದ್ಯಾನವನ’ದಲ್ಲಿರುವ ಏಷ್ಯಾಟಿಕ್ ಸಿಂಹಗಳಿಗೆ ಮತ್ತು ಅದರ ವಿಶಾಲವಾದ ‘‘ರಾನ್ ಆಫ್ ಕಚ್’ಗೆ ಹೆಸರುವಾಸಿ. ಇದಲ್ಲದೆ ಗುಜರಾತ್ ರಾಜ್ಯ ದೇಶದ ಪ್ರಮುಖ ಕೈಗಾರಿಕಾ ಮತ್ತು ಆರ್ಥಿಕ ವಲಯವೂ ಹೌದು. ಅಲ್ಲದೆ ವಿವಿಧ ಬೆಳೆಗಳ ಪ್ರಮುಖ ಉತ್ಪಾದನಾ ಕೇಂದ್ರದಲ್ಲೂ ಅಗ್ರಸ್ಥಾನ ಹೊಂದಿದೆ.

ಇಲ್ಲಿದೆ ವಿಶ್ವದ ಅತಿ ಎತ್ತರದ ಗಗನಚುಂಬಿ, ಕಂಚಿನ ಸರ್ದಾರ್ ವಲ್ಲಭಬಾಯಿ ಪಟೇಲ್‌ರವರ ಏಕತಾ ಪ್ರತಿಮೆ. ಸುಮಾರು ೧೮೨ ಮೀಟರ್ (೫೯೭ ಅಡಿ) ಎತ್ತರದ ಈ ಪ್ರತಿಮೆಯು ಸರ್ದಾರ್ ಪಟೇಲ್‌ರವರ ಭಾರತದ ಪರ ಹೋರಾಟದ ಕತೆಗಳನ್ನು ಹೇಳುತ್ತಾ ಹಾಗೂ ಅವರ ಸೇವೆಯನ್ನು ನೆನಪಿಸುತ್ತಾ ನರ್ಮದಾ ನದಿ ತೀರದಲ್ಲಿ ಸೆಟೆದು ನಿಂತಿದೆ.

ನರೆAದ್ರ ಮೋದಿ ಹಿಂದೆ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದಾಗ ಈ ಪ್ರತಿಮೆಯ ನಿರ್ಮಾಣಕ್ಕೆ ಪ್ರಸ್ತಾಪನೆ ಇಟ್ಟಿದ್ದರು.

ಅಕ್ಟೋಬರ್ ೨೦೧೩ ರಲ್ಲಿ ಇದರ ನಿರ್ಮಾಣವನ್ನು ಭಾರತದ ಲಾರ್ಸೆನ್ ಮತ್ತು ಟ್ಯೂಬ್ರೂ (ಎಲ್ ಅಂಡ್ ಟಿ) ಕಂಪೆನಿಯು ಸುಮಾರು ೨೨ ಬಿಲಿಯನ್ ರೂಪಾಯಿಯ ವೆಚ್ಚದಲ್ಲಿ ಕೈಗೆತ್ತಿಕೊಂಡಿತು. ಇದರ ವಿನ್ಯಾಸವನ್ನು ರಾಮ್ ವಿ. ಸತರ್ ಅವರು ಮಾಡಿದರು. ೨೧ ಅಕ್ಟೋಬರ್ ೨೦೧೮ರಲ್ಲಿ ಇಂದಿನ ಪ್ರಧಾನಿ ನರೆಂದ್ರ ಮೋದಿ ಈ ಗಗನ ಚುಂಬಿ ಪ್ರತಿಮೆಯನ್ನು ಅನಾವರಣ ಗೊಳಿಸಿದರು. ಆ ದಿನ ಸರ್ದಾರ್ ಪಟೇಲ್‌ರವರ ೧೪೩ನೆಯ ಹುಟ್ಟುಹಬ್ಬ ಆಗಿದ್ದು, ಆ ದಿನವೇ ಆ ದೈತ್ಯ ಕಂಚಿನ ಪ್ರತಿಮೆ ಲೋಕಾರ್ಪಣೆಗೊಂಡಿತು.

