ಮಡಿಕೇರಿ, ಜು. ೩: ಬಾಂಗ್ಲಾದಿAದ ಅಕ್ರಮವಾಗಿ ಭಾರತಕ್ಕೆ ಬಂದು ಕೊಡಗಿನಲ್ಲಿ ನೆಲೆಸಿರುವ ಕುರಿತು ದೂರುಗಳಿದ್ದು, ಇಂತವರ ಪತ್ತೆಗೆ ತೋಟದ ಮಾಲೀಕರು, ಸಾರ್ವಜನಿಕರು ಕೈಜೋಡಿಸ ಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮನವಿ ಮಾಡಿ ದ್ದಾರೆ.
ಕೆಲ ಸಮಯ ದಿಂದ ಅಸ್ಸಾಂ ಸೇರಿದಂತೆ ಹೊರರಾಜ್ಯ ಕಾರ್ಮಿಕರ ಸೋಗಿನಲ್ಲಿ ಬಾಂಗ್ಲಾದಿAದ ಬರುತ್ತಿರುವ ಕುರಿತು ಮಾಹಿತಿಗಳಿರುವ ಹಿನ್ನೆಲೆ ಪ್ರತಿಕ್ರಿಯಿಸಿರುವ ರಾಮರಾಜನ್ ಅವರು, ಕೊಡಗಿಗೆ ಬರುವ ವಲಸೆ ಕಾರ್ಮಿಕರು ಜಿಲ್ಲಾದ್ಯಂತ ಚದುರಿ ಹೋಗುತ್ತಿದ್ದಾರೆ. ಇದರಿಂದ ಅಕ್ರಮ ವಲಸಿಗರನ್ನು ಪತ್ತೆ ಮಾಡುವುದು ಕಷ್ಟವಾಗುತ್ತಿದೆ.