ಶನಿವಾರಸಂತೆ, ಜು. ೩: ಸಮೀಪದ ಕೊಡ್ಲಿಪೇಟೆಯ ಎಸ್.ಕೆ.ಎಸ್. ವಿದ್ಯಾಸಂಸ್ಥೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೨೦೨೫-೨೬ನೇ ಸಾಲಿನ ವಿದ್ಯಾರ್ಥಿಗಳ ಶಾಲಾ ಸಂಸತ್ ಚುನಾವಣೆ ಆಯೋಜಿಸಲಾಗಿತ್ತು.
ಕೇಂದ್ರ ಮತ್ತು ರಾಜಯಗಳಿಗೆ ನಡೆಯುವ ಸಾರ್ವಜನಿಕ ಮಾದರಿಯ ಚುನಾವಣೆ ನಿಯಮಾನುಸಾರ ಶಾಲಾ ವಿದ್ಯಾರ್ಥಿಗಳಿಗೆ ಮತದಾನದ ಹಕ್ಕನ್ನು ಚಲಾಯಿಸುವ ಬಗ್ಗೆ ಅರಿವು ಮೂಡಿಸುವ ರೀತಿಯಲ್ಲಿ ವಿದ್ಯಾರ್ಥಿಗಳನ್ನು ಸರತಿ ಸಾಲಿನಲ್ಲಿ ನಿಲ್ಲಿಸಿ ವಿದ್ಯುನ್ಮಾನ ಯಂತ್ರಗಳಾಗಿ ಮೊಬೈಲ್‌ನಲ್ಲಿ ಇ.ವಿ.ಎಂ. ಆ್ಯಪ್ ಮೂಲಕ ಗೌಪ್ಯವಾಗಿ ಮತ ಚಲಾವಣೆ ಮಾಡಿಸಲಾಯಿತು.
ಚುನಾವಣಾಧಿಕಾರಿಯಾಗಿ ಶಾಲಾ ಮುಖ್ಯಶಿಕ್ಷಕ ಹೆಚ್.ಎಂ. ಅಭಿಲಾಷ್, ಸಹಾಯಕ ಅಧಿಕಾರಿಯಾಗಿ ಶಿಕ್ಷಕಿ ಕೆ.ಎಸ್. ಧನಲಕ್ಷಿö್ಮÃ, ಪೊಲೀಸ್ ಅಧಿಕಾರಿಗಳಾಗಿ ೧೦ನೇ ತರಗತಿಯ ವಂಶಿತ್, ಸುಜನ್, ಯಶಸ್ ಗೌಡ, ಸಹಾಯಕ ಚುನಾವಣಾ ಸಿಬ್ಬಂದಿಗಳಾಗಿ ಶಿಕ್ಷಕರು ಕರ್ತವ್ಯ ನಿರ್ವಹಿಸಿದರು.
ಚುನಾವಣೆಯಲ್ಲಿ ವಿವಿಧ ನಾಯಕರ ಸ್ಥಾನಕ್ಕೆ ವಿದ್ಯಾರ್ಥಿಗಳು ಸ್ಪರ್ಧಿಸಿದ್ದು ಮುಖ್ಯಮಂತ್ರಿಯಾಗಿ ಕೆ.ಎ. ವಿಕಾಸ್, ಉಪಮುಖ್ಯಮಂತ್ರಿಯಾಗಿ ಎಂ.ಎA. ತನ್ಮಯ್, ಕಾರ್ಯದರ್ಶಿಯಾಗಿ ಎ.ವೈ. ತನ್ಮಯಿ. ಕ್ರೀಡಾ ಮಂತ್ರಿಯಾಗಿ ಕೆ.ಕೆ. ಸಾನ್ವಿ, ಉಪ ಕ್ರೀಡಾ ಮಂತ್ರಿಯಾಗಿ ಮಿಥುನ್, ಆಹಾರ ಮಂತ್ರಿಯಾಗಿ ಕೆ.ಎಂ. ಪ್ರೀತಂ ಗೌಡ, ಉಪ ಆಹಾರ ಮಂತ್ರಿಯಾಗಿ ದುಷ್ಯಂತ್ ಗೌಡ, ಆರೋಗ್ಯ ಮಂತ್ರಿಯಾಗಿ ಕುಲದೀಪ್ ಗೌಡ, ಉಪ ಆರೋಗ್ಯ ಮಂತ್ರಿಯಾಗಿ ವೈ.ಪಿ. ಸಮೃಧ್, ತೋಟಗಾರಿಕಾ ಮಂತ್ರಿಯಾಗಿ ಬಿ.ಎಸ್. ಬೆನಕ, ಸಾಂಸ್ಕೃತಿಕ ಮಂತ್ರಿಯಾಗಿ ಎನ್.ಎಂ. ಮೋಹನಾಂಕ, ಉಪ ಸಾಂಸ್ಕೃತಿಕ ಮಂತ್ರಿಯಾಗಿ ಕೆ.ಎಂ. ಜಾಹ್ನವಿ, ಹಣಕಾಸು ಮಂತ್ರಿಯಾಗಿ ಖಲಂದರ್ ಆಯ್ಕೆಗೊಂಡರು.
ಚುನಾವಣಾ ಸಂದರ್ಭ ವಿದ್ಯಾಸಂಸ್ಥೆ ಅಧ್ಯಕ್ಷ ಮಹಾಂತ ಸ್ವಾಮೀಜಿ ಉಪಸ್ಥಿತರಿದ್ದು ವಿಜೇತ ವಿದ್ಯಾರ್ಥಿಗಳಿಗೆ ಆಶೀರ್ವದಿಸಿ ಶುಭ ಹಾರೈಸಿದರು. ಶಿಕ್ಷಕ ವೃಂದದವರು ಹಾಜರಿದ್ದರು.