ಪ್ರತಿಮೆಗಾಗಿ ನಡೆದ ಮ್ಯಾರಥಾನ್

ಗುಜರಾತ್‌ನ ಆಗಿನ ಮುಖ್ಯಮಂತ್ರಿಯಾಗಿದ್ದ ನರೆಂದ್ರ ಮೋದಿ ಅವರು ಅಧಿಕಾರದ ತಮ್ಮ ಹತ್ತನೇ ವರ್ಷದ ಆರಂಭವನ್ನು ಗುರುತಿಸಲು ಅಕ್ಟೋಬರ್ ೭-೨೦೧೩ ರಂದು ಈ ಯೋಜನೆಯನ್ನು ಘೋಷಿಸಿದ್ದರು. ಈ ಯೋಜನೆಯನ್ನು ಕಾರ್ಯಗತಗೊಳಿಸಲು ಅವರ ಅಧ್ಯಕ್ಷತೆಯಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ ರಾಷ್ಟಿçÃಯ ಏಕತಾ ಟ್ರಸ್ಟ್ (ಎಸ್.ವಿ.ಪಿ. ಆರ್. ಈ. ಟಿ) ಎಂಬ ಹೆಸರಿನಲ್ಲಿ ಏಕತಾ ನಗರ್ ಹಾಗೂ ಏಕತಾ ಸಮಾಜವನ್ನು ರಚಿಸಲಾಯಿತು.

ರೈತರು ತಾವು ಬಳಸಿದ ಕೃಷಿ ಉಪಕರಣಗಳನ್ನು ದಾನ ಮಾಡುವಂತೆ ಮನವಿ ಮಾಡುವ ಮೂಲಕ ಪ್ರತಿಮೆಗೆ ಅಗತ್ಯವಾದ ಲೋಹಗಳನ್ನು ಸಂಗ್ರಹಿಸಲು ೨೦೧೩ರಲ್ಲಿ ಏಕತಾ ಪ್ರತಿಮೆಯ ಚಳುವಳಿಯನ್ನು ಪ್ರಾರಂಭಿಸಲಾಯಿತು. ಈ ಯೋಜನೆಯನ್ನು ಬೆಂಬಲಿಸಲು ಡಿಸೆಂಬರ್ ೧೫-೨೦೧೩ ರಂದು ಸೂರತ್ ಮತ್ತು ವಡೋದರಾದಲ್ಲಿ ‘‘ರನ್ ಫಾರ್ ಯುನಿಟಿ’’ ಎಂಬ ಮ್ಯಾರಥಾನ್ ಅನ್ನು ನಡೆಸಲಾಯಿತು.

೨೦೧೬ರ ಹೊತ್ತಿಗೆ ಒಟ್ಟು ೧೩೫ ಮೆಟ್ರಿಕ್ ಟನ್ ಸ್ಕಾçö್ಯಪ್ ಕಬ್ಬಿಣವನ್ನು ಸಂಗ್ರಹಿಸಲಾಯಿತು ಮತ್ತು ಅದರಲ್ಲಿ ಸುಮಾರು ೧೦೯ ಟನ್ ಗಳನ್ನು ಸಂಸ್ಕರಿಸಿದ ನಂತರ ಪ್ರತಿಮೆಯ ಅಡಿಪಾಯವನ್ನು ಮಾಡಲು ಬಳಸಲಾಯಿತು.

