ಮಡಿಕೇರಿ, ಜು. ೩: ಐತಿಹಾಸಿಕ ಮಡಿಕೇರಿ ದಸರಾದ ಆಕರ್ಷಣೆಗಳಲ್ಲಿ ಒಂದಾದ ದಶಮಂಟಪಗಳ ಸಮಿತಿಯ ನೇತೃತ್ವವನ್ನು ೨೦೨೫ರಲ್ಲಿ ಕೋಟೆ ಶ್ರೀ ಮಹಾಗಣಪತಿ ದೇವಾಲ ಯದ ದಸರಾ ಸಮಿತಿ ವಹಿಸಿಕೊಳ್ಳುತ್ತಿದ್ದು, ಅಧ್ಯಕ್ಷ ರಾಗಿ ಬಿ.ಎಂ. ಹರೀಶ್ ಅಣ್ವೇಕರ್ ಆಯ್ಕೆಯಾಗಿದ್ದಾರೆ.
ನಗರದ ಲಯನ್ಸ್ ಸಭಾಂಗಣದಲ್ಲಿ ನಡೆದ ಕೋಟೆ ಶ್ರೀ ಮಹಾಗಣಪತಿ ಸಮಿತಿಯ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕೋಟೆ ಶ್ರೀ ಮಹಾಗಣಪತಿ ದಸರಾ ಮಂಟಪ ಸಮಿತಿಯ ಅಧ್ಯಕ್ಷರಾಗಿ ವಿಘ್ನೇಶ್ ಸಿ.ಯು. ಆಯ್ಕೆಗೊಂಡರು.
ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಅದ್ದೂರಿ ದಸರಾ ಆಚರಣೆಯ ಕುರಿತು ಚರ್ಚಿಸಿದರು. ಇದೇ ಸಂದರ್ಭ ಮಡಿಕೇರಿ ನಗರ ಸಂಚಾರಿ ಪೊಲೀಸ್ ಠಾಣೆಯಿಂದ ಕುಶಾನಗರಕ್ಕೆ ವರ್ಗಾವಣೆಗೊಂಡ ಎಎಸ್‌ಐ ನಂದ ಐ.ಪಿ ಅವರನ್ನು ಸಮಿತಿ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು. ೪೯ನೇ ವರ್ಷದ ದಸರಾ ಆಚರಣೆಯ ಸಂಭ್ರಮದಲ್ಲಿರುವ ಕೋಟೆ ಶ್ರೀ ಮಹಾಗಣಪತಿ ದಸರಾ ಸಮಿತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ದಸರಾ ವಂತಿಗೆ ಸಂಗ್ರಹದ ಪುಸ್ತಕವನ್ನು ಬಿಡುಗಡೆಗೊಳಿಸಿತು.