ಏಕತಾ ನಗರ್ ಅದ್ಭುತ

ಗುಜರಾತ್ ಸರ್ಕಾರ, ನಿರ್ಮಿಸಿದ ಏಕತಾ ನಗರವು ನಮ್ಮ ನೋಟ, ಯೋಚನೆಗಿಂತ ಹೆಚ್ಚು ಅಭಿವೃದ್ಧಿಗೊಂಡ ಸ್ಥಳವಾಗಿದೆ. ಹಸಿರಿನಿಂದ ಹೊದ್ದುಕೊಂಡ ಬೆಟ್ಟ, ಶುದ್ದ ಹಾಗೂ ಸಮೃದ್ಧ ನೀರನ್ನು ಒಡಲಲ್ಲಿ ಇಟ್ಟುಕೊಂಡು ನೆಲೆಸಿರುವ ನರ್ಮದಾ ನದಿ ತೀರದಲ್ಲಿ ನಿರ್ಮಿಸಲಾಗಿದೆ, ಈ ಬೃಹತ್ ‘‘ಏಕತಾ ನಗರ್’’. ಅನ್ನು ಸುಮಾರು ೬೭೮೮ ಎಕರೆಯಲ್ಲಿ ನಿರ್ಮಾಣಗೊಂಡಿರುವ ಈ ಪ್ರದೇಶದಲ್ಲಿ ಕೇವಲ ವಿಶ್ವದ ಅತೀ ಎತ್ತರದ ಪ್ರತಿಮೆ ಮಾತ್ರ ಇರುವುದಲ್ಲ; ಸರ್ದಾರ್ ಸರೋವರ್ ಡ್ಯಾಮ್, ಜಂಗಲ್ ಸಫಾರಿ, ವ್ಯಾಲಿ ಆಫ್ ಫ್ಲವರ್ಸ್ ಮೇe಼ï ಗಾರ್ಡನ್ ಮೀನುವಾಕಿ ಫಾರೆಸ್ಟ್ ಹಾಗೂ ಏಕತಾ ಮಾಲ್, ಫುಡ್ ಕೋರ್ಟ್ಗಳನ್ನು ನಾವಿಲ್ಲಿ ಕಾಣಬಹುದು. ಈ ಏಕತಾ ನಗರ್ ಅಲ್ಲಿ ಯಾವುದೇ ವಾಹನಗಳು ಪ್ರವೇಶ ಮಾಡುವಂತಿಲ್ಲ, ನಗರದ ಹೊರಭಾಗದಲ್ಲಿರುವ ಬೃಹತ್ ವಾಹನ ನಿಲುಗಡೆ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸಿ ಅಲ್ಲಿಯ ಇ-ಆಟೋ ಹಾಗೂ ಇ-ಬಸ್‌ಗಳಲ್ಲಿ ಸಂಚರಿಸಬೇಕು ಅಥವಾ ಅಲ್ಲಿಯ ಸೈಕಲ್‌ಗಳನ್ನು ಬಾಡಿಗೆಗೆ ತೆಗೆದು ಕೊಳ್ಳಬಹುದು. ಕೀವಾಡಿಯ ಜಿಲ್ಲೆಯ ಏಕತಾ ನಗರವು ಆದಿವಾಸಿ ಜನಾಂಗಕ್ಕೆ ಸೇರಿದ್ದು, ಅಲ್ಲಿಯ ಜನರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ತರಬೇತಿ ನೀಡಿ, ಅವರಿಗೆ ಅಲ್ಲಿಯ ಇ-ಬಸ್, ಇ-ಆಟೋ ಹಾಗೂ ಅಲ್ಲಿ ಕೆಲಸ ಮಾಡುವಂತೆ ಪ್ರೋತ್ಸಾಹಿಸಲಾಗಿದೆ. ಅಲ್ಲಿಯ ಮಹಿಳೆಯರಿಗಾಗಿ ಅಲ್ಲಿಯ ಸರ್ಕಾರವು (ಪಿಂಕ್) ಗುಲಾಬಿ ಬಣ್ಣದ ಆಟೋಗಳನ್ನು ನೀಡಿ ಚಲಾಯಿಸಲು ತರಬೇತಿ ನೀಡಿದೆ.

ಇಲ್ಲಿಯ ಎಲ್ಲಾ ಪ್ರವಾಸಿ ಕೇಂದ್ರಗಳನ್ನು ನೋಡಬೇಕಾದಲ್ಲಿ ೭೫೦ ರೂಪಾಯಿಯ ಟಿಕೆಟ್ ಅನ್ನು ಒಬ್ಬನಿಗೆ ನಿಗದಿಪಡಿಸಲಾಗಿದೆ. ಏಕತಾ ನಗರದೊಳಗೆ ಕಾಲಿಟ್ಟ ಕ್ಷಣವೇ ಮನಸ್ಸು ಸ್ತಬ್ಧಗೊಳ್ಳುತ್ತದೆ. ಎಲ್ಲೆಲ್ಲಿ ನೋಡಿದರೂ ಪುಷ್ಪ ಪೊದೆಗಳು, ಹಸಿರಿನ ನೋಟ, ಹಾಗೂ ಅಭಿವೃದ್ಧಿ ಭಾರತದ ಕನಸು ನನಸಾಗಿರುವುದನ್ನು ಅಲ್ಲಿ ನೋಡಬಹುದು. ಅಷ್ಟೊಂದು ಸುಂದರ, ಅಷ್ಟೊಂದು ವಿಶೇಷ, ಅಷ್ಟೊಂದು ಶುದ್ಧ, ಅಷ್ಟೊಂದು ಶುಚಿ.

ಪ್ರತಿಮೆಯ ಹತ್ತಿರ ಹೋಗ ಬೇಕಾದಲ್ಲಿ ಸುಮಾರು ಭದ್ರತಾ ನಿಯಮಗಳನ್ನು ದಾಟಬೇಕು. ಇಲ್ಲಿಯ (ಸಿ.ಐ.ಎಸ್.ಎಫ್) ಭದ್ರತಾ ಅಧಿಕಾರಿಗಳು ಬರೀ ಕ್ಯಾಮರಾಗಳನ್ನು ಹಾಗೂ ನೀರಿನ ಬಾಟಲ್‌ಗಳನ್ನು ಮಾತ್ರ ತೆಗೆದುಕೊಂಡು ಹೋಗಲು ಬಿಡುತ್ತಾರೆ. ವಿಶ್ವದ ಅತಿದೊಡ್ಡ ಪ್ರತಿಮೆಯ ಭದ್ರತೆಗಾಗಿ ಹಾಗೂ ಏಕತಾ ನಗರದ ಭದ್ರತೆಗಾಗಿ ಈ ಅಧಿಕಾರಿಗಳು ಪ್ರಮುಖ ಜವಾಬ್ದಾರಿಯನ್ನು ವಹಿಸಿದ್ದಾರೆ. ಪ್ರತಿಮೆಯ ಆವರಣದೊಳಗೆ ಸಗಂಧವನ್ನು ಪಸರಿಸುವ ಸಂಪಿಗೆಯ ವನವನ್ನು ದಾಟಿ ಹೋಗಬೇಕು. ಎಲ್ಲೆಲ್ಲೂ ನೋಡಿದರೂ ಇಲ್ಲಿ ಅಮುಲ್ (ಆನಂದ್ ಮಿಲ್ಕ್ ಯೂನಿಯನ್ ಲಿಮಿಟೆಡ್) ಎಲ್ಲರ ಊಟೋಪಚಾರದ ಹಾಗೂ ತಿಂಡಿಯ ಸೇವೆನೆಗೆ ಪ್ರಮುಖ ಪಾತ್ರವನ್ನು ವಹಿಸಿಕೊಂಡಿದೆ.

ಹಾಗೆ ಅಲ್ಲಿಯ ಫುಡ್ ಕೋರ್ಟ್ಗಳಲ್ಲಿ ಯಾವುದೇ ವಿದೇಶಿ ಕಂಪನಿಯ ಹೊಟೇಲ್‌ಗಳು ಇರುವುದಿಲ್ಲ. ಈ ಪಯಣದಲ್ಲಿ ನಾನು ಕೇವಲ ಈ ಪ್ರತಿಮೆಯನ್ನು ನೋಡಬಹುದು ಹಾಗೂ ಅದರ ಒಳಗೆ ಇರುವ ಪುಸ್ತಕಾಲಯವನ್ನು ನೋಡಬಹುದು ಎಂದುಕೊAಡಿದ್ದೆ, ಆದರೆ ಅಲ್ಲಿ ಪ್ರತಿಮೆಯ ಒಳಗೆ ೨ ಹೈಸ್ಪೀಡ್ ಲಿಫ್ಟ್ಗಳನ್ನು ಅಳವಡಿಸಿದ್ದು, ಸುಮಾರು ೧೫೨ ಮೀಟರ್ (೫೦೨ ಅಡಿ) ಎತ್ತರದಲ್ಲಿ ಇರುವ ವ್ಯೂಯಿಂಗ್ ಗ್ಯಾಲರಿಗೆ ಹೋಗಲು ಅವಕಾಶವಿದೆ. ಅಲ್ಲಿ ಆ ಎತ್ತರದಿಂದ ಅಂದರೆ ಸರ್ದಾರ್ ಪಟೇಲ್‌ರವರ ಪ್ರತಿಮೆಯ ಎದೆ ಭಾಗದ ಒಳಗಿನಿಂದ ಗ್ಯಾಲರಿಯನ್ನು ನಿರ್ಮಿಸಿದ್ದು, ಅಲ್ಲಿನ ಕಿಂಡಿಗಳಿAದ ಕಾಣುವ ನೋಟವು ಬಹಳ ರೋಮಾಂಚಕ. ಹಾಗೇ ಆ ೫೦೨ ಅಡಿಯಿಂದ ಕೆಳಗೆ ಈ ವಿಶ್ವವಿಖ್ಯಾತ ಪ್ರತಿಮೆಯನ್ನು ಹೇಗೆ ನಿರ್ಮಿಸಿದ್ದಾರೆ ಎಂದು ನೋಡಲು ಅಲ್ಲಿ ೨ ಚಿಕ್ಕ ಗಾಜಿನ ಗೋಡೆಯನ್ನು ನಿರ್ಮಿಸಲಾಗಿದೆ.

ಕೆಳಗೆ ಬಂದಾಗ ನಾವು ಪ್ರತಿಮೆಯ ಅತಿ ಹತ್ತಿರದ ಭಾಗ ಅಂದರೆ ಸರ್ದಾರ್ ಪಟೇಲ್‌ರವರ ಕಾಲಿನ ಭಾಗದಲ್ಲಿ ನಿಂತಾಗ ಅದರ ಮುಂದೆ ನಾನು ಒಂದು ಚಿಕ್ಕ ಲಿಲ್ಲಿಪುಟ್‌ನಂತೆ ಭಾಸವಾಯಿತು. ಅಲ್ಲಿಂದ ನಾವು ಹತ್ತಿರವಿದ್ದ ಜಂಗಲ್ ಸಫಾರಿಗೆ ಹೋದವು. ಈ ಸಫಾರಿಯ ಉಸ್ತುವಾರಿ ಗುಜರಾತ್ ಫಾರೆಸ್ಟ್ ಗಾರ್ಡ್ಸ್ ಫೋರ್ಸ್ ನೋಡಿಕೊಳ್ಳುತ್ತವೆ. ಅಲ್ಲಿ ಎಲ್ಲಾ ಜಾತಿಯ ಪ್ರಾಣಿಗಳು ಹಾಗೂ ಒಂದು ಬೃಹತ್ ಪಕ್ಷಿ ವನವು ಇದೆ. ಹಾಗೆ ಅಲ್ಲಿ ವೈಟ್ ಲಯನ್, ವೈಟ್ ಟೈಗರ್ ಮುಂತಾದ ಅನೇಕ ಪ್ರಾಣಿಗಳನ್ನು ಸಂರಕ್ಷಿಸಲಾಗಿದೆ. ಅಲ್ಲಿಯ ಅಭಿವೃದ್ಧಿ ಹೇಗೆ ಇದೆ ಎಂದರೆ ಅಲ್ಲಿಯ ಬಸ್ ನಿಲ್ದಾಣವು ಕೂಡ ಹವಾನಿಯಂತ್ರಿತ. ನಾವು ಭೇಟಿ ನೀಡಿದ ದಿನ ಅಲ್ಲಿ ಸುಮಾರು ೩೯೦ ರಿಂದ ೪೧೦ ತಾಪಮಾನದ ಬಿಸಿಲಿತ್ತು. ಈ ಕಾರಣದಿಂದಲೇ ಅಲ್ಲಿ ಪ್ರತಿ ೫೦೦ ಮೀಟರ್‌ಗಳಲ್ಲಿ ತಣ್ಣನೆಯ ನೀರು ಸಿಗುವ ಯಂತ್ರಗಳನ್ನು ಅಳವಡಿಸಿದ್ದಾರೆ.

ಏಕತಾ ಮಾಲ್‌ನಲ್ಲಿ ಅಲ್ಲಿನ ಪ್ರದೇಶದ ಸರಕುಗಳು ಹಾಗೂ ಅಲ್ಲಿಯ ಜನರು ಮಗ್ಗದಿಂದ ಮಾಡಿದ ಉಡುಪುಗಳನ್ನು ಖರೀದಿಸಬಹುದಾಗಿದೆ. ಕಾಲುದಾರಿಯಲ್ಲಿ ಹೋಗುವವರಿಗೆ ಒಂದು ದಾರಿ, ಸೈಕಲ್ ಪಾತ್, ಬಸ್ ಹೋಗಲು ಇನ್ನೊಂದು ದಾರಿಯಂತಹ ಮುಂದಾಲೋಚನೆ ಯಿಂದ ಇಲ್ಲಿ ರಸ್ತೆಗಳನ್ನು ನಿರ್ಮಿಸಲಾಗಿದೆ. ಹಿಂದೆ ಹೇಳಿದ ಹಾಗೆ ಇಲ್ಲಿಯ ನಿರ್ಮಾಣವನ್ನು ನೋಡಿದರೆ ಯಾವುದೋ ಅಭಿವೃದ್ಧಿಗೊಂಡ ದೇಶದ ನಗರದಂತೆ ಇದೆ. ಅಲ್ಲಲ್ಲಿ ಪುಷ್ಪದ ಪೊದೆಗಳು, ಸುಗಂಧ ಸೂಸುವ ಹೂಬನ ಹಾಗೂ ಅಲ್ಲಿಯ ವಾತಾವರಣವು ಅಲ್ಲಿಯ ಪಯಣ, ದೃಶ್ಯಗಳನ್ನು ನಮ್ಮ ಮನದೊಳಗೆ ಶಾಶ್ವತವಾಗಿ ಇರಿಸುವಂತೆ ಮಾಡಿದವು.

ಅಭಿವೃದ್ಧಿಯತ್ತ ಹೆಜ್ಜೆ ಇಡುತ್ತಿರುವ ಹೊಸ ಭಾರತದ ರೂಪವನ್ನು ನಾವು ಇಲ್ಲಿ ನೋಡಬಹುದು. ಇದು ಬರೀ ಒಂದು ಪ್ರವಾಸಿ ತಾಣವಲ್ಲ, ಇದು ಅಲ್ಲಿಯ ಜನರ ಬದುಕನ್ನು ರೂಪಿಸುವ ಹಾಗೂ ನಮ್ಮ ಭಾರತದ ಆರ್ಥಿಕ ಬೆಳವಣಿಗೆ ಹಾಗೂ ನಮ್ಮ ಭಾರತದ ಪ್ರವಾಸೊದಮ, ನಮ್ಮ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸುವ ಅತ್ಯಂತ ಕುತೂಹಲಕಾರಿ, ರೋಮಾಂಚಕಾರಿ, ವಿಶಾಲಚಿಂತನೆ ಹಾಗೂ ಸಾರ್ಥಕ ಯೋಜನೆ ಎಂದು ಅನ್ನಿಸಿತು.

-ಚಿರಂತನ್ ಚಿದ್ವಿಲಾಸ್,

ಮಡಿಕೇರಿ.